ಲಾಕ್​ಡೌನ್ ವೇಳೆ ವೇಶ್ಯಾವಾಟಿಕೆಗೆ ಒತ್ತಾಯ, ಒಂದು ಟ್ವೀಟ್​ನಿಂದ 12 ಯುವತಿಯರು ಬಚಾವ್!

|

Updated on: Apr 28, 2020 | 2:58 PM

ಬೆಂಗಳೂರು: ಆರ್ಕೆಸ್ಟ್ರಾ ಹೆಸರಲ್ಲಿ ಬೇರೆ ರಾಜ್ಯದ ಯುವತಿಯರನ್ನು ಬೆಂಗಳೂರಿಗೆ ಕರೆತಂದು ಕಿರುಕುಳ ನೀಡಿ, ವೇಶ್ಯಾವಾಟಿಕೆಗೆ ಒತ್ತಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಒಂದು ಟ್ವೀಟ್‌ನಿಂದಾಗಿ 12 ಯುವತಿಯರ ರಕ್ಷಣೆಯಾಗಿದೆ. ಆರ್ಕೆಸ್ಟ್ರಾ ಹೆಸರಿನಲ್ಲಿ ಯುವತಿಯರನ್ನು ಕರೆತಂದ ಆರೋಪಿ ಪ್ರಜ್ವಲ್, ನಿತ್ಯ ಯುವತಿಯರಿಗೆ ಕಿರುಕುಳ ನೀಡುತಿದ್ದ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ವೇಶ್ಯಾವಾಟಿಗೆ ಒತ್ತಾಯಿಸುತ್ತಿದ್ದ. ಯುವತಿಯೊಬ್ಬಳು ಕಿರುಕುಳದ ಬಗ್ಗೆ ತನ್ನ ಸ್ನೇಹಿತನ ಬಳಿ ಹೇಳಿ ಕೊಂಡಿದ್ದಾಳೆ. ಈ ವಿಷಯವನ್ನು ಯುವತಿ ಸ್ನೇಹಿತ ತನಗೆ ಪರಿಚೆಯವಿದ್ದ ವಕೀಲರಿಗೆ ತಿಳಿಸಿದ್ದಾನೆ. ನಂತರ ವಕೀಲರು […]

ಲಾಕ್​ಡೌನ್ ವೇಳೆ ವೇಶ್ಯಾವಾಟಿಕೆಗೆ ಒತ್ತಾಯ, ಒಂದು ಟ್ವೀಟ್​ನಿಂದ 12 ಯುವತಿಯರು ಬಚಾವ್!
Follow us on

ಬೆಂಗಳೂರು: ಆರ್ಕೆಸ್ಟ್ರಾ ಹೆಸರಲ್ಲಿ ಬೇರೆ ರಾಜ್ಯದ ಯುವತಿಯರನ್ನು ಬೆಂಗಳೂರಿಗೆ ಕರೆತಂದು ಕಿರುಕುಳ ನೀಡಿ, ವೇಶ್ಯಾವಾಟಿಕೆಗೆ ಒತ್ತಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಒಂದು ಟ್ವೀಟ್‌ನಿಂದಾಗಿ 12 ಯುವತಿಯರ ರಕ್ಷಣೆಯಾಗಿದೆ.

ಆರ್ಕೆಸ್ಟ್ರಾ ಹೆಸರಿನಲ್ಲಿ ಯುವತಿಯರನ್ನು ಕರೆತಂದ ಆರೋಪಿ ಪ್ರಜ್ವಲ್, ನಿತ್ಯ ಯುವತಿಯರಿಗೆ ಕಿರುಕುಳ ನೀಡುತಿದ್ದ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ವೇಶ್ಯಾವಾಟಿಗೆ ಒತ್ತಾಯಿಸುತ್ತಿದ್ದ. ಯುವತಿಯೊಬ್ಬಳು ಕಿರುಕುಳದ ಬಗ್ಗೆ ತನ್ನ ಸ್ನೇಹಿತನ ಬಳಿ ಹೇಳಿ ಕೊಂಡಿದ್ದಾಳೆ.

ಈ ವಿಷಯವನ್ನು ಯುವತಿ ಸ್ನೇಹಿತ ತನಗೆ ಪರಿಚೆಯವಿದ್ದ ವಕೀಲರಿಗೆ ತಿಳಿಸಿದ್ದಾನೆ. ನಂತರ ವಕೀಲರು ಈ ವಿಷಯವನ್ನು ಟ್ವೀಟ್‌ ಮೂಲಕ ನಗರ ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣ ದಾಳಿ ನಡೆಸಿದ ಪೊಲೀಸರು 12 ಯುವತಿಯರನ್ನ ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:50 pm, Tue, 28 April 20