ಬೆಳಗಿನ ಜಾವ ಕುಡುಕ ಪತಿಯಿಂದ ಜಗಳ, ಹತ್ಯೆಗೈದ ಪತ್ನಿ.. ಪರಾರಿಯಾದ ಮಹಿಳೆಯ ಹಿಡಿದು ಠಾಣೆಗೆ ತಂದ ಪೊಲೀಸರು

16 ವರ್ಷದ ಹಿಂದೆ ಮದುವೆಯಾಗಿದ್ದ ಮೋಹನ್ ಮತ್ತು ಪದ್ಮಾ ದಂಪತಿ ನಡುವೆ ಪ್ರತಿ ದಿನವೂ ಜಗಳವಾಗುತ್ತಿತ್ತು. ಆದ್ರೆ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ನಡೆದ ಜಗಳದಲ್ಲಿ ಪತ್ನಿ ಪದ್ಮಾ ಗಂಡನನ್ನೇ ಕೊಲೆ ಮಾಡಿದ್ದಾರೆ.

ಬೆಳಗಿನ ಜಾವ ಕುಡುಕ ಪತಿಯಿಂದ ಜಗಳ, ಹತ್ಯೆಗೈದ ಪತ್ನಿ.. ಪರಾರಿಯಾದ ಮಹಿಳೆಯ ಹಿಡಿದು ಠಾಣೆಗೆ ತಂದ ಪೊಲೀಸರು
ಪದ್ಮಾ
Edited By:

Updated on: Apr 12, 2021 | 12:48 PM

ಬೆಂಗಳೂರು: ಗಂಡ ಹೆಂಡತಿಯ ಜಗಳ ಉಂಡು ಮಲಗೋ ತನಕ ಅನ್ನುತ್ತಾರೆ. ಆದ್ರೆ ಇಲ್ಲಿ ಶುರುವಾದ ಜಗಳಕ್ಕೆ ಪತ್ನಿಯೇ ಪತಿಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆ.ಜೆ.ನಗರದ ಓಬಳೇಶ್ ಕಾಲೋನಿಯಲ್ಲಿ ನಡೆದಿದೆ. 41 ವರ್ಷದ ಮೋಹನ್​ನನ್ನು ಪತ್ನಿ ಪದ್ಮಾ ಹತ್ಯೆಗೈದಿದ್ದಾರೆ. ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

16 ವರ್ಷದ ಹಿಂದೆ ಮದುವೆಯಾಗಿದ್ದ ಮೋಹನ್ ಮತ್ತು ಪದ್ಮಾ ದಂಪತಿ ನಡುವೆ ಪ್ರತಿ ದಿನವೂ ಜಗಳವಾಗುತ್ತಿತ್ತು. ಆದ್ರೆ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ನಡೆದ ಜಗಳದಲ್ಲಿ ಪತ್ನಿ ಪದ್ಮಾ ಗಂಡನನ್ನೇ ಕೊಲೆ ಮಾಡಿದ್ದಾರೆ. ಕುಡಿತಕ್ಕೆ ದಾಸನಾಗಿದ್ದ ಮೋಹನ್ ಪತ್ನಿಯ ಶೀಲ ಶಂಕಿಸಿ ದಿನ ಆಕೆಯ ಜೊತೆ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ಇಂದು ಕೂಡ ಜಗಳವಾಗಿದ್ದು ಮಾತಿಗೆ ಮಾತು ಬೆಳೆದು ಕೋಪ ಮಿತಿ ಮೀರಿ ಪದ್ಮಾ ಗಂಡನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾರೆ.

ಮನೆಯಲ್ಲಿ ಬಿದ್ದಿದ್ದ ಮೋಹನ್​ನನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದು ಮಾರ್ಗ ಮಧ್ಯೆಯೇ ಮೋಹನ್ ಮೃತಪಟ್ಟಿದ್ದಾರೆ. ಬಳಿಕ ಜೆಜೆ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದು ನಾಪತ್ತೆಯಾಗಿದ್ದ ಪದ್ಮಾಳನ್ನು ಹುಡುಕಿ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೋಹನ್ ಮತ್ತು ಪದ್ಮಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೊಲೆ ಮಾಡಿರುವ ಪದ್ಮಾಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Husband Kills Wife: ಬಾಯಿಗೆ ಬಟ್ಟೆ ಇಟ್ಟು ಪತ್ನಿ ಕೊಲೆ ಮಾಡಿದ ಪತಿರಾಯ ಅರೆಸ್ಟ್