ಲಾಕ್‌ಡೌನ್ ವೇಳೆ ಜಪ್ತಿಯಾದ ವಾಹನಗಳು ವಾಪಸ್! *Conditions Apply

ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಇಡೀ ಬೆಂಗಳೂರು ಲಾಕ್‌ಡೌನ್ ಆಗಿದ್ದಾಗ ಅನೇಕ ಮಂದಿ ತಮ್ಮ ವಾಹನಗಳಲ್ಲಿ ನಗರ ಸಂಚಾರಕ್ಕೆ ಬಂದಿದ್ದರು. ಆವೇಳೆ ನಗರ ಪೊಲೀಸರು ನಿರ್ದಾಕ್ಷಿಣ್ಯವಾಗಿ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದ ಕಂಗಾಲಾಗಿದ್ದ ವಅಹನ ಸವಾರರು ಮತ್ತೆ ಯಾವಾಗಪ್ಪಾ ನಮ್ಮ ವಾಹನಗಳು ನಮ್ಮ ಕೈಸೇರುವುದು ಎಂದು ತಲೆ ಮೇಲೆ ಕೈಹೊತ್ತಿ ಕುಳಿತಿದ್ದರು. ವಾಹನಗಳು ವಾಪಾಸಾಗೋದು ಮೂರು ತಿಂಗಳಿಗಂತೆ/ ಆರು ತಿಂಗಳಿಗಂತೆ, ಪೊಲೀಸರು ಎಫ್​ಐಆರ್ ಹಾಕಿದಾರಂತೆ ಕೋರ್ಟಿಗೇ ಹೋಗಿ ಬಿಡಿಸಿಕೊಂಡುಬರಬೇಕಂತೆ ಎಂದೆಲ್ಲಾ ವಾಹನ ಸವಾರರ ಆತಂಕ ಮತ್ತಷ್ಟು ಹೆಚ್ಚಿಸುವ ಮಾತುಗಳು […]

ಲಾಕ್‌ಡೌನ್ ವೇಳೆ ಜಪ್ತಿಯಾದ ವಾಹನಗಳು ವಾಪಸ್! *Conditions Apply
ಸಾಧು ಶ್ರೀನಾಥ್​

Updated on: Apr 30, 2020 | 11:11 AM

ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಇಡೀ ಬೆಂಗಳೂರು ಲಾಕ್‌ಡೌನ್ ಆಗಿದ್ದಾಗ ಅನೇಕ ಮಂದಿ ತಮ್ಮ ವಾಹನಗಳಲ್ಲಿ ನಗರ ಸಂಚಾರಕ್ಕೆ ಬಂದಿದ್ದರು. ಆವೇಳೆ ನಗರ ಪೊಲೀಸರು ನಿರ್ದಾಕ್ಷಿಣ್ಯವಾಗಿ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದ ಕಂಗಾಲಾಗಿದ್ದ ವಅಹನ ಸವಾರರು ಮತ್ತೆ ಯಾವಾಗಪ್ಪಾ ನಮ್ಮ ವಾಹನಗಳು ನಮ್ಮ ಕೈಸೇರುವುದು ಎಂದು ತಲೆ ಮೇಲೆ ಕೈಹೊತ್ತಿ ಕುಳಿತಿದ್ದರು. ವಾಹನಗಳು ವಾಪಾಸಾಗೋದು ಮೂರು ತಿಂಗಳಿಗಂತೆ/ ಆರು ತಿಂಗಳಿಗಂತೆ, ಪೊಲೀಸರು ಎಫ್​ಐಆರ್ ಹಾಕಿದಾರಂತೆ ಕೋರ್ಟಿಗೇ ಹೋಗಿ ಬಿಡಿಸಿಕೊಂಡುಬರಬೇಕಂತೆ ಎಂದೆಲ್ಲಾ ವಾಹನ ಸವಾರರ ಆತಂಕ ಮತ್ತಷ್ಟು ಹೆಚ್ಚಿಸುವ ಮಾತುಗಳು ಕೇಳಿಬಂದಿದ್ದವು.

ಆದ್ರೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್‌ ರಾವ್‌ ಇದಕ್ಕೆ ಫುಲ್​ ಸ್ಟಾಪ್​ ಇಟ್ಟಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪೊಲೀಸ್​ ಆಯುಕ್ತರು ಲಾಕ್‌ಡೌನ್ ಆರಂಭದ ದಿನಗಳಲ್ಲಿ ಸೀಜ್‌ ಆಗಿರುವ ವಾಹನಗಳನ್ನು ಮೇ 1ರಿಂದ ವಾಪಸ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Conditions Apply:
ಸಿಎಂ, ಗೃಹ ಸಚಿವರ ಅನುಮತಿ ಮೇರೆಗೆ ವಾಹನಗಳ ವಾಪಸ್​ ನೀಡುತ್ತೇವೆ. ಆದ್ರೆ ಅದಕ್ಕೂ ಮುನ್ನ ವಾಹನಗಳ ದಾಖಲೆ ಪರಿಶೀಲಿಸಿ, ವಾಪಸ್ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ 47,000 ವಾಹನ ಜಪ್ತಿ ಮಾಡಲಾಗಿದೆ. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದೆವು. ಜಪ್ತಿ ಮಾಡಿರುವ ವಾಹನ ಹಿಂತಿರುಗಿಸಲು ನಿರ್ಧರಿಸಲಾಗಿದೆ. ಆಯಾ ಠಾಣೆಯಲ್ಲಿ ವಾಹನಗಳನ್ನು ವಾಪಸ್ ನೀಡಲಾಗುವುದು. ಆದ್ರೆ ಅದಕ್ಕೂ ಮೊದಲು ಎನ್‌ಡಿಎಂಎ ಕಾಯ್ದೆಯನ್ವಯ ಶುಲ್ಕ ಪಡೆಯಲಾಗುವುದು. ಮೊದಲು ಜಪ್ತಿ ಮಾಡಿದ ವಾಹನಗಳನ್ನು ಮೊದಲು ನೀಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

Published On - 10:31 am, Thu, 30 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us