ಹಾಸನ: ಮಹಿಳೆಯ ಕತ್ತು ಸೀಳಿ ಬರ್ಬರವಾಗಿ (brutally murdered) ಹತ್ಯೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾರ್ವತಮ್ಮ(55) ಕೊಲೆಯಾದ ಮಹಿಳೆ. ಅರಕಲಗೂಡಿನ ಶಫೀರ್ ಹಾಗೂ ಕೋಲಾರ ಜಿಲ್ಲೆಯ ಮಾಲೂರು ಮೂಲದ ಸೈಯ್ಯದ್ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ
ಪಾರ್ವತಮ್ಮ, ಹೊಳೆನರಸೀಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಶಫೀರ್ಗೆ 2 ವರ್ಷದ ಹಿಂದೆ ಮನೆ ಬಾಡಿಗೆ ನೀಡಿದ್ದರು. ಶಫೀರ್ ಕಳೆದ 1 ವರ್ಷದಿಂದ ಬಾಡಿಗೆಯನ್ನೇಕೊಡದೆ ಕಾಡಿಸುತ್ತಿದ್ದನು. ಇದಲ್ಲದೆ ಪಾರ್ವತಮ್ಮ ಶಫೀರ್ಗೆ 1 ಲಕ್ಷ ಹಣ ಸಾಲ ನೀಡಿದ್ದು, ಇದನ್ನು ಸಹಿತ ಮರುಕಳಿಸಿರಲಿಲ್ಲ.
ಹೀಗಾಗಿ ಪಾರ್ವತಮ್ಮ ಕುಟುಂಬ ಶಫೀರ್ನ ಮನೆ ಜಪ್ತಿ ಮಾಡಿ ಹಣ ಕೊಡುವವರೆಗೂ ಸೋಫಾ, ಗಾಡ್ರೇಜ್ ಮತ್ತು ಪೀಠೋಪಕರಣ ನಮ್ಮನೆಯಲ್ಲಿರಲಿ (ಪಾರ್ವತಮ್ಮ) ಎಂದು ಮನೆಗೆ ತಂದಿಟ್ಟುಕೊಂಡಿದ್ದರು. ಈ ಕಾರಣಕ್ಕೆ ಸಿಟ್ಟಾಗಿ, ಶಫೀರ್ ಪಾರ್ವತಮ್ಮರನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದನು.
ಇದರಂತೆ ಶಫೀರ್ ತನ್ನ ಸ್ನೇಹಿತನೊಂದಿಗೆ (ಡಿ. 24) ಪಾರ್ವತಮ್ಮ ಪತಿ ರಾಜೇಗೌಡ ಹೊರಗೆ ಹೋಗಿದ್ದರು. ಈ ಸಮಯ ನೋಡಿಕೊಂಡು ಆರೋಪಿಗಳು ಮಾಸ್ಕ್ ಧರಿಸಿಕೊಂಡು ಬೈಕ್‌ನಲ್ಲಿ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಪಾರ್ವತಮ್ಮ ಮನೆಗೆ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಹೊಳೆನರಸೀಪುರ ಗ್ರಾಮಾಂತರ ಪೊಲೀಸರು, ಆರೋಪಿಗಳನ್ನು ಸೆರೆ ಹಿಡಿದು ಜೈಲಿಗೆ ಅಟ್ಟಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.