ಬೆಟ್ಟಿಂಗ್ ಜಾಲ: ಌಪ್​ ಬಳಸಿ ದಾರಿ ತಪ್ಪಿಸುತ್ತಿದ್ದ ಖತರ್ನಾಕ್​ಗಳು ಅಂದರ್!

|

Updated on: Feb 13, 2020 | 12:33 PM

ತುಮಕೂರು: ಆ ಗ್ಯಾಂಗ್ ಪೊಲೀಸರ ಸುತ್ತಮುತ್ತ ಇದ್ದು ದಂಧೆ ನಡೆಸುತ್ತಿತ್ತು. ಆದ್ರೆ ಯಾವತ್ತೂ ಖಾಕಿ ಕೈಗೆ ತಗಲಾಕ್ಕೊಂಡಿರಲಿಲ್ಲ. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೀಗೆ ಆನ್​ಲೈನ್ ದಂಧೆಕೋರರ ಬೆನ್ನು ಹತ್ತಿದ್ದ ಖಾಕಿ ಪಡೆಗೆ ಕಡೆಗೂ ಯಶಸ್ಸು ಸಿಕ್ಕಿದೆ. ಕದ್ದುಮುಚ್ಚಿ ಕಳ್ಳ ವ್ಯವಹಾರ ನಡೆಸ್ತಿದ್ದ ಖತರ್ನಾಕ್​ಗಳು ಕಂಬಿ ಹಿಂದೆ ಬಿದ್ದಿದ್ದಾರೆ. ತುಮಕೂರು ನಗರದಲ್ಲಿ ಬೆಟ್ಟಿಂಗ್ ಜಾಲ..! 30 ವರ್ಷ ತುಂಬದ ಶ್ರೀಮಂತರ ಮಕ್ಕಳು, ಏನೂ ತಿಳಿಯದ ಮುಗ್ಧರು ಅನ್ನೋ ಹಾಗೆ ಕಾಣಿಸೋ ಆರೋಪಿಗಳು ಮಾಡಬಾರದ್ದನ್ನ ಮಾಡಿ ಪೊಲೀಸರ […]

ಬೆಟ್ಟಿಂಗ್ ಜಾಲ: ಌಪ್​ ಬಳಸಿ ದಾರಿ ತಪ್ಪಿಸುತ್ತಿದ್ದ ಖತರ್ನಾಕ್​ಗಳು ಅಂದರ್!
Follow us on

ತುಮಕೂರು: ಆ ಗ್ಯಾಂಗ್ ಪೊಲೀಸರ ಸುತ್ತಮುತ್ತ ಇದ್ದು ದಂಧೆ ನಡೆಸುತ್ತಿತ್ತು. ಆದ್ರೆ ಯಾವತ್ತೂ ಖಾಕಿ ಕೈಗೆ ತಗಲಾಕ್ಕೊಂಡಿರಲಿಲ್ಲ. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೀಗೆ ಆನ್​ಲೈನ್ ದಂಧೆಕೋರರ ಬೆನ್ನು ಹತ್ತಿದ್ದ ಖಾಕಿ ಪಡೆಗೆ ಕಡೆಗೂ ಯಶಸ್ಸು ಸಿಕ್ಕಿದೆ. ಕದ್ದುಮುಚ್ಚಿ ಕಳ್ಳ ವ್ಯವಹಾರ ನಡೆಸ್ತಿದ್ದ ಖತರ್ನಾಕ್​ಗಳು ಕಂಬಿ ಹಿಂದೆ ಬಿದ್ದಿದ್ದಾರೆ.

ತುಮಕೂರು ನಗರದಲ್ಲಿ ಬೆಟ್ಟಿಂಗ್ ಜಾಲ..!
30 ವರ್ಷ ತುಂಬದ ಶ್ರೀಮಂತರ ಮಕ್ಕಳು, ಏನೂ ತಿಳಿಯದ ಮುಗ್ಧರು ಅನ್ನೋ ಹಾಗೆ ಕಾಣಿಸೋ ಆರೋಪಿಗಳು ಮಾಡಬಾರದ್ದನ್ನ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಖತರ್ನಾಕ್ ಗ್ಯಾಂಗ್ ಌಪ್​ಗಳ ಮೂಲಕ ತುಮಕೂರು ನಗರದಲ್ಲಿ ಬೆಟ್ಟಿಂಗ್ ಜಾಲ ರೂಪಿಸಿ, ಮೋಸ ಮಾಡುತ್ತಿತ್ತು. ಹೀಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ಹಣ ದೋಚಿದ್ರೂ ಯಾರಿಗೂ ಗೊತ್ತಾಗ್ತಿರಲಿಲ್ಲ.

ಆದ್ರೆ ಪಕ್ಕಾ ಪ್ಲಾನ್ ಮಾಡಿ ಫೀಲ್ಡ್​ಗೆ ಇಳಿದ ಖಾಕಿ ಪಡೆ ಖತರ್ನಾಕ್​ಗಳನ್ನ ಬಲೆಗೆ ಕೆಡವಿದೆ. ತುಮಕೂರು ನಗರದ ಸೈಬರ್ ಕ್ರೈಮ್ ಪೊಲೀಸ್ರು 6 ಆರೋಪಿಗಳನ್ನ ಬಂಧಿಸಿ 7.15 ಲಕ್ಷ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನ ಮಹಾಂತೇಶ್, ರಾಜೇಶ್, ದಿಲೀಪ್‌ ಕುಮಾರ್‌, ಅರ್ಜುನ್‌, ಅಶ್ವಿನ್‌ ಹಾಗೂ ಧನುಷ್‌ ಅಂತಾ ಗುರುತಿಸಲಾಗಿದೆ.

ಖಾಸಗಿ ಲಾಡ್ಜ್​ನಲ್ಲಿ ಕೂತು ದಂಧೆ ನಡೆಸ್ತಿದ್ರು!
ಅಂದಹಾಗೆ ಹೀಗೆ ಇವರೆಲ್ಲಾ ಬೆಟ್ಟಿಂಗ್ ವ್ಯವಹಾರ ನಡೆಸಲು ಌಪ್​ಗಳನ್ನ ಬಳಸುತ್ತಿದ್ರು ಕೂಡ, ಲಾಡ್ಜ್​ನಲ್ಲೇ ಕುಳಿತು ದಂಧೆ ನಡೆಸ್ತಿದ್ರು. ಹೀಗೆ ತುಮಕೂರು ನಗರದ ಲಾಡ್ಜ್ ಒಂದರಲ್ಲಿ ದಂಧೆ ನಡೆಸುವಾಗ ಲಾಕ್ ಆಗಿದ್ದಾರೆ. ಈ ಕಿರಾತಕರನ್ನ ಬಂಧಿಸಿರುವ ಪೊಲೀಸರು ದಂಧೆಯ ಹಿಂದಿರುವ ಕಾಣದ ಕೈಗಳ ಹುಡುಕಾಟದಲ್ಲಿ ಬ್ಯೂಸಿಯಾಗಿದ್ದಾರೆ.

ಒಟ್ನಲ್ಲಿ ಅಮಾಯಕರನ್ನೇ ಟಾರ್ಗೆಟ್ ಮಾಡಿ, ಮೋಸ ಮಾಡುತ್ತಿದ್ದವರು ಜೈಲು ಸೇರಿದ್ದಾರೆ. ದುಡ್ಡ ಮಾಡಲು ಬೆಟ್ಟಿಂಗ್ ಮೊರೆ ಹೋಗಿದ್ದ ಕಿರಾತಕರೆಲ್ಲಾ ಅಂದರ್ ಆಗಿದ್ದು, ದಂಧೆ ಹಿಂದಿರುವ ಮತ್ತಷ್ಟು ವ್ಯಕ್ತಿಗಳನ್ನ ಬಲೆ ಕೆಡವಲು ತುಮಕೂರು ನಗರದ ಸೈಬರ್ ಕ್ರೈಮ್ ಸನ್ನದ್ಧರಾಗಿದ್ದಾರೆ.

Published On - 7:32 pm, Wed, 12 February 20