Sign In

By signing in or creating an account, you agree with Associated Broadcasting Company's Terms & Conditions and Privacy Policy.

CUET 2023 Dates: ಸಿಯುಇಟಿ ಪರೀಕ್ಷಾ ದಿನಾಂಕ 2023 ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಯುಇಟಿ 2023 ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ. ಸಿಯುಇಟಿ 2023 ಪರೀಕ್ಷೆಗಳು ಮೇ 21 ರಿಂದ 31, 2023 ರವರೆಗೆ ನಡೆಯಲಿದೆ. ಸಿಯುಇಟಿ 2023 ಪರೀಕ್ಷೆಗೆ cuet.samarth.ac.in ನಲ್ಲಿಅರ್ಜಿ ಸಲ್ಲಿಸಬಹುದು. ಅತೀ ಶೀಘ್ರದಲ್ಲಿ ಅರ್ಜಿಗಳು ಅಧಿಕೃತ ವೆಬ್ಸೈಟ್'ನಲ್ಲಿ ಬಿಡುಗಡೆಯಾಗಲಿದೆ. ನಂತರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಸಿಯುಇಟಿ ಫಲಿತಾಂಶವು ಜೂನ್ 2023 ರ ಮೂರನೇ ವಾರದಲ್ಲಿ ಹೊರಬರುತ್ತದೆ.

CUET 2023 Dates: ಸಿಯುಇಟಿ ಪರೀಕ್ಷಾ ದಿನಾಂಕ 2023 ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ
ಸಿಯುಇಟಿ ಪರೀಕ್ಷಾ ದಿನಾಂಕ 2023
Follow us
TV9 Web
| Updated By: Digi Tech Desk

Updated on: Feb 09, 2023 | 11:50 AM

ಸಿಯುಇಟಿ ಪರೀಕ್ಷಾ ದಿನಾಂಕ 2023: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (NTA) ಕಾಮನ್ ಯೂನಿವರ್ಸಿಟಿ ಎಂಟ್ರನ್ಸ್ ಟೆಸ್ (CUET) ಪರೀಕ್ಷೆ ಮೇ 21 ರಿಂದ 31, 2023 ರವರೆಗೆ ನಡೆಯಲಿದೆ ಎಂದು ತನ್ನ ಅಧಿಕೃತ ವೆಬ್ಸೈಟ್ cuet.samarth.ac.in ನಲ್ಲಿ ಪ್ರಕಟಿಸಿದೆ. ಸೆಂಟ್ರಲ್‌ ಯೂನಿವರ್ಸಿಟಿಗಳ ಪ್ರವೇಶಕ್ಕಾಗಿ ನಡೆಸುವುವ ಈ ಸಿಯುಇಟಿ ಪರೀಕ್ಷೆಯನ್ನು ಕಳೆದ ವರ್ಷ ಪರಿಚಯಿಸಲಾಗಿತ್ತು. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಕೋರ್ಸ್ಗಳ ಪ್ರವೇಶಕ್ಕೆ ಈ ಪರೀಕ್ಷೆ ಕಡ್ಡಾಯವಾಗಿದೆ.

ಸಿಯುಇಟಿ 2023 ಭಾಗವಹಿಸುವ ಸಂಸ್ಥೆಗಳು:

ಪ್ರಸ್ತುತ, 44 ಕೇಂದ್ರೀಯ ಮತ್ತು 28 ಇತರ ವಿಶ್ವವಿದ್ಯಾನಿಲಯಗಳು ತಮ್ಮ ಪದವಿಪೂರ್ವ (UG), ಸ್ನಾತಕೋತ್ತರ ಪದವಿ(PG) ಮತ್ತು ಸಮಗ್ರ ಕೋರ್ಸ್‌ಗಳಲ್ಲಿ ಅಡ್ಮಿಶನ್ ಮಾಡೆಯಲು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಎಂಬ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಕಡ್ಡಾಯ ಮಾಡಿದೆ. ಸಿಯುಇಟಿ ಪರೀಕ್ಷೆ ಸಂಸತ್ತಿನ ಕಾಯ್ದೆಯಡಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳಿಗೆ ಕಡ್ಡಾಯ ಪ್ರವೇಶ ಪರೀಕ್ಷೆಯಾಗಿದೆ. ಇದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. 2009 ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆಯನ್ನು ಅಂಗೀಕರಿಸಲಾಯಿತು. ಎಲ್ಲಾ ರಾಜ್ಯಗಳಿಗೆ ಸಮಾನ ಅವಕಾಶ ನೀಡಲು ಈಗಾಗಲೇ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳ ಜೊತೆಗೆ 16 ಕೇಂದ್ರೀಯ ವಿಶ್ವವಿದ್ಯಾಲಯಗಳ ರಚನೆಗೆ ದಾರಿ ಮಾಡಿಕೊಟ್ಟಿತು.

  1.  ದೆಹಲಿ ವಿಶ್ವವಿದ್ಯಾಲಯ
  2.  ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ
  3. ಅಸ್ಸಾಂ ವಿಶ್ವವಿದ್ಯಾಲಯ, ಸಿಲ್ಚಾರ್ಆಂ
  4. ಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯ
  5. ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯ
  6. ಹರಿಯಾಣ ಕೇಂದ್ರೀಯ ವಿಶ್ವವಿದ್ಯಾಲಯ
  7. ಜಮ್ಮು ಕೇಂದ್ರೀಯ ವಿಶ್ವವಿದ್ಯಾಲಯ
  8. ಜಾರ್ಖಂಡ್‌ನ ಕೇಂದ್ರೀಯ ವಿಶ್ವವಿದ್ಯಾಲಯ
  9. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
  10. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ
  11. ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ
  12. ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯ
  13. ದಕ್ಷಿಣ ಬಿಹಾರ ಕೇಂದ್ರೀಯ ವಿಶ್ವವಿದ್ಯಾಲಯ
  14. ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಯುಇಟಿ 2023 ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ. ಸಿಯುಇಟಿ 2023 ಪರೀಕ್ಷೆಗಳು ಮೇ 21 ರಿಂದ 31, 2023 ರವರೆಗೆ ನಡೆಯಲಿದೆ. ಸಿಯುಇಟಿ 2023 ಪರೀಕ್ಷೆಗೆ cuet.samarth.ac.in ನಲ್ಲಿಅರ್ಜಿ ಸಲ್ಲಿಸಬಹುದು. ಅತೀ ಶೀಘ್ರದಲ್ಲಿ ಅರ್ಜಿಗಳು ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆಯಾಗಲಿದೆ. ನಂತರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಸಿಯುಇಟಿ ಫಲಿತಾಂಶವು ಜೂನ್ 2023 ರ ಮೂರನೇ ವಾರದಲ್ಲಿ ಹೊರಬರುತ್ತದೆ.

ಸಿಯುಇಟಿ 2023 ಪರೀಕ್ಷಾ ಮಾದರಿ – UGQP01

ಈ ಪ್ರವೇಶ ಪರೀಕ್ಷೆಗೆ ತಯಾರಾಗಲು ಬಯಸುವ ಎಲ್ಲಾ ಆಕಾಂಕ್ಷಿಗಳು ಸಂಪೂರ್ಣ ಪರೀಕ್ಷೆಯ ಮಾದರಿಯನ್ನು ಪರಿಶೀಲಿಸುವುದು ಉತ್ತಮ. ಸಿಯುಇಟಿ 2023 ಪ್ರವೇಶ ಪರೀಕ್ಷೆ ಆನ್‌ಲೈನ್ ಮೋಡ್‌ನಲ್ಲಿ ನಡೆಯುತ್ತದೆ. ಪರೀಕ್ಷೆಯ ವಿಧಾನ, ಪರೀಕ್ಷೆಯ ಅವಧಿ, ಗುರುತು ಮಾಡುವ ರೀತಿ, ಒಟ್ಟು ಪ್ರಶ್ನೆಗಳ ಸಂಖ್ಯೆ ಮತ್ತು ಪ್ರವೇಶ ಪರೀಕ್ಷೆಯ ಕುರಿತು ಸಂಪೂರ್ಣ ವಿವರಗಳು ಕೆಳಗಿನಂತಿರುತ್ತದೆ.

ಗರಿಷ್ಠ ಅಂಕ– 100

ಪ್ರಶ್ನೆಗಳ ಒಟ್ಟು ಸಂಖ್ಯೆ-100

ಪ್ರಶ್ನೆಗಳ ವಿಧಾನಬಹು ಆಯ್ಕೆಯ ಪ್ರಶ್ನೆ (MCQ)

ಅವಧಿ– 2 ಗಂಟೆಗಳು

ವಿಷಯಗಳು

ಭಾಗ ಎ ಸಂಖ್ಯಾ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಇಂಗ್ಲಿಷ್‌ನಿಂದ 25 MCQ ಗಳು

ಭಾಗ ಬಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ (25+25 MCQs)

ಪರೀಕ್ಷಾ ಮಾಧ್ಯಮ– 13 ಭಾಷೆ

ಪರೀಕ್ಷಾ ಕೇಂದ್ರಗಳು– ಭಾರತದಲ್ಲಿ 489, ಭಾರತದ ಹೊರಗೆ 9

ಭಾಗ III ಮತ್ತು IV ಗಣಿತ ಮತ್ತು ಜೀವಶಾಸ್ತ್ರ. ಒಂದು ವಿಭಾಗವನ್ನು ಮಾತ್ರ ಪ್ರಯತ್ನಿಸಬೇಕು (25 MCQಗಳು)

ಇದನ್ನೂ ಓದಿ: ಕೆಲವೇ ವಾರಗಳಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ; ನೀವು ಈ ರೀತಿ ಓದಿದರೆ ಒಳ್ಳೆ ಅಂಕ ಗ್ಯಾರಂಟಿ!

ಸಿಯುಇಟಿ 2023 ಪರೀಕ್ಷಾ ಮಾದರಿ – UGQP02

ಗರಿಷ್ಠ ಅಂಕ– 100

ಪ್ರಶ್ನೆಗಳ ಒಟ್ಟು ಸಂಖ್ಯೆ-100

ಪ್ರಶ್ನೆಗಳ ವಿಧಾನಬಹು ಆಯ್ಕೆಯ ಪ್ರಶ್ನೆ (MCQ)

ಅವಧಿ– 2 ಗಂಟೆಗಳು

ವಿಷಯಗಳು: ಇಂಗ್ಲಿಷ್, ಅನಲಿಟಿಕಲ್ ಸ್ಕಿಲ್ಸ್, ನ್ಯೂಮೆರಿಕಾಲ್ ಆಪ್ಟಿಟ್ಯೂಡ್/ ಡೇಟಾ ವ್ಯಾಖ್ಯಾನ, ಜನರಲ್ ಆಪ್ಟಿಟ್ಯೂಡ್, ಸಾಮಾನ್ಯ ಜ್ಞಾನ, ತಾರ್ಕಿಕತೆ

ಪರೀಕ್ಷಾ ಮಾಧ್ಯಮ– 13 ಭಾಷೆ

ಪರೀಕ್ಷಾ ಕೇಂದ್ರಗಳು– ಭಾರತದಲ್ಲಿ 489, ಭಾರತದ ಹೊರಗೆ 9

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ