ಮ್ಯೂಸಿಕ್ ಬ್ಯಾಂಡ್ ಇಲ್ಲದೆ ಯಾವುದೇ ಶುಭಾರಂಭವೂ ಪುರ್ಣಗೊಳ್ಳುವುದಿಲ್ಲ, ಅದರಲ್ಲೂ ಮದುವೆ ಮನೆಯೆಂದ ಮೇಲೆ ಮ್ಯೂಸಿಕ್ ಬ್ಯಾಂಡ್ ಇಲ್ಲದಿದ್ದರೆ ಆಗುತ್ತಾ. ಆದರೆ ಮದುವೆ ಮನೆಯ ಖುಷಿಯನ್ನು ಹೆಚ್ಚು ಮಾಡಲು ಬಂದವರು ಕೆಲಸಗಾರನೊಬ್ಬನ ಹತ್ಯೆ ಮಾಡಿ, ಸ್ಮಶಾನ ಮೌನಕ್ಕೆ ದೂಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಮದುವೆ ಮನೆಯಲ್ಲಿ ಊಟದ ತಟ್ಟೆಯ ಲಭ್ಯತೆ ಕುರಿತು ವಾಗ್ವಾದ ಶುರುವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ದೆಹಲಿಯ ಪ್ರಶಾಂತ್ ವಿಹಾರದಲ್ಲಿ ಘಟನೆ ನಡೆದಿದೆ, ಡಿಜೆ ಸೇರಿದಂತೆ ಮ್ಯೂಸಿಕ್ ಬ್ಯಾಂಡ್‌ನ ಸದಸ್ಯರು ಸಂದೀಪ್ ಸಿಂಗ್ ಅವರ ಬಳಿ ಊಟಕ್ಕೆ ತಟ್ಟೆಗಳನ್ನು ಕೇಳಿದರು.
ಸ್ವಚ್ಛಗೊಳಿಸಲಾಗುತ್ತಿದೆ ಮತ್ತು ಸ್ವಲ್ಪ ಸಮಯದ ನಂತರ ಅವು ಲಭ್ಯವಾಗುತ್ತವೆ ಎಂದು ಅವರು ಹೇಳಿದರು. ವಿಳಂಬದಿಂದ ಕೋಪಗೊಂಡ ಇಬ್ಬರು ಬ್ಯಾಂಡ್ ಸದಸ್ಯರು ಸಂದೀಪ್ ಅವರನ್ನು ಪ್ಲಾಸ್ಟಿಕ್ ಕ್ರೇಟ್‌ನಿಂದ ಥಳಿಸಿದ್ದಾರೆ.
ಆತನನ್ನು ಸಹೋದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ, ಇಬ್ಬರು ನಾಪತ್ತೆಯಾಗಿದ್ದು, ಶೀಘ್ರ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ