Bengaluru Crime: ಬಸ್​ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳ ಸೆರೆ

| Updated By: Praveen Sahu

Updated on: Mar 23, 2021 | 12:43 PM

ಬೆಂಗಳೂರಿನ ಬಸ್​ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್​ ಕದಿಯುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

Bengaluru Crime: ಬಸ್​ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳ ಸೆರೆ
ಬಂಧಿತ ಆರೋಪಿ ಸಿದ್ದಿಕ್ ಮತ್ತು ವಶಪಡಿಸಿಕೊಳ್ಳಲಾದ ಚಿನ್ನಾಭರಣ
Follow us on

ಬೆಂಗಳೂರು: ನಗರದಲ್ಲಿ ಬಸ್ ನಿಲ್ದಾಣವನ್ನು ಟಾರ್ಗೆಟ್ ಮಾಡಿ ಪ್ರಯಾಣಿಕರ ಬ್ಯಾಗ್ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಸಿದ್ದಿಕ್ ಎಂಬಾತ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಚಿನ್ನಾಭರಣಗಳಿದ್ದ ಪ್ರಯಾಣಿಕರ ಬ್ಯಾಗ್​ಅನ್ನು ಕದ್ದು ಪರಾರಿಯಾಗಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತನಿಂದ 12 ಲಕ್ಷ ಮೌಲ್ಯದ 275 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಹಿಂದೆಯೂ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ನೆಲಮಂಗಲ; ಸಾಯಿನಗರದಲ್ಲಿ ಮನೆಯ ಬೀಗ ಮುರಿದು ಕಳ್ಳತನ
ಸಾಯಿನಗರದಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಸಾಯಿನಗರದಲ್ಲಿ ಆರ್ಮುಗಂ ಮನೆಯಲ್ಲಿದ್ದ ನಗದು ಹಾಗೂ ಒಡವೆ ಕಳ್ಳತನ ಮಾಡಲಾಗಿದೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ….

ಇದನ್ನೂ ಓದಿ: ದಾವಣಗೆರೆಯಲ್ಲಿ ಹೆಚ್ಚಾದ ಅಡಿಕೆ ಕಳ್ಳತನ; ಒಂದು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆ

ಹಾಲು ಕದಿಯುವ ಬೆಕ್ಕಿಗೆ ಕಳ್ಳರ ಭಯ: ಗದಗ ಜಿಲ್ಲೆಯ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳತನದ ದೃಶ್ಯ

Published On - 12:22 pm, Sun, 21 March 21