ನವದೆಹಲಿ: ಕೊರೊನಾದಿಂದಾಗಿ ಒಂದೂವರೆ ವರ್ಷದಿಂದ ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿತ್ತು. ಆನ್ಲೈನ್ನಲ್ಲಿ ಪಾಠ ನಡೆಸಿ, ಕೆಲವು ತರಗತಿಗೆ ಪರೀಕ್ಷೆಯೂ ಇಲ್ಲದೆ ಈ ಬಾರಿ ಪಾಸ್ ಮಾಡಲಾಗಿತ್ತು. ಈಗಾಗಲೇ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಶುರು ಮಾಡಲಾಗಿದೆ. ಹೀಗೆ ಉತ್ತರ ಪ್ರದೇಶದಲ್ಲಿ ಕೂಡ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ಈ ಕಾಲೇಜಿಗೆ ಬಂದ 17 ವರ್ಷದ ಬಾಲಕನೊಬ್ಬ ಯೂನಿಫಾರ್ಮ್ ಧರಿಸಿಲ್ಲ ಎಂಬ ಕಾರಣಕ್ಕೆ ಆನಿಗೆ ಪ್ರಿನ್ಸಿಪಾಲ್ ಬೈದಿದ್ದಾರೆ. ಅದರಿಂದ ಕೋಪಗೊಂಡ ಆ ವಿದ್ಯಾರ್ಥಿ ಪ್ರಿನ್ಸಿಪಾಲ್ ತಲೆಗೆ ಪಿಸ್ತೂಲ್ ಇಟ್ಟಿದ್ದಾನೆ.
ಸಮವಸ್ತ್ರ ಧರಿಸಿಲ್ಲ ಎಂದು ಬೈದಿದ್ದಕ್ಕೆ ಪ್ರಿನ್ಸಿಪಾಲ್ ಹಣೆಗೇ ಗನ್ ಇಟ್ಟ 17 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಭಗುವಾಲದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಕಾಲೇಜಿನ ಪ್ರಿನ್ಸಿಪಾಲ್ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕಾಲೇಜು ಶುರುವಾಗಿದ್ದರಿಂದ ಎಲ್ಲ ತರಗತಿಗಳಿಗೂ ಭೇಟಿ ನೀಡುತ್ತಿದ್ದೆವು. ಆಗ ಅಲ್ಲಿದ್ದ ಬಾಲಕ ಯೂನಿಫಾರ್ಮ್ ಧರಿಸಿರಲಿಲ್ಲ. ಮುಂದಿನ ತರಗತಿಗೆ ಸಮವಸ್ತ್ರ ಧರಿಸದೆ ಬರುವಂತಿಲ್ಲ ಎಂದು ಆತನಿಗೆ ಎಚ್ಚರಿಕೆ ನೀಡಿದ್ದೆ. ಸ್ವಲ್ಪ ಹೊತ್ತಾದ ನಂತರ ಸ್ಟಾಫ್ ರೂಮಿಗೆ ಬಂದ ಆ ಬಾಲಕ ನನ್ನ ಹಣೆಗೆ ರಿವಾಲ್ವರ್ ಇಟ್ಟು, ಮನಬಂದಂತೆ ಬೈಯತೊಡಗಿದ. ಗಲಾಟೆ ಕೆಳಿ ಓಡಿಬಂದ ಶಿಕ್ಷಕರು ಆತನ ಕೈಯಿಂದ ಪಿಸ್ತೂಲ್ ಕಿತ್ತುಕೊಂಡರು. ಜನ ಸೇರಿದ್ದನ್ನು ನೋಡಿ ಗಾಬರಿಯಾದ ಆತ ಓಡಿ ಹೋದ. ಆತನನ್ನು ಹಿಂಬಾಲಿಸಿದ ಶಾಲಾ ಸಿಬ್ಬಂದಿ ಆತನನ್ನು ಹಿಡಿದುಕೊಂಡು ಬಂದರು ಎಂದು ತಿಳಿಸಿದ್ದಾರೆ.
ಪೊಲೀಸರ ತನಿಖೆಯ ಮಾಹಿತಿ ಪ್ರಕಾರ, ಅ ಬಾಲಕ ಆ ಶಾಲೆಯವನಲ್ಲ. ಹೊರಗಿನವನಾದ ಆತ ಬೇರೆ ವಿದ್ಯಾರ್ಥಿಗಳ ಜೊತೆ ಕ್ಲಾಸ್ಗೆ ಬಂದು ಕುಳಿತಿದ್ದ. ಆತನ ಕೈಗೆ ಹೇಗೆ ಪಿಸ್ತೂಲ್ ಸಿಕ್ಕಿತು ಎಂಬುದು ಇನ್ನೂ ಗೊತ್ತಾಗಿಲ್ಲ.
ಇದನ್ನೂ ಓದಿ: Crime News: ತ್ರಿಶೂಲದಿಂದ ಇರಿದು ಅರ್ಚಕನ ಬರ್ಬರ ಹತ್ಯೆ; ದೇವಸ್ಥಾನದಲ್ಲಿ ಅರೆ ಸುಟ್ಟ ಶವ ಪತ್ತೆ
(Crime News: 17 Year Old Boy Puts Gun On Principal Head After Getting Scolded For Not Wearing Uniform in College)