ವ್ಯಕ್ತಿಯೊಬ್ಬ ತನ್ನ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆತ ಆ ಮಹಿಳೆಯನ್ನು 70 ಸಾವಿರಕೊಟ್ಟು ಖರೀದಿಸಿದ್ದ, ಆಕೆಯ ನಡವಳಿಕೆ ಆತನಿಗೆ ಇಷ್ಟವಾಗದೆ ಆಕೆಯನ್ನು ಹತ್ಯೆ ಮಾಡಿ ಶವವನ್ನು ನೈಋತ್ಯ ದೆಹಲಿಯ ಫತೇಪುರ್ ಬೆರಿಯ ಅರಣ್ಯ ಪ್ರದೇಶದಲ್ಲಿ ಎಸೆದಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಆರೋಪಿ ಪತಿ ಧರಂವೀರ್ ಮತ್ತು ಕೊಲೆಗೆ ಸಹಾಯ ಮಾಡಿದ ಅರುಮ್ ಮತ್ತು ಸತ್ಯವಾನ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತೇಪುರ್ ಬೇರಿಯ ಝೀಲ್ ಖುರ್ದ್ ಗಡಿಯ ಬಳಿಯ ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾದ ಬಳಿಕ ಸ್ಥಳೀಯರು ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಪಡಿಸಿಕೊಂಡರು ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ತಿಳಿಸಿದ್ದಾರೆ. ಅಲ್ಲಿ ಸುತ್ತಮುತ್ತಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಧ್ಯರಾತ್ರಿ 1.30ರ ಸುಮಾರಿಗೆ ಆಟೋರಿಕ್ಷಾ ಒಂದು ಓಡಾಡಿರುವುದು ಕಾಣಿಸಿದೆ, ಇಷ್ಟೊತ್ತಿಗೆ ಆ ಆಟೋ ಯಾಕೆ ಅಲ್ಲಿಗೆ ಬಂದಿತ್ತು ಎಂಬುದರ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದ್ದಾರೆ.
ಆಟೋ ನಂಬರ್ ಅನ್ನು ಕಂಡುಹಿಡಿದ ಪೊಲೀಸರು ಅದನ್ನು ಟ್ರ್ಯಾಕ್ ಮಾಡಿದ್ದಾರೆ. ಚಾಲಕ ಛತ್ತರ್‌ಪುರ ನಿವಾಸಿ ಅರುಣ್‌ನನ್ನು ಗಡಾಯಿಪುರ ಬ್ಯಾಂಡ್ ರಸ್ತೆ ಬಳಿ ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಮೃತರನ್ನು ಧರ್ಮವೀರ್ ಅವರ ಪತ್ನಿ ಸ್ವೀಟಿ ಎಂದು ಅರುಣ್ ಹೇಳಿದ್ದಾರೆ. ತಾನು ಮತ್ತು ಅವನ ಸೋದರ ಮಾವಂದಿರಾದ ನಂಗ್ಲೋಯಿ ನಿವಾಸಿಗಳಾದ ಧರಂವೀರ್ ಮತ್ತು ಸತ್ಯವಾನ್ ಅವರು ಹರ್ಯಾಣ ಗಡಿಯಲ್ಲಿ ಸ್ವೀಟಿಯನ್ನು ಕತ್ತು ಹಿಸುಕಿ ಕೊಂದು ಶವವನ್ನು ಕಾಡಿನಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: Video ನೋಡಿ: 8 ಕಿಮೀ ದೋರ ಓಡೋಡಿ ಹತ್ಯೆ ಆರೋಪಿಯ ಪತ್ತೆ ಹಚ್ಚಿದ ದಾವಣಗೆರೆಯ ಸ್ಟಾರ್ ಪೊಲೀಸ್ ಶ್ವಾನ! ಏನಿದರ ವಿಶೇಷ
ಆ ಪ್ರದೇಶದ ಬಗ್ಗೆ ತನಗೆ ತಿಳಿದಿತ್ತು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ ಮತ್ತು ಆರೋಪಿಯು ಅಪರಾಧ ಮತ್ತು ದೇಹವನ್ನು ವಿಲೇವಾರಿ ಮಾಡಲು ಅರಣ್ಯ ಪ್ರದೇಶವನ್ನು ಆರಿಸಿಕೊಂಡಿದ್ದರು. ಎಂದು ಅವರು ಹೇಳಿದರು.
ತನ್ನ ಹೆಂಡತಿಯ ವರ್ತನೆಯಿಂದ ಧರಂವೀರ್ ಬೇಸರಗೊಂಡಿದ್ದರು ಎಂದು ಅರುಣ್ ಹೇಳಿದರು, ಏಕೆಂದರೆ ಆಕೆ ಯಾವುದೇ ಮಾಹಿತಿ ನೀಡದೆ ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದಳು.
ಮಹಿಳೆಗೆ 70,000 ಸಾವಿರ ರೂ. ಪಾವತಿಸಿ ಧರ್ಮವೀರ್ ವಿವಾಹವಾಗಿರುವುದರಿಂದ ಸಂತ್ರಸ್ತೆಯ ಪೋಷಕರ ಬಗ್ಗೆ ಅಥವಾ ಕುಟುಂಬದ ಹಿನ್ನೆಲೆ ಯಾರಿಗೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಸ್ವೀಟಿ ತನ್ನ ಹೆತ್ತವರ ಬಗ್ಗೆ ಅಥವಾ ಕುಟುಂಬದ ಸದಸ್ಯರ ಬಗ್ಗೆ ಎಂದಿಗೂ ಮಾತನಾಡಲಿಲ್ಲ ಎಂದು ಆರೋಪಿ ಹೇಳಿದ್ದಾನೆ. ತಾನು ಬಿಹಾರದ ಪಾಟ್ನಾ ಮೂಲದವಳು ಎಂದು ಮಾತ್ರ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಆರೋಪಿಗಳು ಮಹಿಳೆಯನ್ನು ರೈಲ್ವೇ ನಿಲ್ದಾಣಕ್ಕೆ ಬಿಡುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮಹಿಳೆ ತನ್ನ ಗಂಡನ ಮನೆಯನ್ನು ಬಿಟ್ಟು ತಿಂಗಳುಗಟ್ಟಲೆ ಎಲ್ಲಿಗೆ ಹೋಗುತ್ತಿದ್ದಳು ಎಂಬುದು ಸಹ ಸ್ಪಷ್ಟವಾಗಿಲ್ಲ, ಈ ಸಂಗತಿಗಳನ್ನು ಪರಿಶೀಲಿಸಲಾಗುತ್ತಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:37 am, Thu, 10 August 23