Crime News: ಕೇವಲ 400 ರೂ.ಗಾಗಿ ಪ್ರೇಯಸಿಯ ಮೂಗನ್ನೇ ಕತ್ತರಿಸಿದ ಮಹರಾಯ!

Shocking News: ಸೋನುವಿನ ಗಂಡ 8 ವರ್ಷದ ಹಿಂದೆ ಸಾವನ್ನಪ್ಪಿದ್ದ. ಆಗಿನಿಂದ ಹೊಲದ ಕೆಲಸ ಮಾಡಿಕೊಂಡಿದ್ದ ಸೋನು ಬಳಿಕ ಲವ್ ಕುಶ್ ಪಟೇಲ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು.

Crime News: ಕೇವಲ 400 ರೂ.ಗಾಗಿ ಪ್ರೇಯಸಿಯ ಮೂಗನ್ನೇ ಕತ್ತರಿಸಿದ ಮಹರಾಯ!
ಸಾಂದರ್ಭಿಕ ಚಿತ್ರ
Edited By:

Updated on: Dec 29, 2021 | 5:31 PM

ಖಾಂಡ್ವಾ: ಕೋಪದ ಕೈಗೆ ಬುದ್ಧಿಯನ್ನು ಕೊಡಬಾರದು ಎಂಬ ಮಾತೊಂದಿದೆ. ಈ ಗಾದೆ ಹಳೆಯದಾದರೂ ಇಂದಿಗೂ ಅನ್ವಯವಾಗುತ್ತದೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬರು 35 ವರ್ಷದ ಮಹಿಳೆಯೊಂದಿಗೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಆಲ್ಕೋಹಾಲ್ ಖರೀದಿಸಲು ಆಕೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯ ಮೂಗನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಶನಿವಾರ ಕೊಡಲಿಯಿಂದ ಬೆಳಗ್ಗೆ ತನ್ನ 35 ವರ್ಷದ ಗೆಳತಿಯ ಮೂಗನ್ನು ಕತ್ತರಿಸಿದ್ದಾನೆ. ಆರೋಪಿ ಲವ್ ಕುಶ್ ಪಟೇಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಪಟೇಲ್ ಕಳೆದ ಎರಡು ವರ್ಷಗಳಿಂದ ಸೋನು ಜೊತೆ ಲಿವ್ ಇನ್ ರಿಲೇಶನ್ ಶಿಪ್​ನಲ್ಲಿದ್ದರು. ಪೊಲೀಸ್ ಅಧಿಕಾರಿಯ ಪ್ರಕಾರ, ಶನಿವಾರ ಬೆಳಗ್ಗೆ ಆತ ಮದ್ಯ ಖರೀದಿಸಲು 400 ರೂ. ನೀಡುವಂತೆ ಕೇಳಿದ್ದ. ಆದರೆ, ಆಕೆ ಹಣ ನೀಡಲು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಆತ ಅಲ್ಲೇ ಬಿದ್ದಿದ್ದ ಕೊಡಲಿಯನ್ನು ಎತ್ತಿಕೊಂಡು ಸೋನುವಿನ ಮೂಗನ್ನು ಕತ್ತರಿಸಿದ್ದಾನೆ. ಆಕೆಯ ಕೂಗು ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಷ್ಟರಲ್ಲಿ ಪಟೇಲ್ ಓಡಿ ಹೋಗಿದ್ದಾನೆ. ಸೋನುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಆಕೆಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪಟೇಲ್‌ಗಾಗಿ ಹುಡುಕಾಟ ನಡೆಸಿ, ಸಂಜೆಯ ವೇಳೆಗೆ ಅವರನ್ನು ಬಂಧಿಸಲಾಯಿತು. ಭಾನುವಾರ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಳಿಕ ಆತನನ್ನು ಜೈಲಿಗೆ ಕಳುಹಿಸಲಾಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸೋನುವಿನ ಗಂಡ 8 ವರ್ಷದ ಹಿಂದೆ ಸಾವನ್ನಪ್ಪಿದ್ದ. ಆಗಿನಿಂದ ಹೊಲದ ಕೆಲಸ ಮಾಡಿಕೊಂಡಿದ್ದ ಸೋನು ಬಳಿಕ ಲವ್ ಕುಶ್ ಪಟೇಲ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಲವ್ ಕುಶ್ ಪಟೇಲ್ ಸದಾ ಕುಡಿದು ಮನೆಗೆ ಬರುತ್ತಿದ್ದ. ಪಟೇಲ್ ಕಳೆದ ಎರಡು ವರ್ಷಗಳಿಂದ ಸೋನು ಜೊತೆ ಲಿವ್ ಇನ್ ರಿಲೇಶನ್ ಶಿಪ್​ನಲ್ಲಿದ್ದ. ಶನಿವಾರ ಬೆಳಗ್ಗೆ ಆತ ಮದ್ಯ ಖರೀದಿಸಲು 400 ರೂ. ನೀಡುವಂತೆ ಕೇಳಿದ್ದ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಆತ ಅಲ್ಲೇ ಬಿದ್ದಿದ್ದ ಕೊಡಲಿಯನ್ನು ಎತ್ತಿಕೊಂಡು ಸೋನುವಿನ ಮೂಗನ್ನು ಕತ್ತರಿಸಿದ್ದಾನೆ. ಆಕೆಯ ಕೂಗು ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂಗು ಕತ್ತರಿಸಿದ್ದರಿಂದ ಮಹಿಳೆಯ ಮುಖದಿಂದ ರಕ್ತ ಸೋರುತ್ತಿತ್ತು. ರಕ್ತಸಿಕ್ತವಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತನ್ನ ಪ್ರಿಯಕರನ ವಿರುದ್ಧ ಸೋನು ದೂರು ನೀಡಿದ್ದು, ಆ ದೂರಿನ ಆಧಾರದಲ್ಲಿ ಪಟೇಲ್​ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Crime News: ಹಸುಗೂಸಿನ ಮೈಗೆ ಬರೆ ಹಾಕಿ ಚಿತ್ರಹಿಂಸೆ ನೀಡಿದ ಬಾಲಕಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Shocking News: ಯುವತಿಯಿಂದಲೇ ಸಮಾಧಿ ತೋಡಿಸಿ, ಆಕೆಯನ್ನು ಕೊಂದು ಹೂತು ಹಾಕಿದ ಕಿರಾತಕರು!

Published On - 5:22 pm, Wed, 29 December 21

Web contact

TV9 Kannada

Read More
Follow Us