ಪ್ರೀತಿಸಿ ಕೈಕೊಟ್ಟ ಟೀಚರ್, ಮನನೊಂದು ಆತ್ಮಹತ್ಯೆ ಮಾಡಿಕೊಂಡ 10ನೇ ಕ್ಲಾಸ್ ಸ್ಟುಡೆಂಟ್

ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ವಿದ್ಯಾರ್ಥಿಯನ್ನೇ ಪ್ರೀತಿ ಬಲೆ ಬೀಳಿಸಿಕೊಂಡಿದ್ದ ಶಿಕ್ಷಕಿಗೆ ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಪ್ರೀತಿಸಿ ಕೈಕೊಟ್ಟ ಟೀಚರ್, ಮನನೊಂದು ಆತ್ಮಹತ್ಯೆ ಮಾಡಿಕೊಂಡ 10ನೇ ಕ್ಲಾಸ್ ಸ್ಟುಡೆಂಟ್
ಪ್ರಾತಿನಿಧಿಕ ಚಿತ್ರ
Edited By:

Updated on: Oct 14, 2022 | 7:26 PM

ಚೆನ್ನೈ: ಅಪ್ರಾಪ್ತನ ಜೊತೆ ವಿವಾಹವಾಗಿ ಗರ್ಭಿಣಿಯಾಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ತಮಿಳುನಾಡಿನ ಸೇಲಂ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿರುವುದು ಸುದ್ದಿಯಾಗಿತ್ತು. ಇದೀಗ ಇದೇ ತಮಿಳುನಾಡಿನಲ್ಲಿ ಶಿಕ್ಷಕಿಯೊಬ್ಬಳು ಪ್ರೀತಿಸಿ ಕೈಕೊಟ್ಟಿರುವುದಕ್ಕೆ ಮನನೊಂದು 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.

ಬಂಧಿತ ಶಿಕ್ಷಕಿ ಚೆನ್ನೈನಿಂದ 20 ಕಿ.ಮೀ ದೂರದಲ್ಲಿರುವ ಅಂಬತ್ತೂರಿನಲ್ಲಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆದ್ರೆ, ಅದೇ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕಿಗೆ ಲವ್ ಆಗಿದೆ.

ಕಾಣೆಯಾಗಿದ್ದ ಅಪ್ರಾಪ್ತ ತನ್ನ ಸೀನಿಯರ್ ಮನೆಯಲ್ಲಿ ಪತ್ತೆ: ಗರ್ಭಿಣಿ ವಿದ್ಯಾರ್ಥಿನಿ ಬಂಧನ

ಶಾಲೆಯಲ್ಲಿ ಮಾಡಿ ಪಾಠ ಅರ್ಥವಾಗದಿದ್ದಾಗ ಅಥವಾ ಪಠ್ಯದ ಬಗ್ಗೆ ಏನಾದರೂ ಗೊಂದಲಗಳು ಇದ್ದಾಗ ವಿದ್ಯಾರ್ಥಿ ಶಿಕ್ಷಕಿಯ ಮನೆ ಹೋಗಿ ಅವರಿಂದ ಅರ್ಥ ಮಾಡಿಸಿಕೊಳ್ಳುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಶಿಕ್ಷಕಿ, ವಿದ್ಯಾರ್ಥಿಯ ತಲೆ ಕೆಡಿಸಿದ್ದಾಳೆ. ಶಿಕ್ಷಕಿ ಬೀಸಿದ ಲವ್​ ಬಲೆಗೆ ವಿದ್ಯಾರ್ಥಿ ಸಹ ಬಿದ್ದಿದ್ದು, ಆಕೆಯನ್ನು ಗಾಢವಾಗಿ ಪ್ರೀತಿಸಿದ್ದಾನೆ.

ಎಷ್ಟರ ಮಟ್ಟಿಗೆ ಅಂದ್ರೆ ಆಕೆ ತನ್ನ ಟೀಚರ್​ ಎನ್ನುವುದನ್ನೇ ಮರೆತು ಬಿಟ್ಟಿದ್ದ. ಬಳಿಕ ಶಿಕ್ಷಕಿಗೆ ಬೇರೊಂದು ಹುಡುಗನ ಜೊತೆ ಎಂಗೇಜ್​ಮೆಂಟ್ ಆಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ಪ್ರೀತಿಸಿದ ವಿದ್ಯಾರ್ಥಿಯಿಂದ ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಒಂದು ತಿಂಗಳ ಹಿಂದೆಯೇ ಆ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪೋಷಕರು ದೂರು ನೀಡಿದ್ದರು. ಬಳಿಕ ಆ ವಿದ್ಯಾರ್ಥಿಯ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಮೊಬೈಲ್​ನಲ್ಲಿ ಶಿಕ್ಷಕಿ ಜೊತೆಗಿರುವ ಫೋಟೋಗಳು ಸಹ ಸಿಕ್ಕಿವೆ. ಹೀಗೆ ಪೊಲೀಸರು ಬೇರೆ-ಬೇರೆ ರೀತಿಯಾಗಿ ತನಿಖೆ ನಡೆಸಿದಾಗ ಶಿಕ್ಷಕಿಯೊಂದಿಗಿನ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ ಎಂದು ಈ ಬಗ್ಗೆ ಅಂಬತ್ತೂರ್ ಪೊಲೀಸ್ ಅಧಿಕಾರಿ ಜ್ಯೋತಿಲಕ್ಷ್ಮೀ ಮಾಹಿತಿ ನೀಡಿದ್ದಾರೆ. ಸಧ್ಯ ಶಿಕ್ಷಕಿಯನ್ನು ಬಂಧಿಸಿಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ.

Published On - 7:22 pm, Fri, 14 October 22

TV9 Web

TV9 Kannada

Read More
Loading...
Unable to load recommendations.
Follow Us