ನಿವೃತ್ತಿ ನಂತರದ ಬದುಕು ಕಷ್ಟಕಷ್ಟ ಎಂದು ಆತ್ಮಹತ್ಯೆಗೆ ಶರಣಾದ ಅರಣ್ಯ ಇಲಾಖೆ ಕಾವಲುಗಾರ

| Updated By: ಸಾಧು ಶ್ರೀನಾಥ್​

Updated on: Jan 18, 2021 | 1:12 PM

ನನ್ನ ನಿವೃತ್ತಿಗೆ ಕೇವಲ 4 ತಿಂಗಳು ಬಾಕಿ ಇದೆ. ಹಾಗಾಗಿ ನಿವೃತ್ತಿಯ ನಂತರ ನನಗೆ ಜೀವನ ನಿರ್ವಾಹಣೆ ತುಂಬಾ ಕಷ್ಟಕರವಾಗಲಿದೆ. ಆದರಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ನಿವೃತ್ತಿ ನಂತರದ ಬದುಕು ಕಷ್ಟಕಷ್ಟ ಎಂದು ಆತ್ಮಹತ್ಯೆಗೆ ಶರಣಾದ ಅರಣ್ಯ ಇಲಾಖೆ ಕಾವಲುಗಾರ
ಆತ್ಮಹತ್ಯೆಗೆ ಶರಣಾದ ಮಲ್ಲಿಕಾರ್ಜುನ್
Follow us on

ಕೊಪ್ಪಳ: ನೇಣು ಬಿಗಿದುಕೊಂಡು ಅರಣ್ಯ ಇಲಾಖೆ ಕಾವಲುಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆ ಗಂಗಾವತಿ ನಗರದಲ್ಲಿ ನಡೆದಿದೆ.

ಗಂಗಾವತಿಯ ವಲಯ ಅರಣ್ಯ ಅಧಿಕಾರಿಗಳ‌ ಕಚೇರಿಯಲ್ಲಿ 59 ವರ್ಷದ ಮಲ್ಲಿಕಾರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಪಾಳಯದಲ್ಲಿ‌ ಕೆಲಸಕ್ಕೆ ಬಂದಿದ್ದ ಮಲ್ಲಿಕಾರ್ಜುನ್ ನಸುಕಿನ ಜಾವ ನೇಣಿಗೆ ಶರಣಾಗಿದ್ದಾರೆ. ಮಲ್ಲಿಕಾರ್ಜುನ್ ನಿವೃತ್ತಿಗೆ ಕೇವಲ ನಾಲ್ಕು ತಿಂಗಳು ಬಾಕಿ ಇತ್ತು.

ಆತ್ಮಹತ್ಯೆಗೂ ಮುನ್ನ ಮಲ್ಲಿಕಾರ್ಜುನ್ ಡೆತ್​ನೋಟ್​ ಬರೆದಿಟ್ಟಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡಿದ್ದಾರೆ. ನನ್ನ ನಿವೃತ್ತಿಗೆ ಕೇವಲ 4 ತಿಂಗಳು ಬಾಕಿ ಇದೆ. ಹಾಗಾಗಿ ನಿವೃತ್ತಿಯ ನಂತರ ನನಗೆ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಲಿದೆ. ಆದರಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಸ್ಥಳಕ್ಕೆ ಗಂಗಾವತಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.