
ಉತ್ತರ ಪ್ರದೇಶ: ಗಾಜಿಯಾಬಾದ್ನಲ್ಲಿ (Ghaziabad) ಮಹಿಳೆಯನ್ನು ಐವರು ವ್ಯಕ್ತಿಗಳು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಿ, 2 ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ 4 ಆರೋಪಿಗಳ ಬಂಧನ ಮಾಡಲಾಗಿದೆ. ಮಹಿಳೆಯನ್ನು ಅಪಹರಿಸಿ, ಆಕೆ 4 ದಿನಗಳ ಚಿತ್ರಹಿಂಸೆ ನೀಡಿ. ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ 40 ವರ್ಷದ ಮಹಿಳೆಯ ಮೇಲೆ ಗಾಜಿಯಾಬಾದ್ನಲ್ಲಿ ಐವರು ವ್ಯಕ್ತಿಗಳು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಗಾಜಿಯಾಬಾದ್ನ ಆಶ್ರಮ ರಸ್ತೆಯ ಬಳಿ ಮಹಿಳೆಯೊಬ್ಬರು ಬಿದ್ದಿರುವ ಮಾಹಿತಿ ಪೊಲೀಸರಿಗೆ ಲಭಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಆಸ್ಪತ್ರೆಯಲ್ಲಿ ಆಕೆಯಿಂದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಗಾಜಿಯಾಬಾದ್ನಲ್ಲಿ ದೆಹಲಿಯ ಮಹಿಳೆಯನ್ನು 5 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಕ್ಟೋಬರ್ 18ರಂದು ಆಶ್ರಮ ರಸ್ತೆಯ ಬಳಿ ಮಹಿಳೆಯೊಬ್ಬರು ಮಲಗಿರುವ ಬಗ್ಗೆ ನಂದಗ್ರಾಮ್ ಪೋಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆ ದೆಹಲಿಯ ನಿವಾಸಿಯಾಗಿದ್ದು, ನಂದಗ್ರಾಮ್ನಲ್ಲಿರುವ ತನ್ನ ಸಹೋದರನ ನಿವಾಸಕ್ಕೆ ಬಂದಿದ್ದರು ಎನ್ನಲಾಗಿದೆ.
ತನ್ನ ಮೇಲೆ ಅತ್ಯಾಚಾರ ಎಸಗಿದ ಐವರು ಪುರುಷರ ಬಗ್ಗೆಯೂ ಆ ಮಹಿಳೆಗೆ ತಿಳಿದಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಆ ಮಹಿಳೆಯ ಸಹೋದರ ಆಕೆಯನ್ನು ಗಾಜಿಯಾಬಾದ್ನ ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಹೋದ ನಂತರ ಈ ಘಟನೆ ಸಂಭವಿಸಿದೆ. ನಂತರ ಐವರು ಆಕೆಯನ್ನು ಅಪಹರಿಸಿ ತಮ್ಮ ವಾಹನದಲ್ಲೇ ಅತ್ಯಾಚಾರ ಎಸಗಿದ್ದಾರೆ. ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 11:09 am, Wed, 19 October 22