ದಾವಣಗೆರೆಯಲ್ಲಿ ಹೆಚ್ಚಾದ ಅಡಿಕೆ ಕಳ್ಳತನ; ಒಂದು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆ
ಅಡಿಕೆ ಇಲ್ಲಿನ ರೈತರ ವಾಣಿಜ್ಯ ಬೆಳೆ. 2010 ರಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಗೆ ಕೇವಲ ಹತ್ತು ಸಾವಿರ ರೂಪಾಯಿಯಿಂದ 15 ಸಾವಿರ ರೂಪಾಯಿ ದರವಿತ್ತು. 2014 ರಲ್ಲಿ ಅಡಿಕೆ ಬೆಲೆ ಒಂದು ಕ್ವಿಂಟಾಲ್ ಅಡಿಕೆಗೆ 99 ಸಾವಿರದಿಂದ ಒಂದು ಲಕ್ಷ ರೂಪಾಯಿ ದರ ಸಿಕ್ಕಿತ್ತು. ಇದನ್ನೆ ನೋಡಿ ಬಹುತೇಕರು ಅಡಿಕೆಯ ಮೊರೆ ಹೋದರು.
ದಾವಣಗೆರೆ: ಜಿಲ್ಲೆಯ ಚನ್ನಗಿರಿಗೆ ಇನ್ನೊಂದು ಹೆಸರೇ ಅಡಿಕೆ ನಾಡು ಅಂತಾ. ಪಕ್ಕದ ಹೊನ್ನಾಳಿಯಲ್ಲಿ ಸಹ ಈಗ ಅಡಿಕೆ ಕ್ರಾಂತಿ ಶುರುವಾಗಿದೆ. ಕೆಂಪು ಅಡಿಕೆಗೆ ದೇಶದಲ್ಲಿ ಪ್ರಸಿದ್ಧ ಪಡೆದ ಪ್ರದೇಶ ಇದಾಗಿದೆ. ಕಾರಣ ಇಲ್ಲಿನ ನೀರು, ಭೂಮಿ ಪರಿಣಾಮವಾಗಿ ಮೃದುವಾದ ಜೊತೆಗೆ ತಿನ್ನಲು ಬಲು ರುಚಿಯಾದ ಅಡಿಕೆ ಇಲ್ಲಿ ಲಭ್ಯವಾಗುತ್ತದೆ. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಪ್ರಸಿದ್ಧಿ ಪಡೆದಿದೆ.
ಅಡಿಕೆ ಇಲ್ಲಿನ ರೈತರ ವಾಣಿಜ್ಯ ಬೆಳೆ. 2010 ರಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಗೆ ಕೇವಲ ಹತ್ತು ಸಾವಿರ ರೂಪಾಯಿಯಿಂದ 15 ಸಾವಿರ ರೂಪಾಯಿ ದರವಿತ್ತು. 2014 ರಲ್ಲಿ ಅಡಿಕೆ ಬೆಲೆ ಒಂದು ಕ್ವಿಂಟಾಲ್ ಅಡಿಕೆಗೆ 99 ಸಾವಿರದಿಂದ ಒಂದು ಲಕ್ಷ ರೂಪಾಯಿ ದರ ಸಿಕ್ಕಿತ್ತು. ಇದನ್ನೆ ನೋಡಿ ಬಹುತೇಕರು ಅಡಿಕೆಯ ಮೊರೆ ಹೋದರು. ಈ ಹಿಂದೆ ರಾಜ್ಯದಲ್ಲಿ ಎರಡು ಲಕ್ಷ ಟನ್ ಅಡಿಕೆ ಉತ್ಪಾದನೆ ಇತ್ತು. ಆದರೆ ಕಳೆದ ಏಳು ವರ್ಷದಲ್ಲಿ ರಾಜ್ಯದಲ್ಲಿ ಬರೋಬರಿ ನಾಲ್ಕು ಲಕ್ಷ ಟನ್ ಅಡಿಕೆ ಉತ್ಪಾದನೆ ಆಗುತ್ತದೆ. ಸದ್ಯ ಪ್ರತಿ ಕ್ವಿಂಟಾಲ್ಗೆ 35 ರಿಂದ 40 ಸಾವಿರ ದರವಿತ್ತು. ಇದೇ ಕಾರಣಕ್ಕೆ ಅಡಿಕೆಗೆ ಕಳ್ಳರ ಕಾಟ ಶುರುವಾಗಿದೆ. ಮಾರ್ಚ್ 16 ರಂದು ಹೊನ್ನಾಳಿ ತಾಲೂಕಿನ ಮಾದಾಪೂರದ ಬಸವನಗೌಡ ಎಂಬ ರೈತನ ನಾಲ್ಕು ಲಕ್ಷ ರೂಪಾಯಿ ಬೆಲೆ ಬಾಳುವ ಅಡಿಕೆ ಕಳ್ಳತನ ಆಗಿದೆ. ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ಒಂದು ಲಕ್ಷ ರೂಪಾಯಿ ಅಡಿಕೆ ಕಳ್ಳತನ ಆಗಿದೆ. ಒಂದು ತಿಂಗಳಲ್ಲಿ ಕನಿಷ್ಟ ಹತ್ತು ಪ್ರಕರಣಗಳು ಪತ್ತೆ ಆಗುತ್ತಲೇ ಇವೆ.
ಕಡಿಮೆಯಾದ ಅಡಿಕೆ ಇಳುವರಿ ಇತ್ತೀಚಿಗೆ ನೀರಿನ ಕೊರತೆಯಿಂದಾಗಿ ಶೇಕಡಾ 50ರಷ್ಟು ಅಡಿಕೆ ಇಳುವರಿ ಕಡಿಮೆ ಆಗಿದೆ. ಜೊತೆಗೆ ನಿರಂತರವಾಗಿ ನಾನಾ ರೋಗಗಳು ಅಡಿಕೆಗೆ ಕಂಡು ಬರುತ್ತಿವೆ. ಕೇಂದ್ರ ಸರ್ಕಾರ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಅಂತಹ ವಿದೇಶಿ ಅಡಿಕೆಗೆ ಕೇವಲ 25 ಸಾವಿರ ರೂಪಾಯಿ ಕ್ವಿಂಟಾಲ್ನಂತೆ ದರ ನಿಗದಿ ಮಾಡಿದೆ. ಹೀಗೆ ದರ ನಿಗದಿ ಮಾಡಿದ ಬಳಿಕ ಕಳ್ಳ ಮಾರ್ಗವಾಗಿ ವಿದೇಶ ಅಡಿಕೆ ಮಾರುಕಟ್ಟೆಗೆ ಬರುತ್ತಿದೆ. ಈ ಎಲ್ಲ ಕಷ್ಟಗಳಿಂದ ರೈತರು ಆತಂಕದಲ್ಲಿದ್ದಾರೆ. ಇದರಲ್ಲಿ ಶಿವಮೊಗ್ಗ, ಭದ್ರಾವತಿ, ದಾವಣಗೆರೆ ಸೇರಿದಂತೆ ಕೆಲವು ಕಡರೆಗಳಲ್ಲಿ ಅಡಿಕೆ ಕಳ್ಳತನ ಗ್ಯಾಂಗ್ಗಳೇ ಇವೆ. ಕೆಲ ಸಲ ರೈತರೇ ಇವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಇತಿಹಾಸವಿದೆ.
ಮಾರುಕಟ್ಟೆಯಲ್ಲಿ ಅಡಿಕೆ ದರ ಹೆಚ್ಚಾಗುತ್ತದೆ ಎಂಬ ಸುದ್ದಿ ಹಬ್ಬುತ್ತಿದೆ. ಇದೇ ಕಾರಣಕ್ಕೆ ಸಂಗ್ರಹಿಸಿದ ಅಡಿಕೆ ಕಳ್ಳತನ ನಡೆಯುತ್ತಿದೆ. ಸ್ಥಳೀಯರೇ ಇಂತಹ ಕಳ್ಳತನ ಮಾಡುತ್ತಿದ್ದಾರೆ. ಯಾರ ಮನೆಯಲ್ಲಿ ಅಡಿಕೆ ಇದೆ ಎಂದು ಮಾಹಿತಿ ಇರುವ ಜನರೇ ಇಂತಹ ಕಳ್ಳತನದಲ್ಲಿ ಭಾಗಿ ಆಗಲಿದ್ದಾರೆ. ಇದಕ್ಕಾಗಿ ಪೊಲೀಸರು ಒಂದು ತಂಡ ರಚನೆ ಮಾಡಿದ್ದಾರೆ. ಅಡಿಕೆ ಕಳ್ಳರಿಗೆ ಬಿಸಿ ಮುಟ್ಟಿಸುವ ಯೋಜನೆಯನ್ನು ರೂಪಿಸಿದ್ದಾರೆ.
ಇದನ್ನೂ ಓದಿ
ಚಿತ್ರದುರ್ಗದಲ್ಲಿ ಹಳ್ಳ ಹಿಡಿದ ಗಂಗಾ ಕಲ್ಯಾಣ ಯೋಜನೆ; ಹೋರಾಟದ ಎಚ್ಚರಿಕೆ ನೀಡಿದ ರೈತರು