ಸ್ಯಾಂಡಲ್‌ವುಡ್​ನಲ್ಲಿ ಡ್ರಗ್ಸ್ ಜಾಲ: ಪ್ರಮುಖ 3 ಆರೋಪಿಗಳೇ ನಾಪತ್ತೆ! ಜಾತಕ ಇಲ್ಲಿದೆ

|

Updated on: Sep 17, 2020 | 5:13 PM

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳೇ ಇನ್ನೂ ಸಿಸಿಬಿಗೆ ಸಿಕ್ಕಿಲ್ಲ. A1 ಶಿವಪ್ರಕಾಶ್ ಚಿಪ್ಪಿ ಅಲಿಯಾಸ್ ಶ್ರೀ, A6 ಆದಿತ್ಯ ಆಳ್ವಾ ಮತ್ತು ಶೇಖ್ ಫಾಝಿಲ್ ಇವರೇ ಆ ಮೂವರು! ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಇವರೆಲ್ಲ ನಾಪತ್ತೆಯಾಗಿದ್ದಾರೆ. ಎಫ್‌ಐಆರ್ ದಾಖಲಾದ ದಿನ ಹಾಸನದಲ್ಲಿದ್ದ ಎ1 ಮೂವರು ಆರೋಪಿಗಳು ಸಿಕ್ಕಿಬಿದ್ದರೆ ಸಿಸಿಬಿ ತನಿಖೆ ಮತ್ತಷ್ಟು ಚುರುಕು ಪಡೆಯಲಿದೆ. ರವಿಶಂಕರ್​ಗೆ ಮೊದಲ ಬಾರಿಗೆ ಡ್ರಗ್ಸ್ ಕೊಟ್ಟಿದ್ದೇ ಶಿವಪ್ರಕಾಶ್. ರವಿಶಂಕರ್​ಗೆ ಹಂತ ಹಂತವಾಗಿ ಡ್ರಗ್ಸ್ ಪೂರೈಸ್ತಿದ್ದ […]

ಸ್ಯಾಂಡಲ್‌ವುಡ್​ನಲ್ಲಿ ಡ್ರಗ್ಸ್ ಜಾಲ: ಪ್ರಮುಖ 3 ಆರೋಪಿಗಳೇ ನಾಪತ್ತೆ! ಜಾತಕ ಇಲ್ಲಿದೆ
Follow us on

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳೇ ಇನ್ನೂ ಸಿಸಿಬಿಗೆ ಸಿಕ್ಕಿಲ್ಲ. A1 ಶಿವಪ್ರಕಾಶ್ ಚಿಪ್ಪಿ ಅಲಿಯಾಸ್ ಶ್ರೀ, A6 ಆದಿತ್ಯ ಆಳ್ವಾ ಮತ್ತು ಶೇಖ್ ಫಾಝಿಲ್ ಇವರೇ ಆ ಮೂವರು! ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಇವರೆಲ್ಲ ನಾಪತ್ತೆಯಾಗಿದ್ದಾರೆ.

ಎಫ್‌ಐಆರ್ ದಾಖಲಾದ ದಿನ ಹಾಸನದಲ್ಲಿದ್ದ ಎ1
ಮೂವರು ಆರೋಪಿಗಳು ಸಿಕ್ಕಿಬಿದ್ದರೆ ಸಿಸಿಬಿ ತನಿಖೆ ಮತ್ತಷ್ಟು ಚುರುಕು ಪಡೆಯಲಿದೆ. ರವಿಶಂಕರ್​ಗೆ ಮೊದಲ ಬಾರಿಗೆ ಡ್ರಗ್ಸ್ ಕೊಟ್ಟಿದ್ದೇ ಶಿವಪ್ರಕಾಶ್. ರವಿಶಂಕರ್​ಗೆ ಹಂತ ಹಂತವಾಗಿ ಡ್ರಗ್ಸ್ ಪೂರೈಸ್ತಿದ್ದ ಶಿವಪ್ರಕಾಶ್. ನಗರದ ವಿವಿಧೆಡೆ ನಡೆಯುತ್ತಿದ್ದ ಡ್ರಗ್ಸ್​ ಪಾರ್ಟಿಗಳಲ್ಲಿ ಚಿಪ್ಪಿ ಭಾಗಿಯಾಗ್ತಿದ್ದ. ನಗರದ ಹೊರವಲಯದ ವೀಕೆಂಡ್​ ಪಾರ್ಟಿ ಹೋಂಗಳಲ್ಲಿಯೂ ಠಳಾಯಿಸುತ್ತಿದ್ದ Shivprakash Chippi.

ಇನ್ನು, ಇದೇ ಎ1 ಶಿವಪ್ರಕಾಶ್ ಎಫ್‌ಐಆರ್ ದಾಖಲಾದ ದಿನ ಹಾಸನದಲ್ಲಿದ್ದ! ಆನಂತರ ತಲೆಮರೆಸಿಕೊಂಡಿರುವ ಆರೋಪಿ ಸಿಕ್ಕಿಬಿದ್ದರೆ ಮತ್ತಷ್ಟು ನಟ-ನಟಿಯರ ಮಾಹಿತಿ ಸಿಗಲಿದೆ ಎಂಬುದು ಸಿಸಿಬಿ ಆಶಾವಾದ.

ಆದಿತ್ಯ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೆ ಸಿದ್ಧತೆ
ಇನ್ನು, ಮತ್ತೊಬ್ಬ ಪ್ರಮುಖ ಆರೋಪಿ ಆದಿತ್ಯ ಆಳ್ವ- ಎ6 ಆಗಿದ್ದು ಆತನೂ ಕೂಡ ನಾಪತ್ತೆಯಾಗಿದ್ದಾನೆ. ಆದಿತ್ಯ ಆಳ್ವ ಹೌಸ್ ಆಫ್ ಲೈಫ್‌ನಲ್ಲಿ ಪಾರ್ಟಿ ಆಯೋಜಿಸ್ತಿದ್ದ. ಪಾರ್ಟಿಗಳಿಗೆ ಆದಿತ್ಯ ಆಳ್ವ ಡ್ರಗ್ಸ್ ತರಿಸಿ ಕೊಡುತ್ತಿದ್ದ ಎಂಬ ಮಾಹಿತಿಯೂ ಇದೆ. ಆದಿತ್ಯಗೆ ಬೆಂಗಳೂರು ಮಾತ್ರವಲ್ಲ, ಮುಂಬೈ ಲಿಂಕ್ ಸಹ ಇದೆ. ಆದಿತ್ಯನೂ ಅಷ್ಟೇ ತನ್ನ ವಿರುದ್ಧ ಪ್ರಕರಣ ದಾಖಲಾದ ದಿನದಿಂದ ನಾಪತ್ತೆಯಾಗಿಬಿಟ್ಟಿದ್ದಾನೆ.

ಮೊದಮೊದಲು ಆದಿತ್ಯ Aditya Alva, ಮುಂಬೈಗೆ ಹೋಗಿದ್ದಾನೆಂದು ಹೇಳಲಾಗಿತ್ತು. ಅದ್ರೆ ಈಗ ಎ6 ಆದಿತ್ಯ ಮುಂಬೈನಲ್ಲಿಯೂ ಇಲ್ಲ. ಮೂಲಗಳ ಪ್ರಕಾರ ಆದಿತ್ಯ ಭಾರತ ಬಿಟ್ಟಿರುವ ಮಾಹಿತಿಯಿದೆ. ಹೀಗಾಗಿ ಆದಿತ್ಯ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೆ ಸಿದ್ಧತೆ ನಡೆದಿದೆ.

ಕೊಲಂಬೊ ಕ್ಯಾಸಿನೋ ಕಿಂಗ್ ಶೇಖ್ ಫಾಝಿಲ್ ಬಲೆಗೆ ಬಿದ್ರೆ ಎಲ್ಲಾ shake shake!
ಹೌದು, ಸಂಜನಾ ಬಂಧನ ಬಳಿಕ ಫಾಝಿಲ್ ಹೆಸರು ಕೇಳಿ ಬಂದಿದೆ. ಡ್ರಗ್ಸ್ ಪ್ರಕರಣದ ವಿಚಾರಣೆಗೆ ಶೇಖ್ ಫಾಝಿಲ್ Shaik Fazil ಅತ್ಯಗತ್ಯವಾಗಿದ್ದಾನೆ. ಶೇಖ್ ಫಾಝಿಲ್ ಸಿಕ್ಕಿಬಿದ್ದರೆ ಸಿಸಿಬಿ ತನಿಖೆ ಬೇರೊಂಧು ಆಯಾಮವನ್ನೇ ಪಡೆಯಲಿದೆ.

ಕ್ಯಾಸಿನೋ ಕಿಂಗ್ ಶೇಖ್ ಫಾಝಿಲ್ ಮೂಲ ಇರುವುದು ಬಿಟಿಎಂ ಲೇಔಟ್​ನಲ್ಲಿ. ಆತ ಕೊಲಂಬೋಗೆ ಕಾಲಿಡುವ ಮುನ್ನ ಇದೇ ಲೇಔಟ್​ನಲ್ಲಿ ರಿಯಲ್​ ಎಸ್ಟೇಟ್ ಮಾಡಿಕೊಂಡಿದ್ದ. ಶೇಕ್ ಸಿಕ್ರೆ ಸ್ಯಾಂಡಲ್ ವುಡ್ ನಂಟಿನ ಜೊತೆಗೆ ರಾಜಕೀಯ ನಂಟಿನ ರಹಸ್ಯ ಸಹ ಹೊರಬರುತ್ತೆ ಎಂಬುದೇ ಕುತೂಹಲದ ಸಂಗತಿ. ಹೀಗಾಗಿ ಶೇಕ್ ಫಾಝಿಲ್, ಸಿಸಿಬಿಗೆ ಅತ್ಯಂತ ಅವಶ್ಯಕನಾಗಿದ್ದಾನೆ. ಈತನನ್ನು ಸರಂಡರ್ ಮಾಡಿಸಲು ಶೇಕ್ ಕುಟುಂಬ ಮುಂದಾಗಿದೆ. ಅದರೆ ಸಿಸಿಬಿ ಪೊಲೀಸರು ನಾವೇ ಅವನನ್ನು ಅರೆಸ್ಟ್ ಮಾಡಿಯೇ ಮಾಡುತ್ತೇವೆ ಎಂದು ಕಾರ್ಯಾಚರಣೆಯಲ್ಲಿದ್ದಾರೆ.

Published On - 10:32 am, Thu, 17 September 20