ಭೂಪಾಲ್: ಭೂಪಾಲ್‌ನಲ್ಲಿ ಎರಡು ದಿನಗಳ ಹೆಣ್ಣು ಮಗುವನ್ನು ರೈಲ್ವೆ ಹಳಿಯ ಮೇಲೆ ಎಸೆಯಲಾಗಿದೆ. ಇದರ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಮಗುವನ್ನು ಎಸೆದ ಆರೋಪದ ಮೇಲೆ ಆರೋಪಿಯಾಗಿರುವ ನರ್ಸ್ ಆಸ್ಮಾನ್ ಖಾನ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಅಪ್ರಾಪ್ತ ಬಾಲಕಿಗೆ ಮಗು ಜನಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಆಕೆಯ ಮೇಲೆ ಮಾತ್ರವಲ್ಲದೆ ಆಕೆಯ ಕುಟುಂಬದ ಸದಸ್ಯರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 93 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿಸಿಟಿವಿ ವಿಡಿಯೋ ಕ್ಲಿಪ್‌ನಲ್ಲಿ ನರ್ಸ್ ಎಂದು ಹೇಳಲಾದ ಮಧ್ಯವಯಸ್ಕ ಮಹಿಳೆಯೊಬ್ಬರು ಹಳದಿ ಮತ್ತು ನೀಲಿ ಬಣ್ಣದ ಬ್ಯಾಗ್ ಅನ್ನು ಹೊತ್ತೊಯ್ಯುತ್ತಿರುವುದನ್ನು ನೋಡಬಹುದು. ಇದರಲ್ಲಿ 2 ದಿನದ ಹೆಣ್ಣು ಮಗುವನ್ನು ಇಟ್ಟು, ಆ ಬ್ಯಾಗನ್ನು ರೈಲ್ವೆ ಹಳಿಯ ಮೇಲೆ ಎಸೆಯಲಾಗಿತ್ತು. ಆಕೆ ತನ್ನ ಸ್ಕೂಟರ್‌ನಿಂದ ರೈಲ್ವೇ ಟ್ರ್ಯಾಕ್‌ನ ಬಳಿ ಬ್ಯಾಗ್ ಅನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಂತರ ಆಕೆ ಬರಿಗೈಯಲ್ಲಿ ಹಿಂದಿರುಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಇದನ್ನೂ ಓದಿ: ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ಶಾಕಿಂಗ್ ವಿಡಿಯೋ ಇಲ್ಲಿದೆ
ಬುಧವಾರ ಭೋಪಾಲ್‌ನ ಬಾಗ್ ಉಮ್ರಾವ್ ದುಲ್ಹಾದಲ್ಲಿ ಹಳಿಗಳ ಬಳಿ ಮಗುವಿನ ಅಳು ಕೇಳಿದ ಸ್ಥಳೀಯರಿಗೆ ನವಜಾತ ಶಿಶು ಪತ್ತೆಯಾಗಿದೆ. ಶಬ್ದವನ್ನು ಅನುಸರಿಸಿ, ಅವರು ಒಳಗೆ ಹೆಣ್ಣು ಮಗುವಿದ್ದ ಚೀಲವನ್ನು ಕಂಡುಕೊಂಡರು. ಆಕೆಯ ಹೊಕ್ಕುಳಬಳ್ಳಿಯನ್ನು ಇನ್ನೂ ಕತ್ತರಿಸಿರಲಿಲ್ಲ. ತಕ್ಷಣ ಆಕೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
भोपाल : नवजात बच्ची को फेंकते हुए सीसीटीवी फुटेज आया सामने, आरोपी महिला को पुलिस ने पकड़ा, 17 साल की नाबालिग ने बच्ची को दिया था जन्म#Bhopal #NewbornBabyGirl #Crime @CP_Bhopal@MPPoliceDeptt #CCTVFootage #MPNews #PeoplesUpdate pic.twitter.com/bPgdEPNl0a
— Peoples Samachar (@psamachar1) October 10, 2024
ಈ ವಿಷಯ ಗೊತ್ತಾದ ಬಳಿಕ ಆ ಮಗುವನ್ನು ಬುಧವಾರ ಕಮಲಾ ನೆಹರೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಆ ಮಗು ಸಾವನ್ನಪ್ಪಿದೆ. ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗದೆ ಮಗುವನ್ನು ಹೆತ್ತಿದ್ದರಿಂದ ಆ ಯುವತಿ ನರ್ಸ್ ಬಳಿ ಹೇಳಿ ಮಗುವನ್ನು ಬಿಸಾಡಲು ಹೇಳಿದ್ದಾಳೆ ಎನ್ನಲಾಗಿದೆ. ಆಕೆಯ ಕುಟುಂಬವು ಈ ಹೆರಿಗೆಯನ್ನು ಸಮಾಜದಿಂದ ಮರೆಮಾಚಲು ಪ್ರಯತ್ನಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ