ಬೆಂಗಳೂರು: ನಗರದ ಲಾಂಗ್ ಫೋರ್ಡ್ ರಸ್ತೆಯ ಕ್ರಿಶ್ಚಿಯನ್ ಸೆಮೆಟ್ರಿ ಬಳಿ ರೌಡಿಶೀಟರ್ ದಿನೇಶ್ ಎಂಬ ವ್ಯಕ್ತಿಯ ಕಾಲಿಗೆ ಅಶೋಕ್‌ನಗರ ಠಾಣೆಯ ಇನ್ಸ್‌ಪೆಕ್ಟರ್ ಭರತ್ ಫೈರಿಂಗ್ ನಡೆಸಿದ್ದಾರೆ. ಕೊಲೆ ಪ್ರಕರಣವೊಂದರ ಸಂಬಂಧ ಮಾರಕಾಸ್ತ್ರ ಜಪ್ತಿಗೆ ತೆರಳಿದ್ದ ವೇಳೆ ರೌಡಿಶೀಟರ್ ದಿನೇಶ್ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಭರತ್ ರೌಡಿಶೀಟರ್ ದಿನೇಶ್ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ರೌಡಿಶೀಟರ್ ದಿನೇಶ್ ಹಲ್ಲೆ ಮಾಡಲು ಪ್ರಯತ್ನಿಸಿದ್ದರಿಂದ ಕಾನ್ಸ್‌ಟೇಬಲ್ ವಸಂತ್ ಎಂಬುವವರಿಗೆ ಗಾಯವಾಗಿದೆ. ತದ ನಂತರ ಕಾನ್ಸ್‌ಟೇಬಲ್ ವಸಂತ್ ಮತ್ತು ರೌಡಿಶೀಟರ್ ದಿನೇಶ್ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮಾರ್ಚ್ 20 ರಂದು ರವಿವರ್ಮ ಎಂಬ ವ್ಯಕ್ತಿಯ ಕೊಲೆ ನಡೆದಿತ್ತು. ಈ ಪ್ರಕರಣದ ಸಂಬಂಧ ಮಾರ್ಚ್ 24ರಂದು ಆರು ಆರೋಪಿಗಳನ್ನು ಅಶೋಕನಗರ ಪೊಲೀಸರು ಬಂಧಿಸಿದ್ದರು. ಇವರಲ್ಲಿ ದಿನೇಶ್ ಎಂಬಾತನನ್ನು A1 ಆರೋಪಿಯನ್ನಾಗಿಸಲಾಗಿತ್ತು. ಪ್ರಕರಣದ ವಿಚಾರಣೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಸಿಟರ್ ದಿನೇಶ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
(Bengaluru Police fired at Rowdy Sheeters leg when he attempt to assault)