ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾದರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ

| Updated By: Rakesh Nayak Manchi

Updated on: Oct 07, 2022 | 7:31 AM

ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಸದ್ದಿಲ್ಲದೆ ಸಂಚು ರೂಪಿಸುತ್ತಿದ್ದ ನಿಷೇಧಿತ ಪಿಎಫ್​ಐ, ದೇಶದಲ್ಲಿ ಗಲಭೆ, ಜಗಳ ಸೃಷ್ಟಿಸಿ ಕೋಮು ಸಾಮರಸ್ಯ ಕದಡಲೆಂದೇ ಒಂದು ಮಿಲಿಟರಿ ಮಾದರಿಯ ಸೇನೆಯನ್ನು ಸಜ್ಜುಗೊಳಿಸಿತ್ತು.

ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾದರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ
ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾಧರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ
Follow us on

ಮಂಗಳೂರು: ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಸದ್ದಿಲ್ಲದೆ ಸಂಚು ರೂಪಿಸುತ್ತಿದ್ದ ನಿಷೇಧಿತ ಪಿಎಫ್​ಐ (PFI) ಸಂಘಟನೆಯ ಒಂದೊಂದೇ ಅಸಲಿ ಮುಖವಾಡ ಕಳಚಿ ಬೀಳುತ್ತಿದೆ. ಇದೀಗ ಮತ್ತೊಂದು ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ದೇಶದಲ್ಲಿ ಗಲಭೆ, ಜಗಳ ಸೃಷ್ಟಿಸಿ ಕೋಮು ಸಾಮರಸ್ಯ ಕದಡಲೆಂದೇ ಒಂದು ಮಿಲಿಟರಿ ಮಾದರಿಯ ಸೇನೆಯನ್ನು ಸಜ್ಜುಗೊಳಿಸಿತ್ತು. ಸಾಮರ್ಥ್ಯವುಳ್ಳ  ಯುವಕರೇ ಇದಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಏನೇ ಜಗಳ, ಗಲಭೆ ಇದ್ದರೆ ಬೇರೆ ಯಾರೂ ಹೋಗುವಂತಿಲ್ಲ. ಕೊಲೆ, ಪ್ರತಿಕಾರ, ಜಗಳಕ್ಕೆ ಇದೇ ತಂಡದ ಸದಸ್ಯರು ಹೋಗಬೇಕಿತ್ತು. ಈ ಕುಕೃತ್ಯ ಎಸಗುವ ತಂಡಕ್ಕೂ ಒಂದು ಹೆಸರಿದೆ. ಆ ತಂಡದ ಹೆಸರು ಇದೀಗ ಟಿವಿ9ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪಿಎಫ್ಐ ಮಿಲಿಟರಿ ಮಾಧರಿಯ ಪರ್ಯಾಯ ಸೇನೆ ತಯಾರು ಮಾಡಲು ಪಿಎಫ್​ಐ ಹೊರಟ್ಟಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಕರಾವಳಿಯಲ್ಲಿ ಆಳವಾಗಿ ಬೇರೂರಿದ್ದ ಪಿಎಫ್​ಐ, ದೇಶದಲ್ಲಿ ದುಷ್ಕೃತ್ಯ ಎಸಗಲು ಡೇಂಜರಸ್ ತಂಡವನ್ನು ರಚಿಸಿತ್ತು. ಅದಕ್ಕೆ ಅಸಾಲ್ಟ್ ಟೀಮ್ ಎಂದು ಹೆಸರಿಡಲಾಗಿತ್ತು. ಇದು ಸೇನೆಯ ಮೊದಲ ಹಂತದ ಗುಂಪಿನ ಹೆಸರಾಗಿದೆ.

ಅಸಾಲ್ಟ್ ಟೀಮ್ ಅನ್ನೊದು ಪಿಎಫ್ಐ ಪೂರ್ಣ ತರಬೇತಿ ಪಡೆದ ಗುಂಪಿನ ಹೆಸರಾಗಿದೆ. ಈ ತಂಡಕ್ಕೆ ಆಯ್ಕೆಯಾದವರಿಗೆ ಕಠಿಣ ತರಬೇತಿ ನೀಡಲಾಗುತ್ತಿತ್ತು. ಗಟ್ಟುಮುಟ್ಟಾದ ದೇಹದಾಡ್ಯ ಮತ್ತು ಕಿಲಾಡಿಗಳಿಗೆ ಅಸಾಲ್ಟ್ ಟೀಮ್ ತರಬೇತಿ ನೀಡುತ್ತಿತ್ತು. ಈ ತಂಡವು ಕೇವಲ ದಾಳಿ ಹಾಗೂ ಅಪರಾಧ ಕೃತ್ಯಗಳನ್ನು ಎಸಗಲೆಂದೇ ರಚಿಸಲಾಗಿದೆ ಎಂಬುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ದೇಶದಲ್ಲಿ ಏನೇ ಗಲಾಟೆ, ಗಲಭೆ ಮಾಡಲು ಬೇರೆಯವರು ಹೋಗುವಂತಿರಲಿಲ್ಲ. ಕೊಲೆ, ಪ್ರತಿಕಾರ, ಗಲಾಟೆ, ಗಲಭಗೆ ಅಸಾಲ್ಟ್ ಟೀಮ್ ಸದಸ್ಯರೇ ಹೋಗಬೇಕಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Fri, 7 October 22