ಖೋಟಾನೋಟು ಚಲಾವಣೆಗೆ ಯತ್ನಿಸ್ತಿದ್ದ ಆರೋಪಿಗಳು ಸಿಐಡಿ ಬಲೆಗೆ.. ಬೆಂಗಳೂರಿನಲ್ಲಿ ನಾಲ್ವರು ಅರೆಸ್ಟ್

|

Updated on: Mar 01, 2021 | 8:02 AM

ದೊಡ್ಡತೋಗುರು ಗ್ರಾಮದ ಸೆಲೆಬ್ರೆಟಿ ಲೇಔಟ್ ರಸ್ತೆಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಖೋಟಾನೋಟು ಸಾಗಟ ಮಾಡುತ್ತಿದ್ದ ವೇಳೆ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರಿನ ಪರಿಶೀಲನೆ ನಡೆಸಿ ಪೊಲೀಸರು ಬಂಧಿತರ ಬಳಿ ಇದ್ದ 6.80 ಲಕ್ಷ ಮೌಲ್ಯದ 2 ಸಾವಿರ ಮುಖಬೆಲೆಯ 340 ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಖೋಟಾನೋಟು ಚಲಾವಣೆಗೆ ಯತ್ನಿಸ್ತಿದ್ದ ಆರೋಪಿಗಳು ಸಿಐಡಿ ಬಲೆಗೆ.. ಬೆಂಗಳೂರಿನಲ್ಲಿ ನಾಲ್ವರು ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಖೋಟಾನೋಟು ಚಲಾವಣೆಗೆ ಯತ್ನಿಸ್ತಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಸಿಐಡಿ ಪೊಲೀಸರು ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವ, ನಾಗೇಂದ್ರ, ಪ್ರಕಾಶ್, ಲಕ್ಷ್ಮಣ ಬಂಧಿತ ಆರೋಪಿಗಳು. ಬಂಧಿತ ನಾಲ್ವರು ಆರೋಪಿಗಳು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ನಿವಾಸಿಗಳು.

ದೊಡ್ಡತೋಗುರು ಗ್ರಾಮದ ಸೆಲೆಬ್ರೆಟಿ ಲೇಔಟ್ ರಸ್ತೆಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಖೋಟಾನೋಟು ಸಾಗಟ ಮಾಡುತ್ತಿದ್ದ ವೇಳೆ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರಿನ ಪರಿಶೀಲನೆ ನಡೆಸಿ ಪೊಲೀಸರು ಬಂಧಿತರ ಬಳಿ ಇದ್ದ 6.80 ಲಕ್ಷ ಮೌಲ್ಯದ 2 ಸಾವಿರ ಮುಖಬೆಲೆಯ 340 ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ FIR ದಾಖಲಾಗಿದೆ. ಕೇಸ್ ದಾಖಲಿಸಿ ಖೋಟಾನೋಟಿನ ಜಾಲವನ್ನು ಪತ್ತೆ ಹಚ್ಚಲು ಸಿಐಡಿ ಪೊಲೀಸರು ಮುಂದಾಗಿದ್ದು ಶೋಧ ಶುರು ಮಾಡಿದ್ದಾರೆ.

ಇನ್ನು ಇದೇ ರೀತಿ ಕೆಲ ತಿಂಗಳ ಹಿಂದೆ ನಕಲಿ ನೋಟ್​​ ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೂರ್ಯಸಿಟಿ ಪೊಲೀಸರು ಅರೆಸ್ಟ್​ ಮಾಡಿದ್ದರು. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಹಾಗೂ ನರೇಶ್ ಬಂಧಿತ ಆರೋಪಿಗಳು. ಬಂಧಿತರಿಂದ ನೋಟ್​ಪ್ರಿಂಟ್​ ಮಷಿನ್ ಹಾಗೂ 6 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿತ್ತು. 100, 200, 500 ಮುಖಬೆಲೆಯ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿತ್ತು.

ಕಲರ್ ಮಷಿನ್ ಮೂಲಕ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ವಂಚಕರು ಸಂತೆ ಸೇರಿದಂತೆ ಅಂಗಡಿಗಳಲ್ಲಿ ಇದನ್ನು ಬಳಸುತ್ತಿದ್ದರು. ಅಂತೆಯೇ, ಈ ಸಲ ಸಂತೆ ಅಂಗಡಿಗಳಿಗೆ ನೋಟು ನೀಡುತ್ತಿದ್ದಾಗ ಆರೋಪಿಗಳು ಅಂದರ್ ಆಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೂರ್ಯನಗರ ಠಾಣೆಯ ಪೊಲೀಸರು ಇಬ್ಬರನ್ನು ಅರೆಸ್ಟ್​ ಮಾಡಿದ್ದರು.

ಇದನ್ನೂ ಓದಿ:ವಿಚಾರಣೆ ವೇಳೆ ಹೊರಬಿತ್ತು ಮತ್ತೊಂದು ಸತ್ಯ: ಕೊಲೆ ಆರೋಪಿ ನಡೆಸುತ್ತಿದ್ದನಂತೆ ಖೋಟಾ ನೋಟು ಜಾಲ!