ಕೇರಳ: ಜ್ವರ ಎಂದು ಬಂದ 45 ವರ್ಷದ ಮಹಿಳೆಗೆ ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ಕೇರಳದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಇದೀಗ ಈ ಬಗ್ಗೆ ತಪ್ಪಾದ ಚುಚ್ಚುಮದ್ದನ್ನು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮೃತರನ್ನು ಕೋಯಿಕ್ಕೋಡ್‌ನ ಕೂಡರಂಜಿ ನಿವಾಸಿ ಸಿಂಧು ಎಂದು ಗುರುತಿಸಲಾಗಿದೆ. ನರ್ಸ್ ತಪ್ಪು ಇಂಜೆಕ್ಷನ್ ನೀಡುವುದರಿಂದ ಸಿಂಧು ಸಾವನ್ನಪ್ಪಿದ್ದಾಳೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಮೃತರ ಕುಟುಂಬ ಸದಸ್ಯರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಸಿಂಧು ಅವರಿಗೆ ಗುರುವಾರ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು (ಶುಕ್ರವಾರ) ಬೆಳಿಗ್ಗೆ ಆರೋಗ್ಯ ಸುಧಾರಿಸಿತ್ತು, ಆದರೆ ನರ್ಸ್ ತಪ್ಪಾಗಿ ಚುಚ್ಚುಮದ್ದನ್ನು ನೀಡಿದ ನಂತರ ಅವರು ಆರೋಗ್ಯ ಮತ್ತಷ್ಟು ಹದಗೆಡಲು ಪ್ರಾರಂಭವಾಗಿತ್ತು.
ಇದನ್ನು ಓದಿ: Crime News: ಗುರುಗ್ರಾಮದಲ್ಲಿ ಭೀಕರ ಅಪಘಾತ; ಬಸ್ ಚಾಲಕ ಸಾವು, 15 ಜನರಿಗೆ ಗಾಯ
ಅವರ ಗಂಡ ರೇಘು ಅವರು ಹೇಳಿರುವಂತೆ ಇದು ನರ್ಸ್‌ನ ತಪ್ಪು ಚುಚ್ಚುಮದ್ದಿನ ನಂತರ ಅವಳು ಬಲಹೀನಳಾದಳು, ಅವಳು ನನ್ನ ಮಡಿಲಲ್ಲಿ ಮಲಗಿದ್ದಳು, ಆದರೆ ಕೆಲವು ಹೊತ್ತಿನ ನಂತರ ಕೊನೆಯುಸಿರೆಳೆದಿದ್ದಾಳೆ. ಚುಚ್ಚುಮದ್ದಿನ ನೀಡದ ನಂತರ ಮನೆ ಬಂದ ನಂತರ ಅವಳ ಈ ಪರಿಸ್ಥಿತಿಯನ್ನು ನೋಡಿ ನಾನು ನರ್ಸ್‌ಗೆ ಕರೆ ಮಾಡಿದಾಗ, ಯಾವುದೇ ತೊಂದರೆ ಆಗುವುದಿಲ್ಲ ಅವರ ಇದೊಂದು ಸಾಮಾನ್ಯ ಚುಚ್ಚುಮದ್ದು ಎಂದು ಹೇಳಿದ್ದಾರೆ.
ನಿನ್ನೆ ಬಳಸಿದ ಔಷಧವನ್ನು ನನ್ನ ಮಗಳಿಗೆ ಇಂದು ಬಳಸಿದರೆ ಎಂದು ಕುಟುಂಬದವರು ಹೇಳಿಕೊಂಡಿದ್ದರೂ, ಆದರೆ ಈ ಆರೋಪವನ್ನು ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಆಕೆಯ ಹಠಾತ್ ಸಾವಿನ ಹಿಂದಿನ ಸ್ಪಷ್ಟವಾದ ಕಾರಣ ಇನ್ನೂ ತಿಳಿದಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೃತರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಘಟನೆಯ ಕುರಿತು ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ.