ಲಾಕ್​ಡೌನ್ ವೇಳೆ ಖತರ್ನಾಕ್ ಐಡಿಯಾ, ಸಿಲಿಂಡರ್ ಕೆಳಗೆ ಬಚ್ಚಿಟ್ಟಿದ್ದ ಕಳ್ಳಭಟ್ಟಿ ವಶ

|

Updated on: Apr 27, 2020 | 4:12 PM

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಖತರ್ನಾಕ್ ಐಡಿಯಾ ಮಾಡಿದ್ದ ಕಳ್ಳಭಟ್ಟಿ ದಂಧೆಕೋರನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಾಗಲಕೋಟೆ ಹೊರವಲಯದ ಹೈಟೆಕ್ ಮನೆಯೊಂದರ ಮೇಲೆ ಅಬಕಾರಿ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಿಲಿಂಡರ್ ಇಡುವ ಜಾಗದ ಕೆಳಗೆ ಕಂದಕ ಮಾಡಿ ಕಳ್ಳಭಟ್ಟಿಯನ್ನು ಮುಚ್ಚಿಟ್ಟಿದ್ದರು. ಆದ್ರೆ, ಮನೆಯೆಲ್ಲಾ ಜಾಲಾಡಿದ ಅಧಿಕಾರಿಗಳು ಕಳ್ಳಭಟ್ಟಿಯನ್ನು ಪತ್ತೆಹಚ್ಚಿದ್ದಾರೆ. 2 ಲೀಟರ್ ಬಾಟಲಿಗಳಲ್ಲಿ ಅಂದಾಜು 50 ಲೀಟರ್​ಗೂ ಅಧಿಕ ಕಳ್ಳಭಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲಾಕ್​ಡೌನ್ ವೇಳೆ ಖತರ್ನಾಕ್ ಐಡಿಯಾ, ಸಿಲಿಂಡರ್ ಕೆಳಗೆ ಬಚ್ಚಿಟ್ಟಿದ್ದ ಕಳ್ಳಭಟ್ಟಿ ವಶ
Follow us on

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಖತರ್ನಾಕ್ ಐಡಿಯಾ ಮಾಡಿದ್ದ ಕಳ್ಳಭಟ್ಟಿ ದಂಧೆಕೋರನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಾಗಲಕೋಟೆ ಹೊರವಲಯದ ಹೈಟೆಕ್ ಮನೆಯೊಂದರ ಮೇಲೆ ಅಬಕಾರಿ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸಿಲಿಂಡರ್ ಇಡುವ ಜಾಗದ ಕೆಳಗೆ ಕಂದಕ ಮಾಡಿ ಕಳ್ಳಭಟ್ಟಿಯನ್ನು ಮುಚ್ಚಿಟ್ಟಿದ್ದರು. ಆದ್ರೆ, ಮನೆಯೆಲ್ಲಾ ಜಾಲಾಡಿದ ಅಧಿಕಾರಿಗಳು ಕಳ್ಳಭಟ್ಟಿಯನ್ನು ಪತ್ತೆಹಚ್ಚಿದ್ದಾರೆ. 2 ಲೀಟರ್ ಬಾಟಲಿಗಳಲ್ಲಿ ಅಂದಾಜು 50 ಲೀಟರ್​ಗೂ ಅಧಿಕ ಕಳ್ಳಭಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.