Crime News: ರಾಜಕಾರಣಕ್ಕೆ ತಿರುಗಿದ ಬಡಲ್ ಮರ್ಡರ್: ನನಗೆ ಅಮ್ಮ ಬೇಕೆನ್ನುತ್ತಿರುವ ಬಾಲಕಿ

| Updated By: Rakesh Nayak Manchi

Updated on: Sep 23, 2022 | 2:11 PM

ಜಮೀನು ವಿವಾದ ಸಂಬಂಧ ನಡೆದ ಜೋಡಿ ಮರ್ಡರ್ ಪ್ರಕರಣ ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್ ರಾಜಕೀಯಕ್ಕೆ ತಿರುಗಿದೆ. ಕೋರ್ಟ್​ನಲ್ಲಿ ಆದೇಶ ತಮ್ಮ ವಿರುದ್ಧ ಬಂದಿದ್ದಕ್ಕೆ ಕೋಪಗೊಂಡು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Crime News: ರಾಜಕಾರಣಕ್ಕೆ ತಿರುಗಿದ ಬಡಲ್ ಮರ್ಡರ್: ನನಗೆ ಅಮ್ಮ ಬೇಕೆನ್ನುತ್ತಿರುವ ಬಾಲಕಿ
ರಾಜಕಾರಣಕ್ಕೆ ತಿರುಗಿದ ಜಮೀನಿಗಾಗಿ ನಡೆದಿದ್ದ ಕೊಲೆ ಪ್ರಕರಣ
Follow us on

ತುಮಕೂರು: ಜಮೀನು ವಿವಾದದಲ್ಲಿ ಕೋರ್ಟ್ ತೀರ್ಪು ಎದುರು ಪಾರ್ಟಿ ಪರ ಬಂತೆಂಬ ಕೋಪದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್ ರಾಜಕೀಯಕ್ಕೆ ತಿರುಗಿದೆ. ಗ್ರಾಮದ ಒಂದು ಸೈಟ್ ಜಾಗಕ್ಕಾಗಿ ಆರೋಪಿಗಳು ಮತ್ತು ಕೊಲೆಯಾದವರ ನಡುವೆ ಕಿತ್ತಾಟ ಇತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿ ಕೊಲೆಯಾದವರ ಪರವಾಗಿಯೂ ಬಂದಿತ್ತು. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಿಡಿಗೇಶಿ ಗ್ರಾಮದಲ್ಲಿ ಒಂದು ಸೈಟ್ ಜಾಗ ವಿವಾದದಲ್ಲಿತ್ತು. ಈ ಜಾಗದಲ್ಲಿ ಗಣೇಶ ದೇವಾಲಯ ಕಟ್ಟಲು ಹಲವರು ಪಟ್ಟು ಹಿಡಿದಿದ್ದರು. ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನಯ್ಯ, ಶಿಲ್ಪ ಮತ್ತು ಜೆಡಿಎಸ್​ನಲ್ಲಿ ಗುರುತಿಸಿಕೊಂಡಿದ್ದ ಶ್ರೀಧರ್ ಗುಪ್ತಾ ಅಂಡ್ ಗ್ಯಾಂಗ್ ನಡುವೆ ಈ ಜಾಗದ ಕಿತ್ತಾಟ ನಡೆಯುತ್ತಿತ್ತು. ಈ ವಿವಾದವು ಕೋರ್ಟ್​ ಮೆಟ್ಟಿಲೇರಿ ವಿಚಾರಣೆ ನಡೆದು ಶಿಲ್ಪ ಮತ್ತು ಇತರರ ಪರವಾಗಿ ಜಾಗ ಬಂದಿದೆ.

ಕೋರ್ಟ್​ನಲ್ಲಿ ಜಾಗ ಶಿಲ್ಪ ಮತ್ತಿತರರ ಪರವಾಗಿ ಬಂದ ಹಿನ್ನೆಲೆ ಕೋಪಗೊಂಡ ಶ್ರೀಧರ್ ಗುಪ್ತಾ ಅಂಡ್ ಗ್ಯಾಂಗ್ ಕೊಲೆ ಸಂಚು ರೂಪಿಸಿದ್ದಾರೆ. ಅದರಂತೆ ರಾಮಾಂಜಿನಪ್ಪ ಅವರು ದನಗಳಿಗೆ ಹುಲ್ಲು ಹಾಕಲು ಹೋದಾಗ ದಾಳಿ ನಡೆಸಿದ ದುಷ್ಕರ್ಮಿಗಳು ಕೊಲೆ ಮಾಡಿದರೆ, ಇತ್ತ ಅಂಕಾಳಮ್ಮ ದೇವಾಲಯಕ್ಕೆ ಹೋಗಿ ಬರುವಾಗ ಶಿಲ್ಪ ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಇವರನ್ನ ಬಿಡಿಸಲು ಹೋದ ಮಲ್ಲಿಕಾರ್ಜುನಯ್ಯ ಅವರ ಬೆನ್ನಿಗೂ ಗಾಯಗಳಾಗಿವೆ. ಘಟನೆಯಲ್ಲಿ ರಾಮಾಂಜಿನಪ್ಪ ಮತ್ತು ಶಿಲ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನನಗೆ ತಾಯಿ ಬೇಕೆಂದು ಅಳುತ್ತಿರುವ ಬಾಲಕಿ

ಕೊಲೆಯಾದ ಶಿಲ್ಪಾ ಹಾಗೂ ರಾಮಾಂಜಿನಪ್ಪ ಅವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇತ್ತ ಶಿಲ್ಪಾಳ ಪುತ್ರಿ ಕವನ ತನಗೆ ಅಮ್ಮ ಬೇಕೆನ್ನುತ್ತಿದ್ದಾಳೆ. ನಾವು ಏನು ಮಾಡಿಲ್ಲ ಆದ್ರೂ ಕೊಲೆ‌ ಮಾಡಿದ್ದಾರೆ ನಮಗೆ ಯಾರು ಗತಿಯೆಂದು ಕಣ್ಣೀರು ಸುರಿಸುತ್ತಿದ್ದಾಳೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Fri, 23 September 22