ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜ್ಞಾನಭಾರತಿ ಬಳಿಯ ಮಾರುತಿನಗರದಲ್ಲಿ ನಡೆದಿದೆ. 30 ವರ್ಷದ ನಾಜಿ ತನ್ನ ಹುಟ್ಟುಹಬ್ಬವನ್ನ ಆಚರಿಸಲು ತಾಯಿ ಮತ್ತು ಸ್ನೇಹಿತರನ್ನು ಕರೆತರಲು ಹೋಗುತ್ತಿದ್ದಳು.
ಈ ವೇಳೆ ಪಾಪಿ ಪತಿ ಅಲ್ತಾಫ್ ಬೈಕ್ನಿಂದ ಗುದ್ದಿಸಿ ಆಕೆಯ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ತಲೆ, ಎದೆ, ಕೈ, ತೊಡೆ, ಹೊಟ್ಟೆ ಭಾಗಕ್ಕೆ ಇರಿದು ವಿಕೃತ ಮೆರೆದಿದ್ದಾನೆ. ಸ್ಥಳೀಯರು ನಾಜಿಯನ್ನು ಪತಿ ಅಲ್ತಾಫ್ ನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತ್ನಿ ಮೇಲೆ ಹಲ್ಲೆ ನಡೆಸಿ ಅಲ್ತಾಫ್ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 2:44 pm, Sun, 5 January 20