ಎಂಜಿಲು ಪ್ಲೇಟ್​ ತಾಗಿತೆಂದು ಮದುವೆ ಮನೆಯಲ್ಲಿ ವೇಯ್ಟರ್​ನ್ನೇ ಹೊಡೆದು ಕೊಂದ ಅತಿಥಿಗಳು

|

Updated on: Dec 07, 2023 | 3:03 PM

ಕ್ಷುಲ್ಲಕ ಕಾರಣಕ್ಕೆ ಮದುವೆ ಮನೆಯಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ. ನವೆಂಬರ್ 17 ರಂದು ಘಟನೆ ನಡೆದಿತ್ತು, ಆಗ ಪಂಕಜ್ ಅಂಕುರ್ ವಿಹಾರ್‌ನ ಸಿಜಿಎಸ್ ವಾಟಿಕಾದಲ್ಲಿ ವೇಯ್ಟರ್​ ಆಗಿ ಕೆಲಸ ಮಾಡುತ್ತಿದ್ದರು.

ಎಂಜಿಲು ಪ್ಲೇಟ್​ ತಾಗಿತೆಂದು ಮದುವೆ ಮನೆಯಲ್ಲಿ ವೇಯ್ಟರ್​ನ್ನೇ ಹೊಡೆದು ಕೊಂದ ಅತಿಥಿಗಳು
ಸಾವು, ಸಾಂದರ್ಭಿಕ ಚಿತ್ರ
Image Credit source: Telegraph
Follow us on

ಕ್ಷುಲ್ಲಕ ಕಾರಣಕ್ಕೆ ಮದುವೆ ಮನೆಯಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ. ನವೆಂಬರ್ 17 ರಂದು ಘಟನೆ ನಡೆದಿತ್ತು, ಆಗ ಪಂಕಜ್ ಅಂಕುರ್ ವಿಹಾರ್‌ನ ಸಿಜಿಎಸ್ ವಾಟಿಕಾದಲ್ಲಿ ವೇಯ್ಟರ್​ ಆಗಿ ಕೆಲಸ ಮಾಡುತ್ತಿದ್ದರು.

ಸಮಾರಂಭದಲ್ಲಿ ಆಹಾರವನ್ನು ಸರ್ವ್​ ಮಾಡುತ್ತಿದ್ದಾಗ, ಪಂಕಜ್ ಅವರ ಬಳಿಯಿದ್ದ ಎಂಜಿಲು ಪ್ಲೇಟ್‌ಗಳು ರಿಷಬ್ ಮತ್ತು ಅವರ ಇಬ್ಬರು ಸ್ನೇಹಿತರಿಗೆ ಅಚಾನಕ್ಕಾಗಿ ತಾಗಿತ್ತು, ಆಗ ಜಗಳ ಪ್ರಾರಂಭವಾಗಿತ್ತು.

ರಿಷಭ್ ಮತ್ತು ಆತನ ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಪಂಕಜ್ ನೆಲದ ಮೇಲೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡರು. ಇನ್ನಿಬ್ಬರು ಆರೋಪಿಗಳನ್ನು ಮನೋಜ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ರಾಜಸ್ಥಾನದ ದೇವಾರ್ ಊರೇ ಕಳ್ಳರ ಅಡಗುತಾಣ, ಬಂಧಿಸಲು ಹೋದ ಪೊಲೀಸರ ಮೇಲೆ ನಡೆಯುತ್ತೆ ಅಟ್ಯಾಕ್!

ಸಿಕ್ಕಿಬೀಳುವ ಭಯದಿಂದ ರಿಷಬ್ ಮತ್ತು ಅವನ ಸ್ನೇಹಿತರು ಶವವನ್ನು ಹತ್ತಿರದ ಕಾಡಿನಲ್ಲಿ ಬಚ್ಚಿಟ್ಟರು. ನವೆಂಬರ್ 18 ರಂದು ಘಟನೆ ನಡೆದ ಒಂದು ದಿನದ ನಂತರ ಪೊಲೀಸರು ಶವವನ್ನು ವಶಪಡಿಸಿಕೊಂಡರು. ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:33 am, Thu, 7 December 23