Belagavi: ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಮೃತದೇಹ ಮಹಾರಾಷ್ಟ್ರ ಗೋವಾ ಗಡಿಯಲ್ಲಿ ಪತ್ತೆ

|

Updated on: Jun 24, 2023 | 4:10 PM

ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಪತ್ನಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೊಲೆಯಾದ ವ್ಯಕ್ತಿಯ ಮೃತದೇಹ ಕರ್ನಾಟಕ ಮಹಾರಾಷ್ಟ್ರ ಗೋವಾ ಗಡಿಯಲ್ಲಿ ಪತ್ತೆಯಾಗಿದೆ.

Belagavi: ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಮೃತದೇಹ ಮಹಾರಾಷ್ಟ್ರ ಗೋವಾ ಗಡಿಯಲ್ಲಿ ಪತ್ತೆ
ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಮೃತದೇಹ ಮಹಾರಾಷ್ಟ್ರ ಗೋವಾ ಗಡಿಯಲ್ಲಿ ಪತ್ತೆ
Image Credit source: istock
Follow us on

ಬೆಳಗಾವಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಕೊಲೆಯಾಗಿದ್ದ (Murder) ರಮೇಶ್ ಕಾಂಬಳೆ (38) ಮೃತದೇಹ ಬೆಳಗಾವಿಯ (Belagavi) ಮಹಾರಾಷ್ಟ್ರ ಗೋವಾ ಗಡಿ ಸಮೀಪದ ಚೋರ್ಲಾ ಘಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಸದ್ಯ ಮೃತದೇಹವನ್ನು ಎಪಿಎಂಸಿ ಠಾಣೆ ಪೊಲೀಸರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಿ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿದ್ದಾರೆ.

ರಮೇಶ್ ಪತ್ನಿ ಸಂಧ್ಯಾ, ಸ್ನೇಹಿತ ಬಾಳು ಬಿರಂಜೆ ನಡುವೆ ಅಕ್ರಮ ಸಂಬಂಧವಿತ್ತು. ಇದಕ್ಕೆ ಅಡ್ಡಿಯಾಗಿದ್ದ ರಮೇಶ್​​ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಮಾರ್ಚ್ 28ರಂದು ಸಂಧ್ಯಾ ತನ್ನ ಪತಿಗೆ ರಾತ್ರಿ ವೇಳೆ ಊಟಕ್ಕೆ ನಿದ್ದೆ ಮಾತ್ರೆ ಬರೆಸಿ ನೀಡಿದ್ದಳು. ಊಟ ಮಾಡಿದ ರಮೇಶ್ ನಿದ್ದೆಗೆ ಜಾರಿದ ನಂತರ ಪ್ರಿಯಕರ ಬಾಳು ಬಿರಂಜೆ ಕರೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.

ಹತ್ಯೆಯ ನಂತರ ಹಂತಕರು ರಮೇಶ್ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ಕಾರಿನ ಮೂಲಕ ತಗೆದುಕೊಂಡು ಹೋಗಿ ಬೆಳಗಾವಿ ಗೋವಾ ಗಡಿಯ ಚೋರ್ಲಾ ಘಾಟ್‌ನಲ್ಲಿ ಎಸೆದು ಮನೆಗೆ ವಾಪಸ್ ಆಗಿದ್ದರು. ಬಳಿಕ ಪತಿ ರಮೇಶ್ ಪರಸ್ತ್ರೀ ಜೊತೆ ಓಡಿ ಹೋಗಿದ್ದಾನೆ ಎಂದು ಕುಟುಂಬಸ್ಥರ ಬಳಿ ಸಂಧ್ಯಾ ಕಥೆ ಕಟ್ಟಿದ್ದಾಳೆ. ಕುಟುಂಬಸ್ಥರ ಒತ್ತಾಯ ಮೇರೆಗೆ ಏ.5 ರಂದು ಗಂಡ ರಮೇಶ್ ನಾಪತ್ತೆ ಆಗಿದ್ದಾಗಿ ದೂರು ನೀಡಿದ್ದಳು.

ಇದನ್ನೂ ಓದಿ: Belagavi News: ಪ್ರಿಯಕರನ ಜೊತೆ ಸೇರಿಕೊಂಡು ಮಗನನ್ನೇ ಕೊಲೆ ಮಾಡಿದ ತಾಯಿ

ರಮೇಶ್ ನಾಪತ್ತೆಯಾದರೂ ಆತನ ಮೊಬೈಲ್ ಮಾತ್ರ ಮನೆಯಲ್ಲಿಯೇ ಇತ್ತು. ರಮೇಶ್ ಮೊಬೈಲ್‌ಗೆ ಯಾವ ಸ್ನೇಹಿತರದ್ದೂ ಕರೆ ಬಾರದ ಹಿನ್ನೆಲೆ ರಮೇಶ್ ಪತ್ನಿ ಹಾಗೂ ಸ್ನೇಹಿತರ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ ಸಂಧ್ಯಾ, ಬಾಳು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ರಮೇಶ್ ಕಾಂಬಳೆ ಓಡಿಹೋಗಿಲ್ಲ ಬದಲಾಗಿ ಹತ್ಯೆಯಾಗಿದ್ದಾನೆ ಎಂಬ ಸತ್ಯಸಂಗತಿ ಹೊರಬಿದ್ದಿದೆ.

ವಿಚಾರಣೆ ವೇಳೆ ಆರೋಪಿಗಳು ಮೃತದೇಹವನ್ನು ಎಸೆದಿರುವ ಸ್ಥಳದ ಸುಳಿವು ನೀಡಿದ್ದಾರೆ. ಅದರಂತೆ ಆರೋಪಿಗಳನ್ನು ಚೋರ್ಲಾ ಘಾಟ್‌ಗೆ ಕರೆದೊಯ್ದು ಮೃತದೇಹ ಪತ್ತೆಹಚ್ಚಲಾಗಿದೆ. ಸದ್ಯ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ರಮೇಶ್ ಮೃತದೇಹವನ್ನು ಬಿಮ್ಸ್ ಅಸ್ಪತ್ರೆಗೆ ರವಾನಿಸಲಾಗಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ