ರಾಯಚೂರು: ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ 3 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿಯು ಉದ್ಯೋಗಾಂಕ್ಷಿಗಳನ್ನ ಸೆಳೆಯಲು ಮತ್ತು ಅವರಲ್ಲಿ ನಂಬಿಕೆ ಹುಟ್ಟಿಸಲು ಸ್ವತಃ ಸೇನಾ ಸಮವಸ್ತ್ರ ಧರಿಸುತ್ತಿದ್ದ ಎಂಬುದು ಗಮನಾರ್ಹ.
ಮುದ್ದೇಬಿಹಾಳದ ನಾಲತವಾಡ ಮೂಲದ ಮಂಜುನಾಥರೆಡ್ಡಿ ಬಂಧಿತ ಆರೋಪಿ. ಲಿಂಗಸುಗೂರ ತಾಲೂಕಿನ ಮುದಗಲ್ ಮೂಲದ ಅಮರೇಶ್ ಮತ್ತು ಮಹೇಶ್ ಎಂಬುವವರಿಂದ 3 ಲಕ್ಷ ಹಣ ಪಡೆದು ವಂಚಿಸಿದ್ದ. ಈ ಬಗ್ಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಇದಲ್ಲದೆ, ಮಂಗಳೂರಿನ ಸೂರತ್ಕಲ್ನಲ್ಲೂ ಹಲವರಿಗೆ ಸೇನೆಯಲ್ಲಿ ಉದ್ಯೋಗ ಕೊಡಿಸುವಾಗಿ ವಂಚಿಸಿದ್ದಾನೆ. ಸದ್ಯ ಆರೋಪಿ ಮಂಜುನಾಥರೆಡ್ಡಿ ಮಂಗಳೂರ ಪೊಲೀಸರ ವಶದಲ್ಲಿದ್ದಾನೆ ಎಂದು ಜಿಲ್ಲಾ ಎಸ್ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.