ನಿವೃತ್ತ ಉಪ ತಹಶೀಲ್ದಾರ್ ಕೊಲೆ ಪ್ರಕರಣ: ಉತ್ತರ ಪ್ರದೇಶ ಮೂಲದ ಆರೋಪಿ ಅರೆಸ್ಟ್

|

Updated on: Feb 17, 2021 | 7:31 AM

Retired Tahsildar Murder Case | ನಿವೃತ್ತ ಉಪ ತಹಶೀಲ್ದಾರ್ ಕೆ.ರಾಜೇಶ್ವರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಮೂಲದ ಇಬ್ರಾಹಿಂ ಖಾನ್(45) ಎಂಬ ವ್ಯಕ್ತಿಯನ್ನು ಬೆಂಗಳೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನಿವೃತ್ತ ಉಪ ತಹಶೀಲ್ದಾರ್ ಕೊಲೆ ಪ್ರಕರಣ: ಉತ್ತರ ಪ್ರದೇಶ ಮೂಲದ ಆರೋಪಿ ಅರೆಸ್ಟ್
ನಿವೃತ್ತ ಉಪ ತಹಶೀಲ್ದಾರ್ ರಾಜೇಶ್ವರಿ
Follow us on

ಬೆಂಗಳೂರು: ನಿವೃತ್ತ ಉಪ ತಹಶೀಲ್ದಾರ್ ಕೆ.ರಾಜೇಶ್ವರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಮೂಲದ ಇಬ್ರಾಹಿಂ ಖಾನ್(45) ಎಂಬ ವ್ಯಕ್ತಿಯನ್ನು ಬೆಂಗಳೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರನ್ನು ಬಂಧಿಸಿದ್ದು ಇದೀಗ ಮತ್ತೊಬ್ಬ ಆರೋಪಿ ಇಬ್ರಾಹಿಂ ಖಾನ್ ಅರೆಸ್ಟ್ ಆಗಿದ್ದಾನೆ.

ನಿವೃತ್ತ ಉಪ ತಹಶೀಲ್ದಾರ್ ರಾಜೇಶ್ವರಿ ಸರಸ್ವತಿಪುರಂನಲ್ಲಿದ್ದ ತಮ್ಮ 3 ಅಂತಸ್ತಿನ ಮನೆ ಬಾಡಿಗೆಗೆ ನೀಡಿದ್ದರು. ಅದರಲ್ಲಿ, 3ನೇ ಅಂತಸ್ತಿನಲ್ಲಿ ಬ್ಯಾಚುಲರ್ಸ್​ಗೆ ಮನೆ ಬಾಡಿಗೆ ನೀಡಿದ್ದರು. ಆದರೆ, ಬಾಡಿಗೆಗೆ ಇದ್ದ ಹುಡುಗರು ಕಳೆದ 7 ತಿಂಗಳಿಂದ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದರು. ಹೀಗಾಗಿ ರಾಜೇಶ್ವರಿ, ಬಾಡಿಗೆ ಹಣ ಕೇಳಲು ಜನವರಿ 3ರಂದು ಮನೆ ಬಳಿ ತೆರಳಿದ್ದರು. ಬಾಡಿಗೆದಾರ ಅಲಿಮ್ ಪಾಷಾಗೆ ಹಣ ನೀಡುವಂತೆ ಕೇಳಿದ್ದರು. ಜೊತೆಗೆ, ಬಾಡಿಗೆ ಹಣ ನೀಡದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ವಾರ್ನಿಂಗ್​ ಸಹ ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಅಲಿಮ್ ಪಾಷಾ, ರಾಜೇಶ್ವರಿಯನ್ನು ತನ್ನ ಮನೆಯೊಳಗೆ ಎಳೆದು ಕತ್ತು ಸೀಳಿ ಕೊಂದಿದ್ದ.

ತೀವ್ರ ರಕ್ತಸ್ರಾವದಿಂದ ನಿವೃತ್ತ ಉಪತಹಶೀಲ್ದಾರ್​ ಸ್ಥಳದಲ್ಲೇ ಮೃತಪಟ್ಟಿದ್ರು. ಇನ್ನು, ಘಟನೆ ಬಳಿಕ ಆರೋಪಿ ಕೃತ್ಯದ ಬಗ್ಗೆ ತನ್ನ ಚಿಕ್ಕಪ್ಪ ಹಾಗೂ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದ. ಬಳಿಕ ಅವರೆಲ್ಲರೂ ಸೇರಿ ಆಟೋದಲ್ಲಿ ರಾಮನಗರದ ಬಿಡದಿ ಬಳಿ ರಾಜೇಶ್ವರಿ ಶವವನ್ನು ಸಾಗಿಸಿ ಸುಟ್ಟಿದ್ದರು. ಇದಾದ ಬಳಿಕ, ನಿವೃತ್ತ ತಹಶೀಲ್ದಾರ್​ ರಾಜೇಶ್ವರಿ ನಾಪತ್ತೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರು ವಿ.ವಿ.ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಅಲಿಮ್​ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಜೆರಾನ್ ಪಾಷಾ ಹಾಗೂ ಅಶ್ರಫುನ್ನೀಸಾ ಎಂಬಾಕೆಯನ್ನ ಬಂಧಿಸಿದ್ದು ಅಲಿಮ್​ ಪಾಷಾಗೆ ಸಹಾಯ ಮಾಡಿದಕ್ಕೆ ಸದ್ಯ ಈಗ ಮತ್ತೊಬ್ಬ ಆರೋಪಿಯನ್ನೂ ಬಂಧಿಸಿದ್ದಾರೆ.

ಇದನ್ನೂ ಓದಿ: ಬಾಡಿಗೆ ಹಣದ ವಿಚಾರವಾಗಿ ನಡೆದ ಜಗಳ.. ನಿವೃತ್ತ ಉಪ ತಹಶೀಲ್ದಾರ್ ಕೊಲೆಯಲ್ಲಿ ಅಂತ್ಯ