ಅಡಿಕೆ ಕದಿಯಲು ಬಂದಿದ್ದಾನೆಂದು ಭಾವಿಸಿ ವ್ಯಕ್ತಿ ಮೇಲೆ ಫೈರಿಂಗ್

|

Updated on: Sep 09, 2019 | 12:51 PM

ಅಡಿಕೆ ಕದಿಯಲು ಬಂದಿದ್ದಾನೆಂದು ತಿಳಿದು ಗುಂಡು ಹಾರಿಸಿ ವ್ಯಕ್ತಿ ಹತ್ಯೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. ಗುಂಡೇಟಿಗೆ ಕರಿಕೆ ಗ್ರಾಮದ ಗಣೇಶ್ ಎಂಬುವರು ಬಲಿಯಾಗಿದ್ದಾರೆ. ಕರಿಕೆ ಗ್ರಾಮದ ಮೋಣಪ್ಪ ಎಂಬುವರ ಮನೆಗೆ ಗಣೇಶ್ ಹೋಗಿದ್ದ. ಅಡಿಕೆ ಕದಿಯಲು ಬಂದಿದ್ದಾನೆಂದು ಭಾವಿಸಿದ ಮಾಲೀಕ ಮೋಣಪ್ಪ ತಕ್ಷಣ ಗುಂಡು ಗಣೇಶ್ ಮೇಲೆ ಗುಂಡುಹಾರಿಸಿದ್ದಾನೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ಮೃತಪಟ್ಟಿದ್ದಾನೆ. ಇನ್ನು ಈ ಸಂಬಂಧ ಭಾಗಮಂಡಲ ಪೊಲೀಸರು […]

ಅಡಿಕೆ ಕದಿಯಲು ಬಂದಿದ್ದಾನೆಂದು ಭಾವಿಸಿ ವ್ಯಕ್ತಿ ಮೇಲೆ ಫೈರಿಂಗ್
Follow us on

ಅಡಿಕೆ ಕದಿಯಲು ಬಂದಿದ್ದಾನೆಂದು ತಿಳಿದು ಗುಂಡು ಹಾರಿಸಿ ವ್ಯಕ್ತಿ ಹತ್ಯೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. ಗುಂಡೇಟಿಗೆ ಕರಿಕೆ ಗ್ರಾಮದ ಗಣೇಶ್ ಎಂಬುವರು ಬಲಿಯಾಗಿದ್ದಾರೆ.

ಕರಿಕೆ ಗ್ರಾಮದ ಮೋಣಪ್ಪ ಎಂಬುವರ ಮನೆಗೆ ಗಣೇಶ್ ಹೋಗಿದ್ದ. ಅಡಿಕೆ ಕದಿಯಲು ಬಂದಿದ್ದಾನೆಂದು ಭಾವಿಸಿದ ಮಾಲೀಕ ಮೋಣಪ್ಪ ತಕ್ಷಣ ಗುಂಡು ಗಣೇಶ್ ಮೇಲೆ ಗುಂಡುಹಾರಿಸಿದ್ದಾನೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ಮೃತಪಟ್ಟಿದ್ದಾನೆ. ಇನ್ನು ಈ ಸಂಬಂಧ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Published On - 4:16 pm, Fri, 30 August 19