ಬಾಡಿಗೆ ಹಣದ ವಿಚಾರವಾಗಿ ನಡೆದ ಜಗಳ.. ನಿವೃತ್ತ ಉಪ ತಹಶೀಲ್ದಾರ್ ಕೊಲೆಯಲ್ಲಿ ಅಂತ್ಯ
ಬಾಡಿಗೆ ಹಣದ ವಿಚಾರವಾಗಿ ನಡೆದ ಜಗಳ ಮನೆ ಮಾಲಕಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸರಸ್ವತಿಪುರಂನಲ್ಲಿ ನಡೆದಿದೆ. ಮನೆ ಮಾಲಕಿಯ ಕೊಲೆಗೈದ ಬಾಡಿಗೆದಾರ ಆಕೆಯ ಶವವನ್ನು ಸುಟ್ಟಿರುವ ಘಟನೆ ಫೆಬ್ರವರಿ 3ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು: ಬಾಡಿಗೆ ಹಣದ ವಿಚಾರವಾಗಿ ನಡೆದ ಜಗಳ ಮನೆ ಮಾಲಕಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸರಸ್ವತಿಪುರಂನಲ್ಲಿ ನಡೆದಿದೆ. ಮನೆ ಮಾಲಕಿಯ ಕೊಲೆಗೈದ ಬಾಡಿಗೆದಾರ ಆಕೆಯ ಶವವನ್ನು ಸುಟ್ಟಿರುವ ಘಟನೆ ಫೆಬ್ರವರಿ 3ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನಿವೃತ್ತ ಉಪ ತಹಶೀಲ್ದಾರ್ ರಾಜೇಶ್ವರಿ(61) ಹತ್ಯೆಯಾದ ಮನೆ ಮಾಲಕಿ. ಸದ್ಯ, ರಾಜೇಶ್ವರಿಯ ಕತ್ತುಕೊಯ್ದು ಕೊಂದಿದ್ದ ಬಾಡಿಗೆದಾರ ಅಲಿಮ್ ಪಾಷಾನನ್ನು ವಿ.ವಿ.ಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ? ನಿವೃತ್ತ ಉಪ ತಹಶೀಲ್ದಾರ್ ರಾಜೇಶ್ವರಿ ಸರಸ್ವತಿಪುರಂನಲ್ಲಿದ್ದ ತಮ್ಮ 3 ಅಂತಸ್ತಿನ ಮನೆ ಬಾಡಿಗೆಗೆ ನೀಡಿದ್ದರು. ಅದರಲ್ಲಿ, 3ನೇ ಅಂತಸ್ತಿನಲ್ಲಿ ಬ್ಯಾಚುಲರ್ಸ್ಗೆ ಮನೆ ಬಾಡಿಗೆ ನೀಡಿದ್ದರು. ಆದರೆ, ಬಾಡಿಗೆಗೆ ಇದ್ದ ಹುಡುಗರು ಕಳೆದ 7 ತಿಂಗಳಿಂದ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದರು.
ಇದರಿಂದ ಬೇಸತ್ತ ರಾಜೇಶ್ವರಿ, 2 ದಿನದ ಹಿಂದೆ ಬಾಡಿಗೆ ಹಣ ಕೇಳಲು ಮನೆ ಬಳಿ ತೆರಳಿದ್ದರು. ಬಾಡಿಗೆದಾರ ಅಲಿಮ್ ಪಾಷಾಗೆ ಹಣ ನೀಡುವಂತೆ ಕೇಳಿದ್ದರು. ಜೊತೆಗೆ, ಬಾಡಿಗೆ ಹಣ ನೀಡದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ವಾರ್ನಿಂಗ್ ಸಹ ಕೊಟ್ಟರು.
ಇದರಿಂದ ಸಿಟ್ಟಿಗೆದ್ದ ಅಲಿಮ್ ಪಾಷಾ ಮನೆ ಮಾಲಕಿ ರಾಜೇಶ್ವರಿಯನ್ನು ತನ್ನ ಮನೆಯೊಳಗೆ ಎಳೆದು ಕತ್ತು ಸೀಳಿ ಕೊಂದಿದ್ದ. ತೀವ್ರ ರಕ್ತಸ್ರಾವದಿಂದ ನಿವೃತ್ತ ಉಪತಹಶೀಲ್ದಾರ್ ಸ್ಥಳದಲ್ಲೇ ಮೃತಪಟ್ಟಿದ್ರು. ಇನ್ನು, ಘಟನೆ ಬಳಿಕ ಆರೋಪಿ ಕೃತ್ಯದ ಬಗ್ಗೆ ತನ್ನ ಚಿಕ್ಕಪ್ಪ ಹಾಗೂ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದ. ಬಳಿಕ ಅವರೆಲ್ಲರೂ ಸೇರಿ ಆಟೋದಲ್ಲಿ ರಾಜೇಶ್ವರಿ ಶವವನ್ನು ಸಾಗಿಸಿ ಸುಟ್ಟಿದ್ದರು. ರಾಮನಗರದ ಬಿಡದಿ ಬಳಿ ಶವ ಸುಟ್ಟುಹಾಕಿದ್ದರು. ತದ ನಂತರ, ಗಿರಿನಗರದ BDA ಪಾರ್ಕ್ನಲ್ಲಿ ಮೊಬೈಲ್ ಬಿಸಾಡಿದ್ದರು.
ಇದಾದ ಬಳಿಕ, ನಿವೃತ್ತ ತಹಶೀಲ್ದಾರ್ ರಾಜೇಶ್ವರಿ ನಾಪತ್ತೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರು ದೂರು ದಾಖಲಿಸಿದ್ದರು. ವಿ.ವಿ.ಪುರಂ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇನ್ನು, ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಅಲಿಮ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ರಾಹಿಂ ಮತ್ತು ಅಶ್ರಫ್ ಉನ್ನೀಸಾನನ್ನು ಸಹ ವಶಕ್ಕೆ ಪಡೆಯಲಾಗಿದೆ. ಹತ್ಯೆ ನಡೆದಿದ್ದ ಸ್ಥಳದಲ್ಲಿ FSL ನಿಂದ ಪರಿಶೀಲನೆ ನಡೆಸಲಾಗಿದೆ. ಜೊತೆಗೆ, ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಲಾಯಿತು.
ಭಗವಾನ್ ಮೇಲೆ ವಕೀಲೆ ಮೀರಾ ಮಸಿ ಬಳಿದಿದ್ದು ಸರಿ ಅಲ್ಲ, ಆದರೆ.. -ಸಚಿವ ಸುರೇಶ್ ಕುಮಾರ್
Published On - 5:30 pm, Fri, 5 February 21