ಯುಕೆಜಿ ವಿದ್ಯಾರ್ಥಿ ಫೇಲ್ ಪ್ರಕರಣ, ಟೀಚ್ ಮೆಟ್ ಆ್ಯಪ್ ನಿಷೇಧಕ್ಕೆ ಸೂಚನೆ

Bengaluru News: ಯುಕೆಜಿ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿದ ಪ್ರಕರಣ ಸಂಬಂಧ ಟೀಚ್ ಮೆಟ್ ಆ್ಯಪ್ ನಿಷೇಧಕ್ಕೆ ಶಿಕ್ಷಣ ಸಂಯೋಜಕ ದತ್ತಗುರು ಸೂಚನೆ ನೀಡಿದ್ದಾರೆ.

ಯುಕೆಜಿ ವಿದ್ಯಾರ್ಥಿ ಫೇಲ್ ಪ್ರಕರಣ, ಟೀಚ್ ಮೆಟ್ ಆ್ಯಪ್ ನಿಷೇಧಕ್ಕೆ ಸೂಚನೆ
ಪ್ರಾತಿನಿಧಿಕ ಚಿತ್ರ
Edited By:

Updated on: Feb 09, 2023 | 3:34 PM

ಅನೇಕಲ್: ಯುಕೆಜಿ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿದ ಪ್ರಕರಣ ಸಂಬಂಧ ಟೀಚ್ ಮೆಟ್ ಆ್ಯಪ್ (Teach Met App) ನಿಷೇಧಕ್ಕೆ ಶಿಕ್ಷಣ ಸಂಯೋಜಕ ದತ್ತಗುರು ಸೂಚನೆ ನೀಡಿದ್ದಾರೆ. ಟೀಚ್ ಮೆಟ್ ಆ್ಯಪ್​ನಲ್ಲಿ 35 ಕ್ಕಿಂತ ಕಡಿಮೆ‌ ಅಂಕ ಪಡೆದರೆ ಅಂತಹ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲಾಗುತ್ತದೆ. ಅದರಂತೆ ಆನೇಕಲ್‌ (Anekal) ತಾಲೂಕಿನ ದೀಪಹಳ್ಳಿಯಲ್ಲಿರುವ ಸೇ.ಜೋಸೆಫ್ ಅಕಾಡಮಿ ‌ಶಾಲೆಯ ಓರ್ವ ವಿದ್ಯಾರ್ಥಿಯನ್ನು ಫೈಲ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆಂತಕ ಉಂಟುಮಾಡಿದೆ. ಇದೇ ಕಾರಣಕ್ಕೆ ಆ್ಯಪ್ ನಿಷೇಧಕ್ಕೆ ಶಿಕ್ಷಣ ಸಂಯೋಜಕರು ಸೂಚನೆ ನೀಡಿದ್ದಾರೆ.

ಓರ್ವ ವಿದ್ಯಾರ್ಥಿನಿಯನ್ನು 35ಕ್ಕಿಂತ ಕಡಿಮೆ ಅಂಕ ಪಡೆದಿರುವುದಕ್ಕೆ ಫೈಲ್ ಮಾಡಿರುವುದು ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪೋಷಕರನ್ನು ಚಿಂತೆಗೀಡು ಮಾಡಿದೆ. ಆ್ಯಪ್​ನಲ್ಲಿರುವ ದೋಷದಿಂದಾಗಿ ಪೋಷಕರು ಗೊಂದಲಕ್ಕೀಡಾಗಿದ್ದಾರೆ. ಈ ವಿಚಾರವಾಗಿ ಶಿಕ್ಷಣ ಸಂಯೋಜಕರು ಆ್ಯಪ್​ಗೆ ನೋಟೀಸ್ ಜಾರಿ ಮಾಡಿದ್ದು, ಸ್ಪಷ್ಟೀಕರಣ ನೀಡುವಂತೆ ತಿಳಿಸಿದ್ದರು.

ಇದನ್ನೂ ಓದಿ: Ethical Hacking Career: ಎಥಿಕಲ್ ಹ್ಯಾಕರ್ ಆಗುವುದು ಹೇಗೆ? ಉದ್ಯೋಗಾವಕಾಶ ಮತ್ತು ಟಾಪ್ ಇನ್​ಸ್ಟಿಟ್ಯೂಟ್​​ಗಳ ಮಾಹಿತಿ

ಇನ್ನು, ನೋಟೀಸ್​ಗೆ ಸ್ಪಷ್ಟೀಕರಣ ನೀಡಿದ ಆ್ಯಪ್, ವಿದ್ಯಾರ್ಥಿನಿಯನ್ನು ಫೇಲ್ ಮಾಡಿಲ್ಲ. ಕಿರು ಪರೀಕ್ಷೆ ರೈಮ್ಸ್ ವಿಷಯದಲ್ಲಿ ಕಡಿಮೆ ಅಂಕ ಬಂದಿದೆ. ಈ ಬಗ್ಗೆ ಪೋಗ್ರೆಸ್ ರಿಪೋರ್ಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಇದನ್ನು ಪೋಷಕರ ಗಮನಕ್ಕೂ ತರಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದೆ. ಈ ಬಗ್ಗೆ ದಾಖಲೆಗಳನ್ನು ಸಹ ನೀಡಿದ್ದಾರೆ. ಈ ಎಲ್ಲದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ದತ್ತಗುರು ಹೇಳಿದ್ದಾರೆ.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Thu, 9 February 23