ಮನೆಯಲ್ಲಿ ಸಿಲಿಂಡರ್ ಸ್ಫೋಟ: ವೃದ್ಧನಿಗೆ ಗಂಭೀರ ಗಾಯ

| Updated By: Lakshmi Hegde

Updated on: Dec 26, 2020 | 12:29 PM

ಅಡುಗೆ ಮನೆಯಲ್ಲಿ ಸಿಲಿಂಡರ್ ಪೈಪ್​ನಿಂದ ಅನಿಲ ಲೀಕೇಜ್ ಆದ ಪರಿಣಾಮ ಸ್ಪೋಟವಾಗಿದೆ. ಸ್ಪೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಹಾನಿಯಾಗಿದೆ.

ಮನೆಯಲ್ಲಿ ಸಿಲಿಂಡರ್ ಸ್ಫೋಟ: ವೃದ್ಧನಿಗೆ ಗಂಭೀರ ಗಾಯ
ಸಿಲೆಂಡರ್ ಸ್ಫೋಟ
Follow us on

ನೆಲಮಂಗಲ: ತಾಲೂಕಿನ ಓಬಳಾಪುರ ಗ್ರಾಮದ ಮನೆಯೊಂದರಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್  ಸ್ಫೋಟ ವಾಗಿದ್ದು, 65 ವರ್ಷದ ವೃದ್ಧ ಗಂಗಬೈರಯ್ಯ ಗಾಯಗೊಂಡಿದ್ದಾರೆ. ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಡುಗೆ ಮನೆಯಲ್ಲಿ ಸಿಲಿಂಡರ್ ಪೈಪ್​ನಿಂದ ಅನಿಲ ಲೀಕೇಜ್ ಆದ ಪರಿಣಾಮ ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು, ದಿನಸಿ ಪದಾರ್ಥಗಳು ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿ ಒಬ್ಬರೇ ಇದ್ದುದರಿಂದ ಭಾರಿ ದುರಂತ ತಪ್ಪಿದ್ದು, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ ‘ಜಾಗ್ವಾರ್’ ಕಾರು, ಎಲ್ಲಿ?