ಚಿತ್ರದುರ್ಗ: ಕೊರೊನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಮದ್ಯ ಸಿಗದೆ ಕುಡುಕರು ಕಂಗಾಲಾಗಿದ್ದಾರೆ. ಕೆಲವೊಂದು ಕಡೆ ದುಷ್ಕರ್ಮಿಗಳು ಬಾರ್ಗಳಿಗೇ ಕನ್ನ ಹಾಕಿ ಮದ್ಯವನ್ನು ದೋಚಿದ್ದಾರೆ. ಆದ್ರೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದ ಬಳಿ ಆ್ಯಂಬುಲೆನ್ಸ್‌ನಲ್ಲಿ ಕಿಡಿಗೇಡಿಗಳು ಮದ್ಯ ಸಾಗಾಟ ಮಾಡಿ ಸಿಕ್ಕಿಬಿದ್ದಾರೆ.
ಆ್ಯಂಬುಲೆನ್ಸ್‌ನಲ್ಲಿ ಮದ್ಯ ಸಾಗಾಟ ಮಾಡಿ ಓಮಿನಿ ವ್ಯಾನ್ಗೆ ಎಣ್ಣೆಯನ್ನ ಶಿಫ್ಟ್ ಮಾಡುವ ವೇಳೆ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಾಲಕ ಸುಬಾನ್, ಲ್ಯಾಬ್ ಟೆಕ್ನೀಷಿಯನ್ ಸಂತೋಷ, ಶಿವಗಂಗಾ ಗ್ರಾಮದ ಜೀವನ್, ಗಿರೀಶ ಬಂಧಿತರು. ಆ್ಯಂಬುಲೆನ್ಸ್ನಲ್ಲಿದ್ದ್ದ 14 ಬಾಕ್ಸ್ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದು, ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:43 pm, Tue, 21 April 20