ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು​ ಗೋಲ್ಡ್​ ಕಂಪನಿಗೆ ದೋಖಾ: ಸೂಟು ಬೂಟು ಧರಿಸಿ ಬಂದ ‘ನರಿ’ ಖಾಕಿ ಬಲೆಗೆ!

|

Updated on: Jan 10, 2021 | 6:52 PM

ಹಿಂದೂಸ್ಥಾನ್​ ಗೋಲ್ಡ್​ ಕಂಪನಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರಿಂದ ನರೇಶ್ ಅಲಿಯಾಸ್​ ನರಿ ಎಂಬಾತನ ಬಂಧನವಾಗಿದೆ.

ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು​ ಗೋಲ್ಡ್​ ಕಂಪನಿಗೆ ದೋಖಾ: ಸೂಟು ಬೂಟು ಧರಿಸಿ ಬಂದ ‘ನರಿ’ ಖಾಕಿ ಬಲೆಗೆ!
ಗೋಲ್ಡ್​ ಕಂಪನಿಗೆ ವಂಚಿಸಿದ್ದ ಸೂಟು ಬೂಟುಧಾರಿ ‘ನರಿ’ ಖಾಕಿ ಬಲೆಗೆ
Follow us on

ಬೆಂಗಳೂರು: ಹಿಂದೂಸ್ಥಾನ್​ ಗೋಲ್ಡ್​ ಕಂಪನಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರಿಂದ ನರೇಶ್ ಅಲಿಯಾಸ್​ ನರಿ ಎಂಬಾತನ ಬಂಧನವಾಗಿದೆ.

ನರೇಶ್​ ಅಲಿಯಾಸ್​ ನರಿ ವಿದ್ಯಮಾನ್ಯನಗರದ ನಿವಾಸಿ ಎಂದು ತಿಳಿದುಬಂದಿದೆ. ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ನರೇಶ್​ 95,000 ರೂಪಾಯಿ ಪಡೆದು ಪರಾರಿಯಾಗಿದ್ದ. ಯಾರಿಗೂ ಅನುಮಾನ ಬಾರದಂತೆ ಸೂಟು ಬೂಟು ಧರಿಸಿ ಬಂದಿದ್ದ ನರಿ ಗೋಲ್ಡ್​ ಕಂಪನಿ ಸಿಬ್ಬಂದಿಗೆ ವಂಚಿಸಿದ್ದ.

ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ, ಮತ್ತೊಂದು ಖಾಸಗಿ ಫೈನಾನ್ಸ್​ ಕಂಪನಿ ಸಿಬ್ಬಂದಿಗೆ ಧೋಖಾ ಮಾಡಲು ಹೊರಟಾಗ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ. ಮಣಪ್ಪುರಂ ಗೋಲ್ಡ್ ಕಂಪನಿ ಕಚೇರಿಯಲ್ಲಿ ನರೇಶ್ ಸಿಕ್ಕಿಬಿದ್ದಿದ್ದಾನೆ. ಸದ್ಯ, ಆರೋಪಿಯಿಂದ 95,000 ನಗದು, ಬೈಕ್ ಮತ್ತು ಮೊಬೈಲ್​ನ ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

ಜಲ್ಲಿಕಟ್ಟು ನೋಡುವ ವೇಳೆ.. ಮನೆ ಗೋಡೆ ಕುಸಿತ: ಸ್ಥಳದಲ್ಲೇ ಮೂವರ ದುರ್ಮರಣ

Published On - 6:52 pm, Sun, 10 January 21