ಚೆನ್ನೈ: ಬೆಂಗಳೂರು-ಪುದುಚೇರಿ ಹೆದ್ದಾರಿ ಬಳಿ ತಮಿಳುನಾಡಿನ ಕಾಂಚೀಪುರಂನಲ್ಲಿ (Kanchipuram) 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಬಾಯ್ಫ್ರೆಂಡ್ ಎದುರಲ್ಲೇ ಆಕೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಗುರುವಾರ ಸಂಜೆ 7 ಗಂಟೆ ವೇಳೆಗೆ ಆ ಯುವತಿ ಮತ್ತು ಆಕೆಯ ಬಾಯ್ಫ್ರೆಂಡ್ ಖಾಸಗಿ ಕಾಲೇಜಿನ ಬಳಿ ಮಾತನಾಡುತ್ತಿದ್ದಾಗ 5 ಜನರ ಗುಂಪು ಅವರನ್ನು ಸುತ್ತುವರೆದು, ಆ ಯುವಕನಿಗೆ ಚಾಕು ತೋರಿಸಿ ಹೆದರಿಸಿತ್ತು. ನಂತರ ಅವರು ಆ ಯುವತಿಯ ಮೇಲೆ ಒಬ್ಬರಾದ ನಂತರ ಒಬ್ಬರು ಅತ್ಯಾಚಾರ ನಡೆಸಿದ್ದಾರೆ.
ಆ ಯುವತಿ ಜೋರಾಗಿ ಕಿರುಚಿಕೊಂಡಾಗ ಗಲಾಟೆ ಮಾಡಿದರೆ ಅಲ್ಲೇ ಕೊಲೆ ಮಾಡಿ, ಹೂತುಹಾಕುವುದಾಗಿ ಅವರು ಹೆದರಿಸಿದ್ದಾರೆ. ಇದರಿಂದ ಆಕೆಯ ಬಾಯ್ಫ್ರೆಂಡ್ ಕೂಡ ಅಸಹಾಯಕನಾಗಿ ನಿಂತಿದ್ದ. ಬಳಿಕ ಆ ಯುವತಿ ಮತ್ತು ಆಕೆಯ ಸ್ನೇಹಿತ ತಪ್ಪಿಸಿಕೊಂಡು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಬಳಿಕ ಆ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಯ ಮೇಲೆ ಗುಂಡು ಹಾರಿಸಿದ ಬಾಲಕಿ
ಆ ಕಾಲೇಜಿನ ಬಳಿ ಕತ್ತಲೆ ಇದ್ದುದರಿಂದ ಆಕೆ ಹಾಗೂ ಆಕೆಯ ಸ್ನೇಹಿತ ಯಾರ ಕಣ್ಣಿಗೂ ಬಿದ್ದಿಲ್ಲ. ಆದರೆ, ಆರೋಪಿಗಳಲ್ಲಿ ಒಬ್ಬನ ಹೆಸರು ವಿಮಲ್ ಎಂದು ಆ ಯುವತಿಗೆ ಗೊತ್ತಾಗಿದೆ. ಕಂಠಪೂರ್ತಿ ಕುಡಿದಿದ್ದ ಅವರೆಲ್ಲರೂ ಮಾಸ್ಕ್ ಹಾಕಿಕೊಂಡಿದ್ದರಿಂದ ಅವರ ಮುಖವನ್ನು ಆ ಯುವತಿಗೆ ಗುರುತಿಸಲು ಸಾಧ್ಯವಾಗಿಲ್ಲ.
ನಂತರ ಪೊಲೀಸರು ವಿಮಲ್ನನ್ನು ವಿಪಡು ಗ್ರಾಮದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ವಿಮಲ್ ಮೂಲಕ ತಮಿಳುನಾಡು ಪೊಲೀಸರು ಇತರ ನಾಲ್ವರನ್ನು ಮಣಿಕಂದನ್, ಶಿವಕುಮಾರ್, ವಿಘ್ನೇಶ್ ಮತ್ತು ತೆನ್ನರಸು ಎಂದು ಗುರುತಿಸಿದ್ದಾರೆ. ಈ ಎಲ್ಲಾ ಐವರು ಆರೋಪಿಗಳ ವಿರುದ್ಧ ಅತ್ಯಾಚಾರ ಆರೋಪಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.