ಬೆಂಗಳೂರು: ಅತ್ತ ಕೊರೊನಾದ ಆರ್ಭಟ ಏರುತ್ತಲೇ ಇದ್ದರೆ ಇತ್ತ ನಗರದಲ್ಲಿ ಕ್ರೈಮ್ ಕೂಡ ಜಾಸ್ತಿ ಆಗುತ್ತಲೇ ಇದೆ. ಇದೀಗ, ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿ ಮಾಲೀಕನೊಬ್ಬನನ್ನ ಬರ್ಬರವಾಗಿ ಕೊಲೆಮಾಡಿರುವ ಘಟನೆ ವಿಜಯನಗರದ RPC ಲೇಔಟ್ನಲ್ಲಿ ನಡೆದಿದೆ. ಬಡಾವಣೆಯಲ್ಲಿ ಬೆಸ್ಟ್ ಟೂರ್ಸ್ ಌಂಡ್ ಟ್ರಾವೆಲ್ಸ್ ಹಾಗೂ ಬೆಸ್ಟ್ ಪೆಸ್ಟ್ ಕಂಟ್ರೋಲ್ ಎಂಬ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದ ಹನುಮೇಶ್ ಗೌಡ ಮೃತ ದುರ್ದೈವಿ.
ಇಂದು ಸಂಜೆ ಕಸ್ಟಮರ್ಗಳ ಸೋಗಿನಲ್ಲಿ ಅಂಗಡಿಗೆ ಬಂದಿರೋ ದುಷ್ಕರ್ಮಿಗಳು ಹನುಮೇಶ್ ಗೌಡಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ವಿಜಯನಗರ ಎಸಿಪಿ ಹಾಗೂ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.