Bengaluru News: ವೈಯಾಲಿಕಾವಲ್​​ನಲ್ಲಿ ಗೃಹ ಪ್ರವೇಶ ಸಮಾರಂಭದಲ್ಲಿ ತೃತೀಯಲಿಂಗಿಗಳಿಂದ ದಾಂದಲೆ

ಸಮಾರಂಭದಲ್ಲಿ ಅತಿಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಘಟನೆಯನ್ನು ವಿಡಿಯೋ ಮಾಡಿದ ಅತಿಥಿಯನ್ನೂ ನಿಂದಿಸಿದ್ದಾರೆ. ಬಾಯಿಗೆ ಬಂದಂತೆ ಬೈದು, ಕುಟುಂಬಸ್ಥರ ಮುಂದೆ ಅಸಭ್ಯ ವರ್ತನೆ ಮಾಡಿ ದಾಂದಲೆ ನಡೆಸಿದ್ದಾರೆ.

Bengaluru News: ವೈಯಾಲಿಕಾವಲ್​​ನಲ್ಲಿ ಗೃಹ ಪ್ರವೇಶ ಸಮಾರಂಭದಲ್ಲಿ ತೃತೀಯಲಿಂಗಿಗಳಿಂದ ದಾಂದಲೆ
ವೈಯಾಲಿಕಾವಲ್​​ನಲ್ಲಿ ಗೃಹ ಪ್ರವೇಶ ಸಮಾರಂಭದಲ್ಲಿ ತೃತೀಯಲಿಂಗಿಗಳಿಂದ ದಾಂದಲೆ
Edited By:

Updated on: Jun 28, 2023 | 9:49 PM

ಬೆಂಗಳೂರು: ಗೃಹಪ್ರವೇಶ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ ತೃತೀಯಲಿಂಗಿಗಳು (Transgenders) ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯ ಮಾಲಿಕರು ಗೃಹ ಪ್ರವೇಶದ ಸಂದರ್ಭದಲ್ಲಿ ತೃತೀಯಲಿಂಗಿಗಳನ್ನು ಊಟಕ್ಕೆ ಕರೆದಿದ್ದರು ಎನ್ನಲಾಗಿದೆ. ತೃತೀಯಲಿಂಗಿಗಳನ್ನು ಸಾಮಾನ್ಯವಾಗಿ ಗೃಹಪ್ರವೇಶ ಮತ್ತು ಶಿಶುಗಳಿಗೆ ನಾಮಕರಣ ಸಮಾರಂಭಗಳಂತಹ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ, ಏಕೆಂದರೆ ಅವರು ಅದೃಷ್ಟವನ್ನು ತರುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ.

ಈ ವೇಳೆ ಮೂವರು ತೃತೀಯಲಿಂಗಿಗಳು ಕಾರ್ಯಕ್ರಮಕ್ಕೆ ಹಾಜರಾಗಲು ಮನೆ ಮಾಲೀಕರಿಂದ ಹಣಕ್ಕೆ ಬೇಡಿಕೆಯಿಡಲು ಪ್ರಾರಂಭಿಸಿದ್ದಾರೆ. ಮನೆ ಮಾಲೀಕರು ಅವರಿಗೆ 500 ರೂ ನೀಡಿದ್ದರು, ಆದರೆ ತೃತೀಯಲಿಂಗಿಗಳು ತಲಾ 5,000 ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಮನೆ ಮಾಲೀಕರು ಅಂತಿಮವಾಗಿ ಅವರಿಗೆ 5,000 ರೂ ಪಾವತಿಸಲು ಒಪ್ಪಿಕೊಂಡಿದ್ದಾರೆ. ಆದರೆ, ಅಷ್ಟರಲ್ಲಿ ಇನ್ನೂ ಹೆಚ್ಚು ಹಣ ನೀಡಬೇಕೆಂದು ತೃತೀಯಲಿಂಗಿಗಳು ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: Bengaluru Traffic Restrictions: ಬಕ್ರೀದ್ ಪ್ರಯುಕ್ತ ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ; ಇಲ್ಲಿದೆ ವಿವರ

ಅಷ್ಟಕ್ಕೇ ಸುಮ್ಮನಾಗದೆ, ಸಮಾರಂಭದಲ್ಲಿ ಅತಿಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಘಟನೆಯನ್ನು ವಿಡಿಯೋ ಮಾಡಿದ ಅತಿಥಿಯನ್ನೂ ನಿಂದಿಸಿದ್ದಾರೆ. ಬಾಯಿಗೆ ಬಂದಂತೆ ಬೈದು, ಕುಟುಂಬಸ್ಥರ ಮುಂದೆ ಅಸಭ್ಯ ವರ್ತನೆ ಮಾಡಿ ದಾಂದಲೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us