ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಕಪಾಲಿ ಮೋಹನ್ ಆಪ್ತ ಸಿಸಿಬಿ ಬಲೆಗೆ

|

Updated on: Dec 06, 2020 | 11:13 AM

ಅಕ್ರಮ ಹಣ ವರ್ಗಾವಣೆ ಮತ್ತು ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗರಾಜ ಶೆಟ್ಟಿ ಬಂಧಿತ ಆರೋಪಿ.

ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಕಪಾಲಿ ಮೋಹನ್ ಆಪ್ತ ಸಿಸಿಬಿ ಬಲೆಗೆ
ನಾಗರಾಜ ಶೆಟ್ಟಿ
Follow us on

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಮತ್ತು ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗರಾಜ ಶೆಟ್ಟಿ ಬಂಧಿತ ಆರೋಪಿ.

ಅಧಿಕ ಬಡ್ಡಿಗಾಗಿ ಕಿರುಕುಳ ನೀಡುತ್ತಿರುವುದಾಗಿ ನಾಗರಾಜ ಶೆಟ್ಟಿ ವಿರುದ್ಧ ಸಿಸಿಬಿಗೆ ಹಲವು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವೈಯಾಲಿಕಾವಲ್‌ನ ನಾಗರಾಜ ಶೆಟ್ಟಿಯನ್ನು ಬಂಧಿಸಿದ್ದಾರೆ. ಹಾಗೂ ಸಾಲ ಪಡೆದವರಿಂದ ಪಡೆದಿದ್ದ ದಾಖಲೆಗಳನ್ನೂ ವಶಕ್ಕೆ ಪಡೆಯಲಾಗಿದೆ. 22 ಲಕ್ಷ ನಗದು, 164 ಚೆಕ್, 84 ಪ್ರಾಮಿಸರಿ ನೋಟ್ ಸೇರಿದಂತೆ ಆಸ್ತಿ ದಾಖಲೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಪಾಲಿ ಮೋಹನ್ ಆಪ್ತ ನಾಗರಾಜ ಶೆಟ್ಟಿ:
ಮೂಲತಃ ಶಿವಮೊಗ್ಗದ ನಾಗರಾಜ ಶೆಟ್ಟಿ ವೈಯಾಲಿಕಾವಲ್​ನಲ್ಲಿ ಬಾಲಾಜಿ ಫೈನಾನ್ಸ್ ನಡೆಸುತಿದ್ದ. ಈತ ಮೃತ ಕಪಾಲಿ ಮೋಹನ್ ಆಪ್ತ. ವೈಯಾಲಿಕಾವಲ್, ಮಲ್ಲೇಶ್ವರಂ ಸುತ್ತಮುತ್ತಲಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಸಾಲ ನೀಡಿದ್ದ. ದಿನದ ಲೆಕ್ಕದಲ್ಲಿ ಹೆಚ್ಚು ಬಡ್ಡಿ ವಸೂಲಿ ಮಾಡುತಿದ್ದ. ಒಂದು ವರ್ಷಕ್ಕೆ ಪಡೆದ ಸಾಲಕ್ಕೆ ಸುಮಾರು 60% ರಷ್ಟು ಬಡ್ಡಿ ಪಡೆಯುತಿದ್ದ. ಅಲ್ಲದೆ ಕನ್ನಡದ ಕೆಲ ಸಿನಿಮಾದಲ್ಲೂ ನಾಗರಾಜದ ಶೆಟ್ಟಿ ನಟಿಸಿದ್ದಾನೆ. ಇನ್ನು ಬಡ್ಡಿ ದಂಧೆಕೋರರ ವಿರುದ್ಧ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದೆ. ಈತನ ಬಗ್ಗೆ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.

Published On - 9:07 am, Sun, 6 December 20