ಬೆಂಗಳೂರು: ಶೌಚಾಲಯದಲ್ಲಿ ಬಿದ್ದಿರುವ ಮೃತದೇಹ, ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ, ಮೃತ ದೇಹವನ್ನ ಹೊರಗಿಟ್ಟು ಕಂಪನಿ ವಿರುದ್ದ ಪ್ರತಿಭಟನೆ. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿ(Bengaluru)ನ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟೀಲ್ ಪ್ರೊಫೈಲ್ ಕೈಗಾರಿಕೆ ಬಳಿ. ಹೌದು ಇದೇ ಕೈಗಾರಿಕೆಯಲ್ಲಿ ಕಳೆದ ಎರಡುವರೆ ವರ್ಷದಿಂದ ಕೆಲಸ ಮಾಡುತ್ತಿದ್ದ 40 ವರ್ಷದ ಸಾಬಪ್ಪ ಲಗಳಿ ಅವರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದೀಗ ಇವರ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ.
ಮೃತ ಸಾಬಪ್ಪ ರೈನ್‌ಬೋ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡುವರೆ ವರ್ಷಗಳಿಂದ ಸ್ಟೀಲ್ ಪ್ರೊಫೈಲ್ ಕಾರ್ಖಾನೆಯಲ್ಲಿಯೇ ಕೆಲಸ ಮಾಡುತ್ತಿದ್ದ. ಎಂದಿನಂತೆ ನಿನ್ನೆ(ಮೇ.18) ರಾತ್ರಿ ಪಾಳಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡಿದ್ದಾನೆ. ಮತ್ತೆ ಮುಂಜಾನೆ ಪಾಳಿ ಮುಂದುವರೆಸು ಎಂದು ಸಂಸ್ಥೆಯವರು ಹೇಳಿದ್ದರಂತೆ. ಈ ವೇಳೆ ಶೌಚಾಲಯಕ್ಕೆ ತೆರಳಿದ್ದ ಸಾಬಪ್ಪ ಶೌಚಾಲಯದಲ್ಲೆ ಅಂಗಾತ ಬಿದ್ದಿದ್ದಾನೆ. ಎಷ್ಟೋತ್ತಾದರು ಬರಲಿಲ್ಲವೆಂದು ಸಹೋದ್ಯೋಗಿಗಳು ನೋಡಿದಾಗ ಸಾಬಪ್ಪ ಸಾವನ್ನಪ್ಪಿರುವುದು ದೃಡ ಪಟ್ಟಿದೆ. ಒಟ್ಟಿನಲ್ಲಿ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಗಂಡನನ್ನ ಕಳೆದುಕೊಂಡ ಹೆಂಡತಿ ನೋವಿನಲ್ಲಿ ಕೈತೊಳೆಯುತ್ತಿದ್ದು, ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈಜಲು ತುಂಗಾ ನದಿಗೆ ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಚಿಕ್ಕಮಗಳೂರು: ಈಜಲೆಂದು ತುಂಗಾ ನದಿಗೆ ಇಳಿದ ಇಬ್ಬರು ವಿದ್ಯಾರ್ಥಿಗಳಿಬ್ಬರು ನೀರುಪಾಲದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (20) ಹಾಗೂ ರಕ್ಷಿತ್ (20) ನೀರುಪಾಲಾದ ವಿದ್ಯಾರ್ಥಿಗಳು. ಶೃಂಗೇರಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರಕ್ಷಿತ್, ಪ್ರಜ್ವಲ್ ನೆಮ್ಮಾರಿನ ಸುಂಕದಮಕ್ಕಿ ತೂಗುಸೇತುವೆ ಬಳಿ ಈಜಲೆಂದು ನದಿಗಿಳಿದಿದ್ದಾರೆ. ಈ ವೇಳೆ ನೀರು ಪಾಲಾಗಿದ್ದಾರೆ. ಘಟನೆ ಸಂಬಂಧ ಶೃಂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ : ಮರಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿರುವ ಬಸ್ ಡಿಪೋ ಬಳಿ ನಡೆದಿದೆ. ಅನೂಪ್ ಇಟಗಿ (15), ಶ್ರೀಶಾಂತ್ ಗಡಗಿ (15) ಮೃತ ಬಾಲಕರು. ಅಬ್ಬಿಗೇರಿ ಗ್ರಾಮದ ಬಳಿಯ ಕಲಾಕಾಶಿ ಈಜುಕೊಳ್ಳದಿಂದ ವಾಪಸಾಗುವಾಗ ನಿಯಂತ್ರಣ ಕಳೆದುಕೊಂಡು ಮರಕ್ಕೆ ಬೈಕ್ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ