ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್ ರಾವ್ ಹೆಸರೇಳಿಕೊಂಡು ಒಎನ್ಜಿಸಿ ನಿವೃತ್ತ ಜಿಎಂ ಶ್ರೀಧರ್ಗೆ ಒಎಲ್ಎಕ್ಸ್ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್ಗೆ OLXನಲ್ಲಿ ಟ್ರೆಡ್ಮಿಲ್ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್ ಕೊಟ್ಟಿದ್ದ. ಟ್ರೂ ಕಾಲರ್ನಲ್ಲಿ ಭಾಸ್ಕರ್‌ರಾವ್ ಐಪಿಎಸ್ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ ಕಳಿಸ್ತೀನಿ ಅದ್ರಲ್ಲಿ ಹಣ ಕಳಿಹಿಸ್ತೀನಿ ಅಂತ ವಂಚಕ ಹೇಳಿದ್ದಾನೆ.
ಗೂಗಲ್ ಪೇನಲ್ಲಿ ಒಟ್ಟು 4 ಬಾರಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಶ್ರೀಧರ್ 49 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಪಡೆದ ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿ ಆರೋಪಿ ಗಪ್ಚುಪ್ ಆಗಿದ್ದಾನೆ. ಮೋಸ ಹೋದ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಫೇಸ್ಬುಕ್ ಪೇಜಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಶ್ರೀಧರ್ ದೂರು ನೀಡಿದ್ದಾರೆ.