ವಿದೇಶಿ ಮಹಿಳೆಗೆ ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ FIR ದಾಖಲು

|

Updated on: Jan 25, 2020 | 2:01 PM

ಬೆಂಗಳೂರು: ವಿದೇಶಿ ಮೂಲದ ವಿವಾಹಿತೆಯಿಂದ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಹಲ್ಲೆ ಮಾಡಿದ್ದಾಗಿ ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪತಿ ವಿಕ್ರಂ ಮಾಡಾ ವಿರುದ್ಧ ಪತ್ನಿ ಚಿಲಿ ದೇಶದ ಕಾರ್ಲಾ ಮಾರ್ಟೂಸ್ ಬ್ರಾವೂ ದೂರು ನೀಡಿದ್ದಾಳೆ. ಭರತನಾಟ್ಯ, ಕಥಕ್ ಕಲಿಯಲು 2017ರಲ್ಲಿ ಕಾರ್ಲಾ ಮಾರ್ಟೂಸ್ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಹೈದರಾಬಾದ್ ಮೂಲದ ವಿಕ್ರಂ ಮಾಡ ಜತೆ ಪ್ರೇಮಾಂಕುರವಾಗಿತ್ತು. 2018ರ ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆ ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ […]

ವಿದೇಶಿ ಮಹಿಳೆಗೆ ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ FIR ದಾಖಲು
Follow us on

ಬೆಂಗಳೂರು: ವಿದೇಶಿ ಮೂಲದ ವಿವಾಹಿತೆಯಿಂದ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಹಲ್ಲೆ ಮಾಡಿದ್ದಾಗಿ ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪತಿ ವಿಕ್ರಂ ಮಾಡಾ ವಿರುದ್ಧ ಪತ್ನಿ ಚಿಲಿ ದೇಶದ ಕಾರ್ಲಾ ಮಾರ್ಟೂಸ್ ಬ್ರಾವೂ ದೂರು ನೀಡಿದ್ದಾಳೆ.

ಭರತನಾಟ್ಯ, ಕಥಕ್ ಕಲಿಯಲು 2017ರಲ್ಲಿ ಕಾರ್ಲಾ ಮಾರ್ಟೂಸ್ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಹೈದರಾಬಾದ್ ಮೂಲದ ವಿಕ್ರಂ ಮಾಡ ಜತೆ ಪ್ರೇಮಾಂಕುರವಾಗಿತ್ತು. 2018ರ ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆ ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು. 2019ರಲ್ಲಿ ದಂಪತಿ ಚಿಲಿ ದೇಶಕ್ಕೆ ಹೋಗಿ ಬಂದಿದ್ರು. ಆ ಬಳಿಕ ಪತ್ನಿ ಮನೆಯ ಸ್ಥಿತಿಗತಿ ಕಂಡು ಹಣಕ್ಕಾಗಿ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಕಾರ್ಲಾ ಆರೋಪಿಸಿದ್ದಾರೆ.

ತನ್ನನ್ನು ಅನುಮಾನಿಸಿ ವಿಕ್ರಂ ಮಾಡಾ ಕಿರುಕುಳ ನೀಡುತ್ತಿದ್ದಾನೆ. ವಿಚ್ಛೇದನ ನೀಡಲು ಪರಸ್ಪರ ನಿರ್ಧರಿಸಿ ಮಾತನಾಡಲು ತೆರಳಿದ್ದಾಗ ಹಲ್ಲೆ ಮಾಡಿರುವುದಾಗಿ ಆರೋಪಿಸಿ ಪತಿ ವಿಕ್ರಂ ಮಾಡಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್​ಐಆರ್ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Published On - 11:59 am, Sat, 25 January 20