ಮನೆಯ ಮಂಚದ ಕೆಳಗಿರುವ ಪೆಟ್ಟಿಗೆಯಲ್ಲಿ ತಾಯಿ, ಮಗನ ಶವ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರ ಪೊಲೀಸರು ಶುಕ್ರವಾರ ರಾಜ್ಯದ ಅಮರಾವತಿ ನಗರದಲ್ಲಿ ಬೆಡ್ ಬಾಕ್ಸ್‌ನಲ್ಲಿ ಮಹಿಳೆ ಮತ್ತು ಆಕೆಯ ಮಗನ ಶವಗಳನ್ನು ಪತ್ತೆ ಮಾಡಿದ್ದಾರೆ. ಮೃತರನ್ನು 45 ವರ್ಷದ ನೀಲಿಮಾ ಗಣೇಶ್ ಕಾಪ್ಸೆ ಮತ್ತು ಅವರ 22 ವರ್ಷದ ಮಗ ಆಯುಷ್ ಕಾಪ್ಸೆ ಎಂದು ಗುರುತಿಸಲಾಗಿದೆ.
ಅಕ್ಕಪಕ್ಕದ ಮನೆಯವರಿಗೆ ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಸಿದಿದ್ದರು. ಬಳಿಕ ಅವರ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾಗ್ಪುರದಿಂದ ಬಂದಿದ್ದ ಕುಟುಂಬಸ್ಥರು ಮನೆಗೆ ಬೀಗ ಹಾಕಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ.
ಪೊಲೀಸರು ತನಿಖೆ ನಡೆಸಿದಾಗ ಮುಂಭಾಗದ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿರುವುದು ಮತ್ತು ಹಿಂಬಾಗಿಲನ್ನು ಮುಚ್ಚಿರುವುದು ಕಂಡುಬಂದಿದೆ. ಪೊಲೀಸರು ಬಾಗಿಲನ್ನು ಒಡೆದು ಮನೆಯ ಒಳಗೆ ಪ್ರವೇಶಿಸಿದ್ದಾರೆ.
ಮತ್ತಷ್ಟು ಓದಿ: ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಟ್ಯೂಟರ್ನ ಕತ್ತು ಸೀಳಿ ಹತ್ಯೆ ಮಾಡಿದ ಬಾಲಕ
ಹಾಸಿಗೆಯಿಂದ ರಕ್ತ ತೊಟ್ಟಿಕ್ಕುತ್ತಿರುವುದು ಪೊಲೀಸರಿಗೆ ಕಾಣಿಸಿತು, ಮನೆಯ ತುಂಬೆಲ್ಲಾ ದುರ್ವಾಸನೆ ಇತ್ತು. ಇದ್ದಕ್ಕಿದ್ದಂತೆ ಹಾಸಿಗೆಯ ಪೆಟ್ಟಿಗೆಯನ್ನು ತೆರೆದಾಗ ಶವಗಳು ಕಂಡುಬಂದಿವೆ.
ನೆರೆಹೊರೆಯವರ ಪ್ರಕಾರ, ಸ್ವಲ್ಪ ದಿನದಿಂದ ಮಹಿಳೆಯ ಹಿರಿಯ ಮಗ ನಾಪತ್ತೆಯಾಗಿದ್ದರು, ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ