ಗಾಂಧಿನಗರದಲ್ಲಿ IPL ಬೆಟ್ಟಿಂಗ್ ದಂಧೆ: ಮೂವರು ಬುಕ್ಕಿಗಳು ಅಂದರ್​

|

Updated on: Sep 27, 2020 | 3:08 PM

ಬೆಂಗಳೂರು: IPL ಪಂದ್ಯಗಳ ಮೇಲೆ ಬೆಟ್ಟಿಂಗ್​ ನಡೆಸುತ್ತಿದ್ದ ಮೂವರು ಬುಕ್ಕಿಗಳನ್ನು CCB ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಭಾವೇಶ್ ಜೈನ್, ಅರವಿಂದ್ ಜೈನ್ ಮತ್ತು ವಿಮಲ್ ಜೈನ್ ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳು ಡೆಲ್ಲಿ ಕ್ಯಾಪಿಟಲ್​ ಹಾಗೂ CSK ತಂಡಗಳ ನಡುವಿನ ಪಂದ್ಯದ ವೇಳೆ ಗಾಂಧಿನಗರದಲ್ಲಿ ಲಕ್ಷ ಲಕ್ಷ ರೂಪಾಯಿ ಬೆಟ್ಟಿಂಗ್ ನಡೆಸಿದ್ದರು ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ CCB ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಬುಕ್ಕಿಗಳಿಂದ 9.50 ಲಕ್ಷ ನಗದು ಸಹ ವಶಕ್ಕೆ […]

ಗಾಂಧಿನಗರದಲ್ಲಿ IPL ಬೆಟ್ಟಿಂಗ್ ದಂಧೆ: ಮೂವರು ಬುಕ್ಕಿಗಳು ಅಂದರ್​
Follow us on

ಬೆಂಗಳೂರು: IPL ಪಂದ್ಯಗಳ ಮೇಲೆ ಬೆಟ್ಟಿಂಗ್​ ನಡೆಸುತ್ತಿದ್ದ ಮೂವರು ಬುಕ್ಕಿಗಳನ್ನು CCB ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಭಾವೇಶ್ ಜೈನ್, ಅರವಿಂದ್ ಜೈನ್ ಮತ್ತು ವಿಮಲ್ ಜೈನ್ ಎಂದು ಗುರುತಿಸಲಾಗಿದೆ.
ಮೂವರು ಆರೋಪಿಗಳು ಡೆಲ್ಲಿ ಕ್ಯಾಪಿಟಲ್​ ಹಾಗೂ CSK ತಂಡಗಳ ನಡುವಿನ ಪಂದ್ಯದ ವೇಳೆ ಗಾಂಧಿನಗರದಲ್ಲಿ ಲಕ್ಷ ಲಕ್ಷ ರೂಪಾಯಿ ಬೆಟ್ಟಿಂಗ್ ನಡೆಸಿದ್ದರು ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ CCB ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಬುಕ್ಕಿಗಳಿಂದ 9.50 ಲಕ್ಷ ನಗದು ಸಹ ವಶಕ್ಕೆ ಪಡೆಯಲಾಗಿದೆ.

ಭಾವೇಶ್ ಜೈನ್, ಅರವಿಂದ್ ಜೈನ್ ಮತ್ತು ವಿಮಲ್ ಜೈನ್ ಇದೇ ರೀತಿ ಹಲವು ಪಂದ್ಯಗಳಲ್ಲಿ ಬೆಟ್ಟಿಂಗ್ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿಯಿಂದ ತನಿಖೆ ಮುಂದುವರಿದಿದೆ.

Published On - 1:38 pm, Sun, 27 September 20