ವಿವಾಹಿತ ಮಹಿಳೆಯೊಂದಿಗೆ ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿ ಕೊನೆಗೆ ಆಕೆಯನ್ನು ಅಪಹರಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆಕೆ ಹೈದರಾಬಾದ್ ನಿವಾಸಿ ಆತ ಮಧ್ಯಪ್ರದೇಶದವನಾಗಿದ್ದು, ಇಬ್ಬರಿಗೂ ಫೇಸ್ಬುಕ್ನಿಂದ ಪ್ರೀತಿ ಶುರುವಾಗಿತ್ತು. ಮಧ್ಯಪ್ರದೇಶದ ಇಂದೋರ್‌ನಲ್ಲಿ ನಾಪತ್ತೆಯಾಗಿರುವ ಪುರುಷ ಮತ್ತು ಮಹಿಳೆಗಾಗಿ ಹೈದರಾಬಾದ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇಬ್ಬರು ನಿರಂತರವಾಗಿ ತಮ್ಮ ಸ್ಥಳವನ್ನು ಬದಲಾಯಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜುಲೈ 2 ರಿಂದ, ಹೈದರಾಬಾದ್ ನಿವಾಸಿಯಾಗಿರುವ ವಿವಾಹಿತ ಮಹಿಳೆ ತನ್ನ ಫೇಸ್‌ಬುಕ್ ಸ್ನೇಹಿತನೊಂದಿಗೆ ನಾಪತ್ತೆಯಾಗಿದ್ದಾಳೆ. ಮಹಿಳೆಯ ಪತಿ ಪತ್ನಿಯ ಅಪಹರಣದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೈದರಾಬಾದ್‌ನಲ್ಲಿ ಕಾಸ್ಮೆಟಿಕ್ಸ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿರುವ ಸಂಜಯ್ ಜೈನ್ ಅವರು ತಮ್ಮ ಪತ್ನಿ ಸಲೋನಿಯನ್ನು ಅಪಹರಣ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ಇವರಿಬ್ಬರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ವರ್ಷದ ಮಗ ಮತ್ತು ಆರು ತಿಂಗಳ ಹೆಣ್ಣು ಮಗುವಿದೆ. ಕಳೆದ ವರ್ಷ, ಸಲೋನಿ ಇಂದೋರ್‌ನ ರೋಹಿತ್ ಜತೆ ಫೇಸ್ಬುಕ್ನಲ್ಲಿ ಸ್ನೇಹ ಶುರುವಾಗಿತ್ತು.
ಮತ್ತಷ್ಟು ಓದಿ: Belagavi News: ಹಾಡಹಗಲೇ ಬಾಲಕಿ ಕಿಡ್ನಾಪ್ಗೆ ಯತ್ನ; ಬೆಚ್ಚಿಬಿದ್ದ ಬೆಳಗಾವಿ ಜನ
ಕೆಲವು ದಿನಗಳ ಹಿಂದೆ, ಸಲೋನಿ ರೋಹಿತ್‌ನನ್ನು ಭೇಟಿಯಾಗಲು ಇಂದೋರ್‌ಗೆ ಹೋಗಿದ್ದರು. ಜುಲೈ 2ರಂದು ಹೈದರಾಬಾದಿಗೆ ಬಂದು ಆಕೆಯನ್ನು ಕರೆದುಕೊಂಡು ಹೋಗಿದ್ದ. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ, ಇಬ್ಬರು ಇಂದೋರ್‌ನಲ್ಲಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದರು.
ಈ ಬಗ್ಗೆ ಪೊಲೀಸರು ಮಹಿಳೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸಲೋನಿಯ ಇಬ್ಬರೂ ಮಕ್ಕಳು ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.
ಸದ್ಯ ಪೊಲೀಸರು ನಿರಂತರವಾಗಿ ಅವರಿರುವ ಸ್ಥಳದ ಮೇಲೆ ನಿಗಾ ಇಡುತ್ತಿದ್ದು, ಶೀಘ್ರದಲ್ಲಿ ಅವರನ್ನು ಪತ್ತೆ ಮಾಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 am, Thu, 13 July 23