ಕೊಲೆ ಮಾಡಲು ಒಂದು ತಿಂಗಳು ವೆಬ್ ಸೀರೀಸ್ ನೋಡಿದ ಆರೋಪಿಗಳು

|

Updated on: May 10, 2024 | 11:20 AM

ಯುಪಿಯ ಗ್ರೇಟರ್ ನೋಯ್ಡಾದಲ್ಲಿ ನಡೆದ ಕುನಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪೊಲೀಸರು ಕಳೆಹಾಕಿದ್ದಾರೆ. ವೆಬ್ ಸಿರೀಸ್ ನೋಡಿಕೊಂಡು ಕುನಾಲ್​​​ ಎಂಬ ಹುಡುಗನ್ನು ಹತ್ಯೆ ಮಾಡಲಾಗಿದೆ, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಅನೇಕ ಮಾಹಿತಿಗಳು ಸಿಕ್ಕಿವೆ.

ಕೊಲೆ ಮಾಡಲು ಒಂದು ತಿಂಗಳು ವೆಬ್ ಸೀರೀಸ್ ನೋಡಿದ ಆರೋಪಿಗಳು
Follow us on

ಉತ್ತರಪ್ರದೇಶ, ಮೇ.10: ಒಂದು ಸಿನಿಮಾ, ವೆಬ್ ಸೀರೀಸ್, ಧಾರವಾಹಿಗಳು ಜನರ ಮೇಲೆ ಎಷ್ಟು ಪರಿಣಾಮ ಬಿರುತ್ತದೆ ಎಂಬುದಕ್ಕೆ ಅನೇಕ ಘಟನೆಗಳು ನಮ್ಮ ಮುಂದೆ ಇದೆ. ಅದು ಕಲ್ಪನಿಕವಾದರು ಅದನ್ನು ಹುಚ್ಚರಂತೆ ನೋಡಿ ಅದರಂತೆ ಕೆಲವೊಂದು ಪ್ರತಿಕ್ರಿಯೆಗಳನ್ನು ಮಾಡುತ್ತಾರೆ. ಇಂತಹದೇ ಒಂದು ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಕೃಷ್ಣ ಶರ್ಮಾ ಎಂಬ ಹೋಟೆಲ್ ಮಾಲೀಕನ ಮಗ ಕುನಾಲ್ ಶರ್ಮಾನನ್ನು ಮೇ 1 ರಂದು ಹೋಟೆಲ್‌ನಿಂದ ಅಪಹರಿಸಿದ್ದಾರೆ. ಮೇ 5 ರಂದು ಬುಲಂದ್‌ಶಹರ್‌ನ ಕಾಲುವೆಯಲ್ಲಿ ಕುನಾಲ್​​ನ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿಂದತೆ ಬುದ್ಧವಾರ ರಾತ್ರಿ (ಮೇ.8) ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದೆ. ತನಿಖೆ ವೇಳೆ ಭಯಾನಕ ವಿಚಾರಗಳನ್ನು ಕೊಲೆಗಾರರು ಬಿಚ್ಚಿಟ್ಟಿದ್ದಾರೆ.

ಕೊಲೆ ಮಾಡಲು ಒಂದು ತಿಂಗಳ ಹಿಂದೆಯೇ ಇದಕ್ಕೆ ಯೋಜನೆಯನ್ನು ಮಾಡಲಾಗಿತ್ತು. ಕೊಲೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಮತ್ತು ಮೃತ ದೇಹವನ್ನು ವಿಲೇವಾರಿ ಮಾಡುವುದು ಹೇಗೆ? ಎಂಬುದಕ್ಕೆ ಈ ನಾಲ್ವರೂ ಅನೇಕ ವೆಬ್ ಸರಣಿಗಳನ್ನು ವೀಕ್ಷಿಸಿದ್ದಾರೆ. ಅದೇ ರೀತಿಯಲ್ಲಿ ಪ್ಲಾನ್​​ ಮಾಡಿಕೊಂಡಿದ್ದಾರೆ. ಕೊಲೆಗಾರರ ಬೆರಳಚ್ಚುಗಳು ಮೃತದೇಹದ ಮೇಲೆ ಉಳಿದಿದ್ದ ಕಾರಣ ಇದರಿಂದ ನಮ್ಮನ್ನು ಪೊಲೀಸರು ಪತ್ತೆ ಮಾಡಬಹುದು ಎಂದು, ಕುನಾಲ್ ದೇಹವನ್ನು ಡೆಟಾಲ್‌ನಿಂದ ತೊಳೆದಿದ್ದಾರೆ. ನಂತರ ಕುನಾಲ್​​​​​​ ಮೃತದೇಹವನ್ನು ಬೆತ್ತಲೆ ಮಾಡಿ ಕಾಲುವೆಗೆ ಎಸೆದಿದ್ದಾರೆ. ಇದರಿಂದ ದೇಹದ ಮೇಲೆ ಯಾವುದೇ ಗುರುತುಗಳಿದ್ದರೂ, ಅವುಗಳನ್ನು ನೀರಿನಿಂದ ತೊಳೆಯಬಹುದು ಎಂದು ತಿಳಿದುಕೊಂಡಿದ್ದರು.

ಈ ಸತ್ಯವನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಅಪರಾಧ ಎಸಗಿದ ನಂತರ ಸಾಕ್ಷ್ಯ ನಾಶಪಡಿಸುವುದು ಮತ್ತು ಪೊಲೀಸರಿಂದ ರಕ್ಷಿಸುವುದು ಅವರ ಉದ್ದೇಶವಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ. ಇನ್ನು ಕುನಾಲ್​​ ಬಾಯಿಗೆ ಟೆಪ್​​​​ ಹಾಕಿ ಹೊಟೇಲ್​​​ನಿಂದ ಅಪಹರಣ ಮಾಡಲಾಗಿದೆ. ಕಿಡ್ನಾಪ್​​​ಗೆ ಬಳಸಿದ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಹಾಕಲಾಗಿದೆ. ಇದಾದ ಬಳಿಕ ಶವವನ್ನು ವಿಲೇವಾರಿ ಮಾಡಲು ಟ್ರಾಲಿ ಬ್ಯಾಗ್​​ನ್ನು ಬಳಸಲಾಗಿದೆ.

ಇದನ್ನೂ ಓದಿ: ಎಸ್​ಎಸ್​​ಎಲ್​ಸಿಯಲ್ಲಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಕೊಲೆ

ಇನ್ನು ಕುನಾಲ್ ಹತ್ಯೆಗೆ ಹಣದ ವ್ಯವಹಾರವೇ ಕಾರಣ ಎಂದು ಆರೋಪಿಗಳು ತಿಳಿಸಿದ್ದಾರೆ. ಆದರೆ ಇನ್ನೊಂದು ಕಾರಣವಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಕುನಾಲ್ ಈ ಹಿಂದೆ ಆರೋಪಿ ಹಿಮಾಂಶು ನಿಂದಿಸಿದ್ದು, ಇದನ್ನು ಸಹಿದ ಹಿಮಾಂಶು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. . ಮತ್ತೊಂದೆಡೆ ಕುನಾಲ್‌ನ ಚಿಕ್ಕಪ್ಪ (ಸಂಬಂಧಿ) ಮನೋಜ್ ಕೂಡ ಕುನಾಲ್‌ನ ಹತ್ಯೆಗೆ ಕಾರಣವಾಗಿದ್ದಾರೆ ಎಂದು ಹೇಳಲಾಗಿದೆ. ಕುನಾಲ್​​ ತಂದೆಯ ನಂತರ ಕುನಾಲ್​​​ ಹೋಟೆಲ್‌ ವ್ಯವಹಾರಗಳನ್ನು ನೋಡಿಕೊಳ್ಳುತ್ತಾನೆ ಎಂಬ ಕೋಪ ಮನೋಜ್ ಅವರಲ್ಲಿತ್ತು. ಇದರ ಜತೆಗೆ ಕುನಾಲ್ ಹಿಮಾಂಶುಗೆ ಬಡ್ಡಿಗೆ ಹಣ ನೀಡಿದ್ದ, ಇದನ್ನು ವಾಪಸ್ಸು ಕೇಳಿದಕ್ಕೆ ಹೀಗೆ ಮಾಡಲಾಗಿದೆ ಎಂಬುದು ತನಿಖೆಯ ಕೆಲವು ಆಯಮಾಗಳಲ್ಲಿ ತಿಳಿದು ಬಂದಿದೆ.

ಕುನಾಲ್​​​ನ್ನು ಕೊಲೆ ಮಾಡಲು ಇವರು ಕ್ರೈಂ ವೆಬ್​​​ ಸೀರೀಸ್​​​ ನೋಡಿದ್ದಾರೆ ಎಂದು ಹೇಳಲಾಗಿದೆ. ಈ ಸೀರೀಸ್​​​​​ನಂತೆ ಕುನಾಲ್​​ನ್ನು ಕೊಲೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಮೇ 1ರಂದು ಹಿಮಾಂಶು ಕುನಾಲ್​​ನ್ನು ಹೋಟೆಲ್‌ನಿಂದ ಅಪಹರಿಸಿದ್ದಾನೆ. ಈ ವೇಳೆ ಗಲಾಟೆ ಮಾಡದಂತೆ ಕುನಾಲ್ ಗೆ ಅಮಲು ಚುಚ್ಚುಮದ್ದು ನೀಡಿ ಕಾರಿನ ಟ್ರಂಕ್ ಗೆ ಹಾಕಿದ್ದಾರೆ. ನಂತರ ನೋಯ್ಡಾದ ಸೆಕ್ಟರ್ -126 ನಲ್ಲಿರುವ ಹೋಟೆಲ್​​ಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಿ ಕುನಾಲ್​​​ ಸಾವನ್ನಪ್ಪಿದ್ದಾನೆ. ನಂತರ ಆತನ ತಲೆಗೆ ಹೊಡೆದು, ಶವವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಬುಲಂದ್‌ಶಹರ್‌ನಲ್ಲಿರುವ ಕಾಲುವೆಗೆ ಎಸೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.