ರಿಪೀಟ್​ ಕಳ್ಳತನಕ್ಕೆ ಹೋದ, ಸಿಕ್ಕಿಬಿದ್ದು ಧರ್ಮದೇಟು ತಿಂದ

ಶಿವಮೊಗ್ಗ:  ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಿ ಸಿಕ್ಕಿ ಬಿದ್ದು, ಜನಗಳತ್ರ ಧರ್ಮದೇಟು ತಿಂದಿದ್ದಾನೆ. ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿರುವ ಶ್ರೀ ಕುಕ್ಕೆ ಸುಬ್ರಮಣ್ಯ ಎಂಬ ಚಿನ್ನದ ಅಂಗಡಿಗೆ ಅಬ್ಬಾಸ್ ಖಾನ್ ಹೆಸರಿನ ವ್ಯಕ್ತಿ 500 ರೂಪಾಯಿ ಚಿಲ್ಲರೆ ಬೇಕೆಂದು ಬಂದು ಸಮಯ ಸಾಧಿಸಿ, ಅಲ್ಲೇ ಇದ್ದ 60 ಗ್ರಾಂ ಮಾಂಗಲ್ಯ ಸರವನ್ನು ಕದ್ದು, ಎಸ್ಕೇಪ್ ಆಗಿದ್ದ. ಮಾಂಗಲ್ಯ ಸರ ಕದ್ದ ಬಳಿಕ ಅಂದೇ ಸಂಜೆ ಇನ್ನೊಂದು ಅಂಗಡಿಗೆ ಕದಿಯಲು ಹೋದಾಗ ಸ್ಥಳೀಯರ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಕಳ್ಳನನ್ನು ಪೊಲೀಸರು […]

ರಿಪೀಟ್​ ಕಳ್ಳತನಕ್ಕೆ ಹೋದ, ಸಿಕ್ಕಿಬಿದ್ದು ಧರ್ಮದೇಟು ತಿಂದ
ಸಾಧು ಶ್ರೀನಾಥ್​

Updated on: Sep 19, 2019 | 4:54 PM

ಶಿವಮೊಗ್ಗ:  ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಿ ಸಿಕ್ಕಿ ಬಿದ್ದು, ಜನಗಳತ್ರ ಧರ್ಮದೇಟು ತಿಂದಿದ್ದಾನೆ. ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿರುವ ಶ್ರೀ ಕುಕ್ಕೆ ಸುಬ್ರಮಣ್ಯ ಎಂಬ ಚಿನ್ನದ ಅಂಗಡಿಗೆ ಅಬ್ಬಾಸ್ ಖಾನ್ ಹೆಸರಿನ ವ್ಯಕ್ತಿ 500 ರೂಪಾಯಿ ಚಿಲ್ಲರೆ ಬೇಕೆಂದು ಬಂದು ಸಮಯ ಸಾಧಿಸಿ, ಅಲ್ಲೇ ಇದ್ದ 60 ಗ್ರಾಂ ಮಾಂಗಲ್ಯ ಸರವನ್ನು ಕದ್ದು, ಎಸ್ಕೇಪ್ ಆಗಿದ್ದ. ಮಾಂಗಲ್ಯ ಸರ ಕದ್ದ ಬಳಿಕ ಅಂದೇ ಸಂಜೆ ಇನ್ನೊಂದು ಅಂಗಡಿಗೆ ಕದಿಯಲು ಹೋದಾಗ ಸ್ಥಳೀಯರ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಒಂಟಿ ಮಹಿಳೆಯರೇ ಈ ಕಳ್ಳರ ಟಾರ್ಗೆಟ್:
ಇದೇ ರೀತಿಯ ಮತ್ತೊಂದು ಪ್ರಕರಣ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ನಡೆದಿದೆ. ಈ ಕಳ್ಳರು ಟಾರ್ಗೆಟ್ ಮಾಡುತಿದ್ದುದ್ದೆ ಒಂಟಿ ಮಹಿಳೆಯರು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಒಂಟಿಯಾಗಿ ಓಡಾಡ್ತಿದ್ದಂತಹ ಮಹಿಳೆಯರನ್ನ ಟಾರ್ಗೆಟ್ ಮಾಡಿ ಅವರ ಬಳಿಯಿದ್ದ ಚಿನ್ನವನ್ನ ಕದಿಯುತ್ತಿದ್ದರು. ಆದರೆ ಈಗ ಮಂಜುನಾಥ್ ಮತ್ತು ಶ್ರೀನಿವಾಸ್ ಎಂಬ ಸರಗಳ್ಳರನ್ನ ತಾಲೂಕಿನ ನಂದಗುಡಿ ಪೊಲೀಸರು ಬಂಧಿಸಿದ್ದು, 125 ಗ್ರಾಂನ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.

Published On - 2:11 pm, Thu, 19 September 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us