ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ (Acid) ದಾಳಿ ಮಾಡಿದ್ದ ಆರೋಪಿ ನಾಗೇಶ್, ಕೃತ್ಯ ಎಸಗುವ ಮೊದಲು ಹೊಸ ಸಿಮ್ (Mobile Sim) ಖರೀದಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿ ಹೊಸ ಸಿಮ್ ಖರೀದಿಸಿದ್ದಾರೆ. ಆರೋಪಿ ಕಾಲ್ ಡೀಟೈಲ್ಸ್ ಹುಡುಕಾಡಿದಾಗ ಸಿಮ್ ಖರೀದಿ ಮಾಡಿರುವುದು ಪತ್ತೆಯಾಗಿದೆ. ಹಳೆಯ ಮೊಬೈಲ್ನ ಹೊಸಕೋಟೆ ಬಳಿ ಎಸೆದು ಹೋಗಿದ್ದಾನೆ. ಪರಾರಿಯಾಗಿರುವ ನಾಗೇಶ್ ಇನ್ನು ಹೊಸ ಸಿಮ್ನ ಆಕ್ಟಿವೇಷನ್ ಮಾಡಿಕೊಂಡಿಲ್ಲ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದಾಗ ಆರೋಪಿ ಆ್ಯಸಿಡ್ ದಾಳಿ ಬಗ್ಗೆ ಮೊದಲೇ ಪ್ಲ್ಯಾನ್ ಮಾಡಿದ್ದ ಎಂದು ತಿಳಿಯುತ್ತದೆ.
ಇನ್ನು ದಾಳಿಗೆ ಒಳಗಾಗಿದ್ದ ಸಂತ್ರಸ್ತೆಗೆ ನಿನ್ನೆಯಿಂದ (ಮೇ 2) ಚರ್ಮ ಜೋಡಣೆ ಕಾರ್ಯ ಆರಂಭವಾಗಿದೆ. ಯುವತಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ನುರಿತ ವೈದ್ಯರ ತಂಡದಿಂದ ಸುಟ್ಟ ಭಾಗಕ್ಕೆ ಚರ್ಮ ಜೋಡಣೆ ಮಾಡುತ್ತಿದ್ದಾರೆ. ಸದ್ಯ ಯುವತಿಯ ಸ್ಥಿತಿ ಸಹಜವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ.
ಮಹಿಳೆಯರ ಭಯ ಮುಕ್ತ ಕರ್ನಾಟಕ ಹೆಸರಿನಲ್ಲಿ ಬೈಕ್ ರ್ಯಾಲಿ:
ರಾಯಚೂರು: ಯುವತಿಯರು ಮಹಿಳೆಯರ ಭಯ ಮುಕ್ತ ಕರ್ನಾಟಕ ಹೆಸರಿನಲ್ಲಿ ರಾಜ್ಯಾದ್ಯಂತ ಬೈಕ್ ರ್ಯಾಲಿ ಮಾಡುತ್ತಿದ್ದಾರೆ. ಸದ್ಯ ಬೈಕ್ ರ್ಯಾಲಿ ರಾಯಚೂರು ತಲುಪಿದೆ. ಆಸಿಡ್ ದಾಳಿಗೆ ಒಳಗಾಗಿರುವವರಿಗೆ ಸ್ಕಿನ್ ಡೊನೇಶನ್ ಇತರೆ ಮಹಿಳಾ ಸಮಸ್ಯೆಗಳ ಕುರಿತು ಸಂದೇಶ ಸಾರುತ್ತಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ಆಸಿಡ್ ದಾಳಿ ಕೇಸ್ ವಿರುದ್ಧ ಕಿಡಿಕಾರಿದ್ದಾರೆ. ಟಿವಿ9ಗೆ ಹೇಳಿಕೆ ನೀಡಿದ ಕೀರ್ತಿನಿ, ಮುಂಬೈನಲ್ಲಿ ಆಸಿಡ್ ಕೇಸ್ ನೋಡುತ್ತಿದ್ದೆವು. ಈಗ ಕರ್ನಾಟಕದಲ್ಲಿ ಮತ್ತೆ ಆಗುತ್ತಿವೆ. ಆರೋಪಿಯನ್ನು ಕರೆತಂದು ನಡು ರಸ್ತೆಯಲ್ಲಿ ನಿಲ್ಲಿಸಬೇಕು. ಅವನಿಗೆ ಸೀಮೆ ಎಣ್ಣೆ ಸುರಿದು, ಬೊಬ್ಬೆಗಳು ಬರೋ ಹಾಗೆ ಮಾಡಬೇಕು. ಅವನನ್ನು ಸಾಯಿಸೋದು ಬೇಡ, ಆತನನ್ನು ಬದುಕಿಸಿ. ಆದರೆ ಆರೋಪಿಗೆ ಆ ನರಳಾಟ ಏನು ಅನ್ನೋದು ಗೊತ್ತಾಗಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ಕನ್ನಡದ ‘ಟಾಕೀಸ್’ ಲಾಂಚ್ ಮಾಡಿದ ಶಿವಣ್ಣ; ಇದರಲ್ಲಿ ಇದ್ದಾರೆ ಸಾವಿರಕ್ಕೂ ಹೆಚ್ಚು ಕಲಾವಿದರು
Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ
Published On - 9:14 am, Tue, 3 May 22