US Crime: ನರಹತ್ಯೆ ಆರೋಪ: ಅಮೆರಿಕದಲ್ಲಿ ಭಾರತೀಯನ ಬಂಧನ

|

Updated on: Feb 07, 2023 | 2:25 PM

ನರಹತ್ಯೆ ಆರೋಪದಲ್ಲಿ ಭಾರತೀಯ ಮೂಲದ ಯುವಕನನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ.

US Crime: ನರಹತ್ಯೆ ಆರೋಪ: ಅಮೆರಿಕದಲ್ಲಿ ಭಾರತೀಯನ ಬಂಧನ
ರವಿತೇಜ
Follow us on

ನರಹತ್ಯೆ ಆರೋಪದಲ್ಲಿ ಭಾರತ ಮೂಲದ ಯುವಕನನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ.ಇದು ಈಸ್ಟರ್ನ್ ಬಿಎಲ್​ವಿಡಿಯ 3200 ಬ್ಲಾಕ್‌ನಲ್ಲಿ ಭಾನುವಾರ ರಾತ್ರಿ 9:30 ರ ಸುಮಾರಿಗೆ ಸಂಭವಿಸಿದೆ. 25 ವರ್ಷದ ಅಖಿಲ್ ಸಾಯಿ ಮಹಂಕಾಳಿ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು ಎಂಬ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮಹಂಕಾಳಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 23 ವರ್ಷದ ರವಿತೇಜ ಗೋಲಿ ಎಂಬಾತನ ಮೇಲೆ ನರಹತ್ಯೆಯ ಆರೋಪ ಮಾಡಲಾಗಿದೆ. ಅವರನ್ನು ಪ್ರಸ್ತುತ ಮಾಂಟ್ಗೊಮೆರಿ ಕೌಂಟಿ ಡಿಟೆನ್ಶನ್ ಫೆಸಿಲಿಟಿಯಲ್ಲಿ ಇರಿಸಲಾಗಿದೆ. ಅವರನ್ನು ಕೊಲೆ ಮಾಡಲು ಹಿಂದಿದ್ದ ಉದ್ದೇಶದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:21 pm, Tue, 7 February 23