ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಟ್ಯೂಟರ್​ನ ಕತ್ತು ಸೀಳಿ ಹತ್ಯೆ ಮಾಡಿದ ಬಾಲಕ

ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಬಾಲಕನೊಬ್ಬ ಟ್ಯೂಟರ್​ನ ಕತ್ತು ಸೀಳಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು ಬಾಲಕನನ್ನು ಬಂಧಿಸಲಾಗಿದೆ. ಆಗ್ನೇಯ ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಬುಧವಾರ ಈ ಕೊಲೆ ನಡೆದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿರುವ ಅಪ್ರಾಪ್ತ ಬಾಲಕನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಟ್ಯೂಟರ್​ನ ಕತ್ತು ಸೀಳಿ ಹತ್ಯೆ ಮಾಡಿದ ಬಾಲಕ
ಕ್ರೈಂ

Updated on: Sep 03, 2023 | 9:09 AM

ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಬಾಲಕನೊಬ್ಬ ಟ್ಯೂಟರ್​ನ ಕತ್ತು ಸೀಳಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು ಬಾಲಕನನ್ನು ಬಂಧಿಸಲಾಗಿದೆ.
ಆಗ್ನೇಯ ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಬುಧವಾರ ಈ ಕೊಲೆ ನಡೆದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿರುವ ಅಪ್ರಾಪ್ತ ಬಾಲಕನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದು, ಅದನ್ನು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ನಡೆಯುತ್ತಿದೆ. ಮೃತ ಟ್ಯೂಟರ್ ಖಾಸಗಿ ಟ್ಯುಟೋರಿಯಲ್​ನಲ್ಲಿ ಶಿಕ್ಷಕರಾಗಿದ್ದರು, ಜಾಕಿರ್ ನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು, ಅವರು ಅವಿವಾಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮಿಯಾ ನಗರದಲ್ಲಿ ಮಧ್ಯಾಹ್ನ 2.15ರ ಸುಮಾರಿಗೆ ಪೊಲೀಸರು ರಕ್ತಸಿಕ್ತವಾದ ಮೃತದೇಹವನ್ನು ವಶಪಡಿಸಿಕೊಂಡರು. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾಗ ಮೊದಲು ಕೋಟೆಯಲ್ಲಿ ವ್ಯಕ್ತಿ ರಕ್ತದ ಮಡುವಿನಲ್ಲಿದ್ದುದ್ದನ್ನು ಗಮನಿಸಿದರು, ಕುತ್ತಿಗೆಯನ್ನು ಸೀಳಲಾಗಿತ್ತು.

ಮತ್ತಷ್ಟು ಓದಿ: ಶಾಲಾ ಬಸ್​ನಲ್ಲಿ 6 ವರ್ಷದ ಬಾಲಕಿ ಮೇಲೆ ಹಿರಿಯ ವಿದ್ಯಾರ್ಥಿಯಿಂದ ಲೈಂಗಿಕ ಕಿರುಕುಳ

ತನಿಖೆ ವೇಳೆ ಬಾಲಕನೇ ಕೊಲೆ ಮಾಡಿರುವುದು ತಿಳಿದುಬಂದಿದೆ, ಟ್ಯೂಟರ್ ಕೆಲವು ದಿನಗಳ ಹಿಂದೆ ಉದ್ಯಾನದಲ್ಲಿ ಬಾಲಕನನ್ನು ಬೇಟಿಯಾಗಿದ್ದರು. ಬಾಲಕನಿಗೆ ತಿಂಡಿ ತಿನಿಸುಗಳನ್ನು ಕೊಡಿಸಿ, ಮನೆಗೆ ಕರೆದಿದ್ದ, ಮನೆಗೆ ಹೋದಾಗ ಆತ ಕೆಲವು ವಿಡಿಯೋಗಳನ್ನು ರೆಕಾರ್ಡ್​ ಮಾಡಿದ್ದ, ಬಳಿಕ ತಾನು ಹೇಳಿದಂತೆ ಕೇಳದಿದ್ದರೆ ವಿಡಿಯೋವನ್ನು ಬಹಿರಂಗಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದ.

ಬೆದರಿಕೆ ಪದೇ ಪದೇ ಲೈಂಗಿಕ ದೌರ್ಜನ್ಯದಿಂದ ಬೇಸತ್ತ ಬಾಲಕ ಅವಕಾಶ ಸಿಕ್ಕಾಗ ವ್ಯಕ್ತಿಯನ್ನು ಕೊಲ್ಲಬೇಕೆಂದು ನಿರ್ಧರಿಸಿದ್ದ. ಹರಿತವಾದ ಪೇಪರ್​ ಕಟರ್​ನಲ್ಲಿ ಕುತ್ತಿಗೆ ಸೀಳಿದ್ದ, ಬಳಿಕ ವ್ಯಕ್ತಿಯ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ. ಇದೀಗ ಬಾಲಕನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us