‘ಮದ್ಯ ಕಳ್ಳತನ’ ದೂರು ಕೊಟ್ಟು ತಗ್ಲಾಕ್ಕೊಂಡ ಬಾರ್ ಮಾಲೀಕನ ಸುಪುತ್ರ!

|

Updated on: May 04, 2020 | 4:39 PM

ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಬಾರ್​ನಲ್ಲಿ ಕಳ್ಳತನ ಪ್ರಕರಣ ಸಂಬಂಧ ಬಾರ್ ಮಾಲೀಕನ ಮಗ ದೀಪಕ್ ಸೇರಿ ಐವರು ಆರೋಪಿಗಳನ್ನು ನಂದಿ ಹಿಲ್ಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬಾರ್​ನ ಗೋಡೆ ಕೊರೆದು 80 ಸಾವಿರ ರೂಪಾಯಿ ಮೌಲ್ಯದ ಮದ್ಯ ಕಳ್ಳತನವಾಗಿತ್ತು. ಸ್ವತಃ ಬಾರ್ ಮಾಲೀಕನ ಮಗನೇ ಸುಪಾರಿ ನೀಡಿ ಬಾರ್​ನಲ್ಲಿ ಮದ್ಯ ಕಳ್ಳತನ ಮಾಡಿಸಿದ್ದ. ನಂತರ ಏನೂ ಗೊತ್ತಿಲ್ಲದಂತೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಮಾಲೀಕನ ಮಗನೇ ಸುಪಾರಿ […]

‘ಮದ್ಯ ಕಳ್ಳತನ’ ದೂರು ಕೊಟ್ಟು ತಗ್ಲಾಕ್ಕೊಂಡ ಬಾರ್ ಮಾಲೀಕನ ಸುಪುತ್ರ!
Follow us on

ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಬಾರ್​ನಲ್ಲಿ ಕಳ್ಳತನ ಪ್ರಕರಣ ಸಂಬಂಧ ಬಾರ್ ಮಾಲೀಕನ ಮಗ ದೀಪಕ್ ಸೇರಿ ಐವರು ಆರೋಪಿಗಳನ್ನು ನಂದಿ ಹಿಲ್ಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬಾರ್​ನ ಗೋಡೆ ಕೊರೆದು 80 ಸಾವಿರ ರೂಪಾಯಿ ಮೌಲ್ಯದ ಮದ್ಯ ಕಳ್ಳತನವಾಗಿತ್ತು.

ಸ್ವತಃ ಬಾರ್ ಮಾಲೀಕನ ಮಗನೇ ಸುಪಾರಿ ನೀಡಿ ಬಾರ್​ನಲ್ಲಿ ಮದ್ಯ ಕಳ್ಳತನ ಮಾಡಿಸಿದ್ದ. ನಂತರ ಏನೂ ಗೊತ್ತಿಲ್ಲದಂತೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಮಾಲೀಕನ ಮಗನೇ ಸುಪಾರಿ ನೀಡಿ ಕಳ್ಳತನ ಮಾಡಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.